ಕರ್ನಾಟಕ

karnataka

ಉಪಚುನಾವಣೆಯ ನಂತರ ಜೆಡಿಎಸ್ ಕಣ್ಮರೆ: ಪುಟ್ಟಸ್ವಾಮಿ ಭವಿಷ್ಯ

By

Published : Nov 25, 2019, 2:54 PM IST

ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಜೆಡಿಎಸ್​ ಪಕ್ಷ ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಬಿಜೆಪಿ ನಾಯಕ ಪುಟ್ಟಸ್ವಾಮಿ ಹೇಳಿದ್ದಾರೆ.

ಪುಟ್ಟಸ್ವಾಮಿ

ಚಿಕ್ಕಬಳ್ಳಾಪುರ: ಉಪಚನಾವಣೆಯ ನಂತರ ಜೆಡಿಎಸ್ ಪಕ್ಷ ಸಂಪೂರ್ಣ ಕಣ್ಮಾರೆಯಾಗಲಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಹೆಚ್.ಡಿ.ದೇವೆಗೌಡ ಹಾಗೂ ಕುಮಾರಸ್ವಾಮಿ ಇಂದಿಗೂ ಸಹ ಕುಟುಂಬ ರಾಜಕಾರಣ ಬಿಟ್ಟಿಲ್ಲ. ಪಕ್ಷ ಹುಟ್ಟಿರುವುದೇ ಕುಟುಂಬ ರಾಜಕಾರಣ ಮಾಡುವುದಕ್ಕಾಗಿ, ಪಕ್ಷ ಇರುವುದೇ ಕುಟುಂಬ ರಾಜಕಾರಣ ಮಾಡುವ ಸಲುವಾಗಿ. ಕಳೆದ ಬಾರಿ ಅಧಿಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ, ರೇವಣ್ಣ ಅಘೋಷಿತ ಮುಖ್ಯಮಂತ್ರಿ , ತಮ್ಮಣ್ಣ, ಸಾ.ರಾ.ಮಹೇಶ್ ಮಂತ್ರಿ, ಜಾತ್ಯತೀತ ಪಕ್ಷಕ್ಕೆ ಅವಮಾನ ಮಾಡುವ ಪಕ್ಷವೇ ಜೆಡಿಎಸ್ ಪಕ್ಷ ಎಂದು ಕಿಡಿಕಾರಿದ್ದಾರೆ.

ಪುಟ್ಟಸ್ವಾಮಿ, ಬಿಜೆಪಿ ನಾಯಕ

ಜೆಡಿಎಸ್ ಪಕ್ಷದ ಪರಿಸ್ಥಿತಿ ರಾಜ್ಯದ ಜನತೆಗೆ ದಿನೇ ದಿನೇ ಅರ್ಥವಾಗಿದೆ. ಅದರ ಪರಣಾಮ ನಿಖಿಲ್ ಹಾಗೂ ದೇವೆಗೌಡ ಅವರು ಸೋತ್ತಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಬರುಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕುಟುಂಬ ರಾಜ್ಯಕಾರಣ ಮಾಡಲು ಜೆಡಿಎಸ್ ಪಕ್ಷವಿದೆ ಎಂದು ಜನತೆಗೆ ಅರ್ಥವಾಗಿದೆ‌. ಜೆಡಿಎಸ್ ಪಕ್ಷವನ್ನು ನಂಬಿದ ಜನ ಅಸಹ್ಯ ಪಡುತ್ತಿದ್ದಾರೆ. ಏಕೆಂದರೆ ಸಿಕ್ಕ ಅಧಿಕಾರವನ್ನು ಕುಟುಂಬಕ್ಕೆ ಬಳಿಸಿಕೊಳ್ಳುತ್ತಿದ್ದಾರೆ ಇದರಿಂದ ಜನರು ಅಸಹ್ಯ ಪಡುತ್ತಿದ್ದಾರೆ ಎಂದಿದ್ದಾರೆ.

ಹೆಚ್.ಡಿ.ದೇವೆಗೌ ಅವರು ಪಾರ್ಲಿಮೆಂಟ್​ನಲ್ಲಿ ಇರಬೇಕಾಗಿತ್ತು. ಆದರೆ, ಕುಟುಂಬದ ಮಮತೆಯನ್ನು ಬಿಡಲಿಲ್ಲ ಎಂದು ಜನ ಸೋಲಿಸಿದ್ದಾರೆ. ಮುಂದಿನ ಚುನಾವಣೆಯ ನಂತರ ಜೆಡಿಎಸ್ ಸ್ಥಿತಿ ಗಂಭೀರವಾಗಲಿದೆ ಎಂದು ಭವಿಷ್ಯ ನುಡಿದ್ದಾರೆ.

ಇನ್ನು ಮಾಜಿ ಸಿಎಂ ಸಿದ್ದಾರಾಮಯ್ಯಗೆ ಭ್ರಮೆ ಬಂದಿದೆ. ವಿಚಾರ ಮಂಥನ ಮಾಡಿಕೊಳ್ಳುವ ಶಕ್ತಿಯನ್ನೂ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಮೂಲ ಕಾಂಗ್ರೆಸ್ ಎರಡು ಭಾಗವಾಗಿದೆ. ಮೂಲ ಕಾಂಗ್ರೆಸ್ಸಿಗರು ಯಾರೂ ಚುನಾವಣೆ ಪ್ರಚಾರಕ್ಕೆ ಬಂದಿಲ್ಲ. ಸಿದ್ದರಾಮಯ್ಯನವರನ್ನ ಯಾರು ಬೆಂಬಲಿಸಲಿಲ್ಲ, ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳನ್ನು ಗೆಲ್ಲಲಿದೆ. ನಂತರ ಪ್ರತಿ ಪಕ್ಷದ ನಾಯಕತ್ವವನ್ನೂ ಕಳೆದು ಕೊಂಡು ರಾಜಕೀಯ ನಿವೃತ್ತಿ ಪಡೆಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.

Intro:ಉಪಚನಾವಣೆಯ ನಂತರ ಜೆಡಿಎಸ್ ಪಕ್ಷ ಸಂಪೂರ್ಣ ಕಣ್ಮಾರೆಯಾಗಲಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಅದ್ಯಕ್ಷಕರು ಪುಟ್ಟಸ್ವಾಮಿ ಭವಿಷ್ಯ ನುಡಿದಿದ್ದಾರೆ.


Body:ಎಚ್ ಡಿ ದೇವೆಗೌಡ ಹಾಗೂ ಕುಮಾರಸ್ವಾಮಿ ಇಂದಿಗೂ ಸಹ ಕುಟುಂಬ ರಾಜಕಾರಣ ಬಿಟ್ಟಿಲ್ಲಾ.ಪಕ್ಷ ಹುಟ್ಟಿರುವುದೇ ಕುಟುಂಬ ರಾಜಕಾರಣ ಮಾಡುವುದಕ್ಕಾಗಿ ಪಕ್ಕ ಇರುವುದೇ ಕುಟುಂಬ ರಾಜಕಾರಣ ಮಾಡುವ ಸಲುವಾಗಿ .ಕಳೆದ ಅಧಿಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ,ರೇವಣ್ಣ ಅಘೋಷಿತ ಮುಖ್ಯಮಂತ್ರಿ ,ತಮ್ಮಣ್ಣ,ಸಾ ರಾ ಮಹೇಶ್ ಮಂತ್ರಿ ಜಾತ್ಯತೀಯ ಪಕ್ಷಕ್ಕೆ ಅವಮಾನ ಮಾಡುವ ಪಕ್ಷವೇ ಜೆಡಿಎಸ್ ಪಕ್ಷ ಎಂದು ಕಿಡಿಕಾರಿದ್ದಾರೆ.

ಇನ್ನೂ ಜೆಡಿಎಸ್ ಪಕ್ಷದ ಪರಿಸ್ಥಿತಿ ರಾಜ್ಯದ ಜನತೆಗೆ ದಿನೇದಿನೇ ಅರ್ಥವಾಗಿದೆ.ಅದರ ಪರಣಾಮ ನಿಖಿಲ್ ಹಾಗೂ ದೇವೆಗೌಡ್ರು ಸೋತ್ತಿದ್ದಾರೆ.ಕರ್ನಾಣಟಕದಲ್ಲಿ ಜೆಡಿಎಸ್ ಪಕ್ಷ ಬರುಲು ಸಾಧ್ಯವಿಲ್ಲಾ.ರಾಜ್ಯದಲ್ಲಿ ಕುಟುಂಬ ರಾಜ್ಯಕಾರಣ ಮಾಡಲು ಜೆಡಿಎಸ್ ಪಕ್ಷವಿದೆ ಎಂದು ಜನತೆಗೆ ಅರ್ಥವಾಗಿದೆ‌.ಜೆಡಿಎಸ್ ಪಕ್ಷವನ್ನು ನಂಬಿದ ಜನ ಅಸಹ್ಯ ಪಡುತ್ತಿದ್ದಾರೆ.ಏಕೆಂದರೆ ಸಿಕ್ಕಾ ಅಧಿಕಾರವನ್ನು ಕುಟುಂಬಕ್ಕೆ ಬಳಿಸಿಕೊಳ್ಳುತ್ತಿದ್ದಾರೆ ಇದರಿಂದ ಜನರು ಅಸಹ್ಯ ಪಡುತ್ತಿದ್ದಾರೆ.ಹೆಚ್ ಡಿ ದೇವೆಗೌಡ್ರು ಪಾರ್ಲಿಮೆಂಟ್ ನಲ್ಲಿ ಇರಬೇಕಾಗಿತ್ತು ಆದರೆ ಕುಟುಂಬದ ಮಮತೆಯನ್ನು ಬಿಡಲಿಲ್ಲಾ ಎಂದು ಸೋಲಿಸಿದ್ದಾರೆ.ಮುಂದಿನ ಚುನಾವಣೆಯ ನಂತರ ಜೆಡಿಎಸ್ ಸ್ಥಿತಿ ಗಂಭೀರವಾಗಲಿದೆ ಎಂದು ಭವಿಷ್ಯ ನುಡಿದ್ದಾರೆ.

ಸಿದ್ದಾರಾಮಯ್ಯನವರಿಗೆ ಭ್ರಮೆ ಬಂದಿದೆ,ವಿಚಾರ ಮಂತನ ಮಾಡಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ.ಭಾರತೀಯ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ.ಮೂಲ ಕಾಂಗ್ರೆಸ್ ಎರಡು ಭಾಗವಾಗಿದೆ ಮೂಲಕಾಂಗ್ರೇಸಿಗರು ಯಾರು ಚುನಾವಣೆಯ ಪ್ರಚಾರಕ್ಕೆ ಭಂದಿಲ್ಲಾ.ಸಿದ್ದರಾಮಯ್ಯನವರನ್ನು ಯಾರು ಬೆಂಬಲಿಸಲಿಲ್ಲಾ ಪಲಿತಾಂಶದ ನಂತರ ಬಿಜೆಪಿ 15 ಸ್ಥಾನಗಳನ್ನು ಗೆಲ್ಲಲಿದೆ. ನಂತರ ವಿರೋಧ ಪಕ್ಷದ ನಾಯಕತ್ವನ್ನು ಕಳೆದು ಕೊಂಡು ರಾಜಕೀಯ ನಿವೃತ್ತಿಯನ್ನು ಪಡೆಯಬಹುದು ಎಂದು ಭವಿಷ್ಯ ನುಡಿದಿದ್ದಾರೆ..




Conclusion:

ABOUT THE AUTHOR

...view details