ಕರ್ನಾಟಕ

karnataka

ವಿದ್ಯುತ್ ತಂತಿ ತುಳಿದು 12 ವರ್ಷದ ಬಾಲಕನ ದುರ್ಮರಣ

By

Published : Aug 22, 2020, 10:48 PM IST

ಗೆಳೆಯರೊಂದಿಗೆ ಗಣಪತಿ ಹಬ್ಬ ಆಚರಣೆ ಮಾಡಲು ತೆರಳಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಗ್ರಾಮವೊಂದರಲ್ಲಿ ಜರುಗಿದೆ.

boy died by electrical shock
ವಿದ್ಯುತ್ ತಂತಿ ತುಳಿದು 12 ವರ್ಷದ ಬಾಲಕ ದುರ್ಮರಣ

ಚಿಕ್ಕಬಳ್ಳಾಪುರ:ಸ್ನೇಹಿತರ ಜತೆ ಗಣಪತಿ ಹಬ್ಬ ಆಚರಣೆ ಮಾಡುತ್ತಿದ್ದ ಬಾಲಕ ತುಂಡಾಗಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಸಾಪುರ ಗ್ರಾಮದಲ್ಲಿ‌ ನಡೆದಿದೆ.

ಗ್ರಾಮದ ಉಮಾಶಂಕರ್‌ ರವರ ಮಗ ಮಹೇಶ್ (12) ಮೃತ ಬಾಲಕ ಎಂದು ತಿಳಿದು ಬಂದಿದೆ. ಇಂದು ಸಂಜೆ ಮಂಟಪಕ್ಕೆ ವಿದ್ಯುತ್ ಅಲಂಕಾರ ಮಾಡಲು ಹೋಗಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ಬಾಲಕ ತುಳಿದಿದ್ದಾನೆ.

ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದ ಗ್ರಾಮದಲ್ಲಿ ಈಗ ನೀರವ ಮೌನ ಆವರಿಸಿದೆ. ಮಗನನ್ನು ಕಳೆದುಕೊಂಡ ಹೆತ್ತವರ ರೋಧನ ಮುಗಿಲು ಮುಟ್ಟಿದೆ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಬಾಲಕನ ಶವವನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ABOUT THE AUTHOR

...view details