ಕರ್ನಾಟಕ

karnataka

ಬಸ್​ ಸೌಕರ್ಯ ಕಲ್ಪಿಸಿಕೊಡುವಂತೆ ಮಾಜಿ ಮುಖ್ಯಮಂತ್ರಿಗೆ ಮಕ್ಕಳ ಮನವಿ

By

Published : Nov 26, 2022, 2:30 PM IST

Updated : Nov 26, 2022, 3:00 PM IST

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಟೋ ಏರಿ ಹೊರಟಿದ್ದ ಶಾಲಾ ಮಕ್ಕಳನ್ನು ತಡೆದು ವಿಚಾರಿಸಿದರು.

Children Appeal To Former CM HDK
Children Appeal To Former CM HDK

ಚಿಕ್ಕಬಳ್ಳಾಪುರ:ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಪಂಚರತ್ನ ಯಾತ್ರೆ ವೇಳೆ ಶಾಲೆಗೆ ಹೋಗಲು ಸೂಕ್ತ ಬಸ್ ಸೌಕರ್ಯ ಕಲ್ಪಿಸಿಕೊಡುವಂತೆ ಶಾಲಾ ಮಕ್ಕಳು ಮನವಿ ಮಾಡಿಕೊಂಡ ಘಟನೆ ಬಾಗೇಪಲ್ಲಿ ಗೌರಿಬಿದನೂರು ಮಾರ್ಗದ ಎಲ್ಲೋಡು ಅರಣ್ಯ ಪ್ರದೇಶ ಬಳಿ ನಡೆಯಿತು.

ರಥಯಾತ್ರೆ ಕಾರ್ಯಕ್ರಮದ ನಿಮಿತ್ತ ಬಾಗೇಪಲ್ಲಿ ಕ್ಷೇತ್ರದಿಂದ ಗೌರಿಬಿದನೂರು ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಶಾಲೆ ಬಿಟ್ಟ ನಂತರ ಅಪೇ ಲೋಡ್ ಗಾಡಿಯಲ್ಲಿ ಹೊರಟಿದ್ದ ವಿದ್ಯಾರ್ಥಿಗಳನ್ನ ನೋಡಿ ಮಾತನಾಡಿಸಿದ ಹೆಚ್​ ಡಿ ಕುಮಾರಸ್ವಾಮಿ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.

ಮಾಜಿ ಮುಖ್ಯಮಂತ್ರಿಗೆ ಮಕ್ಕಳ ಮನವಿ

ಇದೇ ವೇಳೆ ಶಾಲೆಗೆ ಹೋಗೋಕೆ ಬಸ್ ಇಲ್ಲ ಅಂತ ಮಕ್ಕಳು ತಮ್ಮ ಅಳಲು ಹೇಳಿಕೊಂಡಿದ್ದಾರೆ. ಪ್ರತಿನಿತ್ಯ ಶಾಲೆಗೆ ನಡೆದುಕೊಂಡು ಹೋಗ್ತೀವಿ. ಬೆಳಗ್ಗೆ ಶಾಲೆಗೆ ಒಂದು ಸರ್ಕಾರಿ ಬಸ್ ಇರುತ್ತೆ. ಅದು ಹೋದ್ರೆ ಮತ್ತೆ ಯಾವುದೇ ಬಸ್ ಸಿಗಲ್ಲ ಎಂದು ದೂರು ನೀಡಿದರು.

ಮಕ್ಕಳ‌ ಸಮಸ್ಯೆಯನ್ನು ಆಲಿಸಿದ ಕುಮಾರಸ್ವಾಮಿ, ಕೂಡಲೇ ಬಸ್ ಡಿಸಿಗೆ ಕರೆ ಮಾಡಿ ಬಾಗೇಪಲ್ಲಿ-ಗೌರಿಬಿದನೂರು ಮಾರ್ಗದಲ್ಲಿ ಮತ್ತೊಂದು ಒಂದು ಬಸ್ ಬಿಟ್ರೆ ಶಾಲೆ ಮಕ್ಕಳಿಗೆ ಅನುಕೂಲ ಆಗಲಿದೆ. 9 ಗಂಟೆಗೆ ಸ್ಕೂಲ್ ಇದೆ. ಈ ಮಾರ್ಗದಲ್ಲಿ ಬಸ್​ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದರು. ಬಳಿಕ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಇದನ್ನೂ ಓದಿ:ಕಿತ್ತೂರಲ್ಲಿ ಎರಡು ಲಕ್ಷ ಲಂಚ ಸ್ವೀಕರಿಸಿದ ಪ್ರಕರಣ; ಹಿಂಡಲಗಾ ಜೈಲು‌ ಸೇರಿದ ತಹಶಿಲ್ದಾರ್

Last Updated :Nov 26, 2022, 3:00 PM IST

ABOUT THE AUTHOR

...view details