ಕರ್ನಾಟಕ

karnataka

ಅರಣ್ಯದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ: ಸ್ಥಳಕ್ಕೆ ಎಸ್​​ಪಿ ಭೇಟಿ

By

Published : Aug 6, 2021, 11:18 AM IST

ಸುಮಾರು 35 ವರ್ಷದ ವ್ಯಕ್ತಿಯ ಶವ ರಾಮಚಂದ್ರಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಹಾಗೂ ಡಿವೈಎಸ್​ಪಿ ವಾಸುದೇವ್, ಸರ್ಕಲ್ ಇನ್ಸ್​ಪೆಕ್ಟರ್ ಶಶಿಧರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

An unknown person dead body
ವ್ಯಕ್ತಿ ಶವ ಪತ್ತೆ

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ರಾಮಚಂದ್ರಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಸುಮಾರು 35 ವರ್ಷದ ವ್ಯಕ್ತಿಯ ಶವ ಎಂದು ಅಂದಾಜಿಸಲಾಗಿದ್ದು, ವಾರದ ಹಿಂದೆ ಕೊಲೆ ಮಾಡಿ ಹೂತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಈ ಕುರಿತು ಸಂಕ್ಷಿಪ್ತ ಮಾಹಿತಿ ಲಭ್ಯವಾಗಿಲ್ಲ.

ವ್ಯಕ್ತಿಯನ್ನು ಅರಣ್ಯದಲ್ಲಿ ಕೊಲೆ ಮಾಡಿ, ನಂತರ ಮೃತ ದೇಹವನ್ನು ಗುಂಡಿ ತಗೆದು ಮುಚ್ಚಿದ್ದು ಕುರಿ ಮೇಯಿಸುವ ವ್ಯಕ್ತಿಗಳು ಮೃತದೇಹವನ್ನು ನೋಡಿ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಹಾಗೂ ಡಿವೈಎಸ್​ಪಿ ವಾಸುದೇವ್, ಸರ್ಕಲ್ ಇನ್ಸ್​ಪೆಕ್ಟರ್ ಶಶಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಈ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details