ಕರ್ನಾಟಕ

karnataka

ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ನವವಿವಾಹಿತೆ ಒಂದೇ ತಿಂಗಳಲ್ಲಿ ಕಿಡ್ನ್ಯಾಪ್​

By

Published : Sep 11, 2020, 10:48 PM IST

ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ಮಾರ್ಗದ ಜಾತವಾರಹೊಸಹಳ್ಳಿ ಬಳಿ ಒಂದು ಕಾರು, ಆರು ಬೈಕ್ ಗಳಲ್ಲಿ ಬಂದು ನವ ವಿವಾಹಿತೆಯನ್ನು ಕಿಡ್ನಾಪ್ ಮಾಡಿದ ಘಟನೆ ನಡೆದಿದೆ.

Chikkaballapur: newly married woman kidnap
ಚಿಕ್ಕಬಳ್ಳಾಪುರ: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ನವವಿವಾಹಿತೆ ಕಿಡ್ನಾಪ್

ಚಿಕ್ಕಬಳ್ಳಾಪುರ: ಒಂದು ಕಾರು, ಆರು ಬೈಕ್ ಗಳಲ್ಲಿ ಬಂದು ನವ ವಿವಾಹಿತೆಯನ್ನು ಕಿಡ್ನ್ಯಾಪ್​ ಮಾಡಿದ ಘಟನೆ ಶಿಡ್ಲಘಟ್ಟ - ಚಿಕ್ಕಬಳ್ಳಾಪುರ ಮಾರ್ಗದ ಜಾತವಾರಹೊಸಹಳ್ಳಿ ಬಳಿ ನಡೆದಿದೆ.

ಶಿಡ್ಲಘಟ್ಟ ತಾಲೂಕಿನ ಚೌಡರೆಡ್ಡಿಹಳ್ಳಿ ನಿವಾಸಿ ರಂಜಿತಾ ಕಿಡ್ನ್ಯಾಪ್​ ಆದ ನವವಿವಾಹಿತೆ ಎಂದು ತಿಳಿದು ಬಂದಿದೆ. ಆಕೆ ಪೋಷಕರ ವಿರೋಧದ ನಡುವೆಯೂ ಮರಿಹಳ್ಳಿ ಗ್ರಾಮದ ವೆಂಕಟೇಶ್ ನನ್ನು ಪ್ರಿತಿಸಿ ಕಳೆದ ಒಂದು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದಳು. ಇಂದು ಪತಿ‌ ಜೊತೆ ಚಿಕ್ಕಬಳ್ಳಾಫುರಕ್ಕೆ ಆಗಮಿಸುತ್ತಿದ್ದಾಗ ಒಂದು ಕಾರು ಹಾಗೂ ಆರು ಬೈಕ್‌ಗಳಲ್ಲಿ‌ ಬಂದ ದುಷ್ಕರ್ಮಿಗಳು ರಂಜಿತಾಳನ್ನು ಅಪಹರಣ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.

ಅಂತರ್ಜಾತಿ ಎನ್ನುವ ಕಾರಣ ಇಬ್ಬರ ಮನೆಯಲ್ಲಿಯೂ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ನಂತರ ಗ್ರಾಮದ ಮುಖಂಡರು ಸೇರಿ ಎರಡು ಕುಟುಂಬಗಳ ನ್ಯಾಯ ಪಂಚಾಯತಿಯನ್ನು ಮಾಡಿದ್ದರು. ಇದೇ ವಿಷಯವಾಗಿ ರಂಜಿತಾ ರಕ್ಷಣೆ ಕೋರಿ ಜಿಲ್ಲಾವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತಾಳ ಕುಟುಂಬಸ್ಥರೇ ಕಿಡ್ನಾಪ್ ಮಾಡಿರುವ ಶಂಕೆ ಕೇಳಿ ಬರುತ್ತಿದೆ.

ABOUT THE AUTHOR

...view details