ಕರ್ನಾಟಕ

karnataka

ಜಾತಿ ಹೆಸರಲ್ಲಿ ರಾಜಕೀಯ ಮಾಡುವುದು ಕಾಂಗ್ರೆಸ್: ಅಣ್ಣಾಮಲೈ ಆರೋಪ

By

Published : Apr 24, 2023, 7:16 AM IST

ರಾಜ್ಯದಲ್ಲಿ ಒಂದು ಸಮುದಾಯಕ್ಕೆ ಕಪ್ಪು ಚುಕ್ಕೆ ತರುವಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ ಎಂದು ಬಿಜೆಪಿಯ ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಹೇಳಿದರು.

annamalai-reaction-on-congress
ಜಾತಿ ಹೆಸರಲ್ಲಿ ರಾಜಕೀಯ ಮಾಡುವುದು ಕಾಂಗ್ರೆಸ್: ಅಣ್ಣಾಮಲೈ

ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷ ಬಸವಣ್ಣವರ ತತ್ವಕ್ಕೆ ವಿರುದ್ಧವಾಗಿದೆ. ಕರ್ನಾಟಕ‌ ರಾಜ್ಯವನ್ನು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎಟಿಎಂ ನಂತೆ ನೋಡುತ್ತಿದ್ದಾರೆ ಎಂದು ಬಿಜೆಪಿಯ ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಹೇಳಿದರು. ಜಿಲ್ಲೆಯ ಶಿಡ್ಲಘಟ್ಟ ‌ನಗರದಲ್ಲಿ ಭಾನುವಾರ ಡಿಜಿಟಲ್ ಮೀಡಿಯಾ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಲಿಂಗಾಯತ ಸಮುದಾಯದ ಬಗ್ಗೆ ಸಿದ್ದರಾಮಯ್ಯನವರು ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲಾ ಜನರ ಪರವಾಗಿದ್ದೀವಿ, ನಮ್ಮ ದೇಶ ಮೊದಲು ಎನ್ನುವ ಪಕ್ಷ ಬಿಜೆಪಿ. ಎಲ್ಲಾ ಜಾತಿಯವರು ನಮ್ಮ ಪಕ್ಷದಲ್ಲಿದ್ದಾರೆ. ಯಾರಿಗೂ ದ್ರೋಹ ಮಾಡಿಲ್ಲ, ಯಾರ ವಿರುದ್ಧವೂ ನಾವು ಕೆಲಸ ಮಾಡಿಲ್ಲ, ಅದಕ್ಕೆ ಎಲ್ಲ ಜಾತಿಯವರು ಬಿಜೆಪಿಯಲ್ಲಿದ್ದಾರೆ. ಅವರು ಕರ್ನಾಟಕದಲ್ಲಿ ಕನ್ನಡಿಗರಾಗಿದ್ದಾರೆ. ತಮಿಳುನಾಡಿನಲ್ಲಿ ತಮಿಳುಗರಿದ್ದಾರೆ. ಕರ್ನಾಟಕದಲ್ಲಿ ಒಂದು ಸಮುದಾಯಕ್ಕೆ ಕಪ್ಪು ಚುಕ್ಕೆ ತರುವಂತ ಕೆಲಸವನ್ನು ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ. ಇದನ್ನು ಎಲ್ಲಾ ಸಮುದಾಯವರು ಸೇರಿ ವಿರೋಧಿಸಬೇಕು ಎಂದರು.

ಕಾಂಗ್ರೆಸ್ ಪಕ್ಷದವರು ಜಾತಿ ಇಟ್ಟುಕೊಂಡೇ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್​ನವರು ಕೆಲವರು ಪಕ್ಷ ಬಿಟ್ಟು ಬಿಜೆಪಿ ಸೇರುತ್ತಾರೆ. ಇವರ್ಯಾರು ಜಾತಿ ಬಗ್ಗೆ ಮಾತನಾಡಲ್ಲ. ಬಿಜೆಪಿ ಬಿಟ್ಟು ಹೋಗುವವರು ಮಾತ್ರ ಜಾತಿ ಜಾತಿ ಅನ್ನುತ್ತದ್ದಾರೆ. ಕನ್ನಡಿಗರೆಲ್ಲಾ ಸೇರಿ ಇದಕ್ಕೆ ಉತ್ತರ ಕೊಡಬೇಕು. ಕನ್ನಡಿಗರೆಲ್ಲಾ ಎಷ್ಟು ಒಳ್ಳೆಯವರು ಎಂದು ತಮಿಳವನಾದ ನನಗೆ ಗೊತ್ತು. ಈ ಬಾರಿ ಬಿಜೆಪಿ 130 ಗಡಿ‌ ದಾಟುತ್ತದೆ ಎಂದು ಭವಿಷ್ಯ ನುಡಿದ್ದಾರೆ.

ಕಾಂಗ್ರೆಸ್​ಗೆ ಹೀರೋ ರಾಹುಲ್ ಗಾಂಧಿ, ಬಿಜೆಪಿಗೆ ಹೀರೋ ಕಾರ್ಯಕರ್ತರು, ನಮ್ಮಲ್ಲಿ ಕಾರ್ಯಕರ್ತರು ಹೀರೋ ಆಗಿರೋವರೆಗೂ ಏನೂ ಸಮಸ್ಯೆ ಇಲ್ಲ. ಬಿಜೆಪಿ ಪಕ್ಷದಲ್ಲಿ ಸೋತ ಮೇಲೂ ಉಪ ಮುಖ್ಯಮಂತ್ರಿಯಾಗಿದ್ದಾರೆ, ಎಂಎಲ್​ಸಿ ಕೊಟ್ಟಿದ್ದೇವೆ. ನಾನು ಏನೂ ಇಲ್ಲದೆ ಕೆಲಸ ಮಾಡುತ್ತಿದ್ದೇನೆ. ಆದರೆ, ಡಿಕೆ ಶಿವಕುಮಾರ್,​ ಸಿದ್ದರಾಮಯ್ಯ ಕರ್ನಾಟಕ ರಾಜ್ಯವನ್ನು ಎಟಿಎಂ ಎಂದು ತಿಳಿದುಕೊಂಡಿದ್ದಾರೆ. ಜಾತಿ ಹೆಸರಲ್ಲಿ ರಾಜಕೀಯ ಮಾಡುವುದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.

ಲಿಂಗಾಯತ ಸಮುದಾಯದ ಬಗ್ಗೆ ಸಿದ್ದರಾಮಯ್ಯನವರು ನೀಡಿದ ಹೇಳಿಕೆ ಕುರಿತು ಅಣ್ಣಾಮಲೈ ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಎಸ್​ ಈಶ್ವರಪ್ಪ, ಅರವಿಂದ್ ಬೆಲ್ಲದ್, ಸಿಸಿ ಪಾಟೀಲ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ಕಿತ್ತು ಹಾಕುತ್ತೇವೆ: ಅಮಿತ್​ ಶಾ

ಸಿದ್ದರಾಮಯ್ಯ ಸ್ಪಷ್ಟನೆ:ತಾನು ಲಿಂಗಾಯತ ಮುಖ್ಯಮಂತ್ರಿಗಳೆಲ್ಲರೂ ಭ್ರಷ್ಟರು ಅಂತಾ ಹೇಳಿಲ್ಲ. ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟರು ಅಂತಾ ಹೇಳಿಕೆ ನೀಡಿದ್ದೆ. ಆದ್ರೆ ನನ್ನ ಹೇಳಿಕೆಯನ್ನು ಬಿಜೆಪಿಯವರು ಬೇರೆ ರೀತಿ ತಿರುಚಿದ್ದಾರೆ ಎಂದು ವರುಣಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇವರ ಸ್ಪಷ್ಟನೆ ಹೊರತಾಗಿಯೂ ಬಿಜೆಪಿ ಹಲವು ನಾಯಕರು ಸಿದ್ದರಾಮ್ಯನವರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ABOUT THE AUTHOR

...view details