ಕರ್ನಾಟಕ

karnataka

ಸಚಿವರ ಕೈವಾಡದಿಂದಲೇ ಸ್ಫೋಟ ನಡೆದಿದೆ: ಕರ್ನಾಟಕ ರಾಷ್ಟ್ರ ಸಮಿತಿ ಗಂಭೀರ ಆರೋಪ

By

Published : Feb 25, 2021, 4:45 PM IST

ಇಂದು ಸಹ ಪಕ್ಷದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಇನ್ನೂ ಸಹ ಮೃತರ ಅವಶೇಷಗಳು ಪತ್ತೆಯಾಗಿವೆ. ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದರೂ ಯಾವುದೇ ಪ್ರಯೋಜನವಿಲ್ಲ. ಅಕ್ರಮವಾಗಿ ಸ್ಫೋಟದ ವಸ್ತುಗಳು ಪೊಲೀಸರ ಹಾಗೂ ಅಧಿಕಾರಿಗಳ ಕೈವಾಡವಿಲ್ಲದೆ ಬರಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಆರೋಪಿಸಿದೆ.

chikballapura-jiletin-blast-case
ಕರ್ನಾಟಕ ರಾಷ್ಟ ಸಮಿತಿ ಗಂಭೀರ ಆರೋಪ

ಚಿಕ್ಕಬಳ್ಳಾಪುರ:ಸ್ಥಳೀಯ ಶಾಸಕನ‌ ಕುಮ್ಮಕ್ಕಿಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಸ್ಫೋಟದ ಹಿಂದೆ ಸಚಿವರ ಕೈವಾಡವಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಗಂಭೀರ ಆರೋಪ ಮಾಡಿದೆ.

ಕರ್ನಾಟಕ ರಾಷ್ಟ್ರ ಸಮಿತಿ ಸುದ್ದಿಗೋಷ್ಠಿ

ಓದಿ: ಆಲೂರು ಗ್ರಾಮದ ಕಲ್ಲು ಕ್ವಾರಿಯಲ್ಲಿ ಡಿಟೋನೇಟರ್ ಪತ್ತೆ: ಪ್ರಕರಣ ದಾಖಲು

ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಅಧ್ಯಕ್ಷ ರವಿಕೃಷ್ಣ ರೆಡ್ಡಿ, ಸ್ಥಳೀಯ ಶಾಸಕ ಹಾಗೂ ಉಸ್ತುವಾರಿ ಸಚಿವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕೆಲಸಗಳು ನಡೆಯುವುದಿಲ್ಲ. ಪ್ರತಿ ಅಕ್ರಮ-ಸಕ್ರಮ ಗಣಿಗಾರಿಕೆಯಲ್ಲಿ ಶಾಸಕರಿಗೆ, ಸಚಿವರಿಗೆ ಮಾಮೂಲಿ ಬರಲಿದೆ. ಸದ್ಯ ಸ್ಫೋಟದ ಹಿಂದೆ ಸಚಿವ ಹಾಗೂ ಉಸ್ತುವಾರಿ ಸಚಿವರುಗಳ ಕೈವಾಡವಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಇಂದು ಸಹ ಪಕ್ಷದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಇನ್ನೂ ಸಹ ಮೃತರ ಅವಶೇಷಗಳು ಪತ್ತೆಯಾಗಿವೆ. ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದರೂ ಯಾವುದೇ ಪ್ರಯೋಜನವಿಲ್ಲ. ಅಕ್ರಮವಾಗಿ ಸ್ಫೋಟದ ವಸ್ತುಗಳು ಪೊಲೀಸರ ಹಾಗೂ ಅಧಿಕಾರಿಗಳ ಕೈವಾಡವಿಲ್ಲದೆ ಬರಲು ಸಾಧ್ಯವಿಲ್ಲ.

ಕಳೆದ 7ರಂದು ತನಿಖೆ ನಡೆಸಿದರೆ ಇಷ್ಟೊಂದು ದೊಡ್ಡ ಮಟ್ಟದ ಸ್ಫೋಟಕ ವಸ್ತುಗಳ ಪತ್ತೆ ಮಾಡಲು ಏಕೆ ಸಾಧ್ಯವಿಲ್ಲ. ಇದರಲ್ಲಿ ಪೊಲೀಸ್, ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿಗಳ ಕೈವಾಡವಿದೆ ಎಂದು ಆರೋಪ ಮಾಡಿದ್ದಾರೆ.

ABOUT THE AUTHOR

...view details