ಕರ್ನಾಟಕ

karnataka

ಎಸ್​ಎಸ್​ಎಲ್​ಸಿ ಟಾಪರ್‌ಗಳಿಗೆ ಸ್ವಂತ ಹಣದಲ್ಲಿ ಲ್ಯಾಪ್​ಟಾಪ್​​​ ವಿತರಿಸಿದ ಸಚಿವ ಸುಧಾಕರ್​

By

Published : Aug 15, 2020, 5:16 PM IST

ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ವಾಂತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಬಾರಿ ಎಸ್​ಎಸ್​ಎಲ್​​ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಸನ್ಮಾನಿಸಿದರು.

A Minister of Honor for Students
ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಸಚಿವ

ಚಿಕ್ಕಬಳ್ಳಾಪುರ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಹಣದಲ್ಲಿ ಲ್ಯಾಪ್​​ಟಾಪ್ ವಿತರಿಸಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.

ಕೊರೊನಾ ವಾರಿಯರ್ಸ್ ಆದ ಪೊಲೀಸರು, ವೈದ್ಯರು, ನರ್ಸ್​​ ಮತ್ತು ಆ್ಯಂಬುಲೆನ್ಸ್​​ ಸಿಬ್ಬಂದಿಗೆ ಇದೇ ವೇಳೆ ಸನ್ಮಾನ ಮಾಡಲಾಯಿತು. ರಾಷ್ಟ್ರಪತಿ ಪದಕ ಗೌರವಕ್ಕೆ ಪಾತ್ರರಾದ ಎಎಸ್ಐ ನಂಜುಂಡಯ್ಯ ಅವರಿಗೆ ಸುಧಾಕರ್, ಸಂಸದ ಬಚ್ಚೇಗೌಡ, ಎಂಎಲ್​​ಸಿ ವೈ.ಎ.ನಾರಾಯಣ ಸ್ವಾಮಿ, ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ‌ಫೌಝೀಯಾ ತರುನಮ್, ಎಸ್ಪಿ ಮಿಥುನ್ ಕುಮಾರ್ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಸಚಿವ

ನಂತರ ಕಂದವಾರ ಕೆರೆಯಲ್ಲಿ ನಿರ್ಮಿಸಿದ ಎರಡು ಪ್ಲೋಟಿಂಗ್ ಕಾರ್ಯಕ್ರಮ ಹಾಗೂ ಉನ್ನತೀಕರಿಸಿದ ನೂತನ ಅಂಗನವಾಡಿ ಕೇಂದ್ರ, ತ್ಯಾಜ್ಯ ವಿಲೆವಾರಿ ಘಟಕದ ಉದ್ಘಾಟನೆ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.

ABOUT THE AUTHOR

...view details