ಕರ್ನಾಟಕ

karnataka

ಗರುಡಾದ್ರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಬಾರದ ಗರುಡ: ಭಕ್ತರಲ್ಲಿ ನಿರಾಸೆ

By

Published : Mar 30, 2021, 7:47 AM IST

ಸೋಮವಾರ ಹಮ್ಮಿಕೊಂಡಿದ್ದ ಗರುಡಾದ್ರಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಕೋವಿಡ್ ವೈರಸ್ ಸೋಂಕಿನ ಮುನ್ನೆಚ್ಚರಿಕೆ ಕ್ರಮಗಳ ನಡುವೆ ಈ ಭಾರಿ ಸಂಪ್ರದಾಯವಾಗಿ ಪೂಜಾ ಕೈಂಕರ್ಯಗಳು ನಡೆದವು.

Garudadri Sri Lakshmi Narasimha Swamy Brahma Rathotsava
ಗರುಡಾದ್ರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ

ಬಾಗೇಪಲ್ಲಿ : ತಾಲೂಕಿನ ಮಿಟ್ಟೆಮರಿ ಗರುಡಾದ್ರಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪ್ರದಾಯಂತೆ ಪೂಜಾ ವಿಧಾನಗಳೊಂದಿಗೆ ಸರಳವಾಗಿ ನಡೆಯಿತು.

ಸೋಮವಾರ ಹಮ್ಮಿಕೊಂಡಿದ್ದ ಗರುಡಾದ್ರಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಕೋವಿಡ್ ವೈರಸ್ ಸೋಂಕಿನ ಮುನ್ನಚ್ಚರಿಕೆ ಕ್ರಮಗಳ ನಡುವೆ ಈ ಭಾರಿ ಸಂಪ್ರದಾಯವಾಗಿ ಪೂಜಾ ಕೈಂಕರ್ಯಗಳು ನಡೆದವು. ಕೋವಿಡ್-19 ವೈರಸ್ ಸೋಂಕು ಹರಡದಂತೆ ಸರ್ಕಾರ 500 ಮಂದಿಗೆ ಹೆಚ್ಚು ಜನ ಸೇರದಂತೆ ಜಾತ್ರೆಗಳಿಗೆ ನಿರ್ಬಂಧ ಹೇರಲಾಗಿದೆ. ಸರ್ಕಾರದ ಆದೇಶದಂತೆ ತಹಶೀಲ್ದಾರ್ ಡಿ.ಎ.ದಿವಾಕರ್‌ ಜಾತ್ರೆ ರದ್ದುಗೊಳಿಸಿ ಆದೇಶ ಮಾಡಿದ್ದರು. ಆದರೆ, ದೇವಾಲಯದಲ್ಲಿ ಹಾಗೂ ರಥೋತ್ಸವದ ಬಳಿ ಅರ್ಚಕರು ವಿವಿಧ ಪೂಜಾ ಕೈಂಕರ್ಯಗಳನ್ನು ಪೂರೈಸಿದರು.

ಗರುಡಾದ್ರಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಖ್ಯದ್ವಾರದಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವರಿಗೆ ಹಾಗೂ ಒಳ - ಹೊರಾಂಗಣದಲ್ಲಿ ವಿಶೇಷ ಹೂವಿನ ಹಾಗೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು, ಕೋವಿಡ್-19 ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಭಕ್ತರಿಗೆ ದೇವಾಲಯದ ಒಳಗೆ ಪ್ರವೇಶ ಇರಲಿಲ್ಲ. ದೇವಾಲಯದ ಮುಂದೆ ಇರುವ ದೇವರ ವಿಗ್ರಹಗಳಿಗೆ ನೈವೇದ್ಯ ಸಮರ್ಪಿಸಿ, ಪೂಜೆ ಮಾಡುತ್ತಿದ್ದರು.

ಬ್ರಹ್ಮರೋಥೈವದ ಮುಂದೆ ಸಂಪ್ರದಾಯದಂತೆ ಹೋಮ - ಹವನಗಳು, ಪೂಜಾ ಕೈಂಕರ್ಯಗಳು ನಡೆಯಿತು. ತಹಶೀಲ್ದಾರ್ ಡಿ.ಎ.ದಿವಾಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ವಿಶೇಷ ಪೂಜೆ ಸಲ್ಲಿಸಿದರು.

ಓದಿ : ಬಿಎಸ್​ಎಫ್​ಗೆ ಆಯ್ಕೆ: ದೇಶ ಸೇವೆಗೆ ಹೊರಟ ಗ್ರಾಮೀಣ ಯುವತಿಯರು

ಬಾರದ ಗರುಡ ಪಕ್ಷಿ ಭಕ್ತರಲ್ಲಿ ನಿರಾಸೆ :

ತಾಲೂಕಿನ ಮೇರುವಪಲ್ಲಿ ಗ್ರಾಮದ ಆಂಜನೇಯಸ್ವಾಮಿ ದೇವರ ಮೆರವಣಿಗೆ ಮಿಟ್ಟೇಮರಿಗೆ ಬಂದ ನಂತರ ಗರುಡಾದ್ರಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವ ಆರಂಭವಾಗುತ್ತಿತ್ತು. ಈ ಭಾರಿ ದೇವರ ಮೆರವಣಿಗೆ ಆಗಲಿಲ್ಲ. ಈ ಭಾರಿ ಸರಳವಾದ ಬ್ರಹ್ಮರಥೋತ್ಸವದ ಸುತ್ತಲೂ ಗರುಡಪಕ್ಷಿ ಪ್ರದಕ್ಷಿಣೆ ಹಾಕಿಲ್ಲ, ಇದು ಭಕ್ತರಲ್ಲಿ ನಿರಾಸೆಗೆ ಕಾರಣವಾಯಿತು.

TAGGED:

ABOUT THE AUTHOR

...view details