ಕರ್ನಾಟಕ

karnataka

ಮಾಜಿ ಸೈನಿಕನಿಂದ ₹3 ಲಕ್ಷಕ್ಕೆ ಬೇಡಿಕೆ ಇಟ್ಟು ರೆಡ್ ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಕಂದಾಯ ನಿರೀಕ್ಷಕ

By

Published : Apr 26, 2021, 7:12 PM IST

ನಿವೃತ್ತ ಮಾಜಿ ಯೋಧ ದಿವಾಕರ್‌ ಸೇನೆಯಿಂದ ನಿವೃತ್ತಿಯಾದಾಗ ಕೇಂದ್ರ ಸರ್ಕಾರ ಜಮೀನು ಮಂಜೂರು ಮಾಡುವಂತೆ ಆದೇಶ ನೀಡಿತ್ತು. ಆದರೆ, ಬಶೆಟ್ಟಿಹಳ್ಳಿ ರೆವಿನ್ಯೂ ಇನ್ಸ್‌ಪೆಕ್ಟರ್ ಜಮೀನು ಮಂಜೂರು ಮಾಡಲು ಮೂರು ಲಕ್ಷಕ್ಕೆ ಬೇಡಿಕೆ ಇಟ್ಟು 2 ಲಕ್ಷಕ್ಕೆ ಮಾಡಿಕೊಡುವುದಾಗಿ ಒಪ್ಪಿಗೆ ನೀಡಿದ್ದರು..

Raid
Raid

ಚಿಕ್ಕಬಳ್ಳಾಪುರ: ನಿವೃತ್ತ ಯೋಧನಿಗೆ ಜಮೀನು ಮಂಜೂರು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರ್‌ಐ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ.

ನಿವೃತ್ತ ಯೋಧ ದಿವಾಕರ್‌ಗೆ ಜಮೀನು ಮಂಜೂರು ಮಾಡಿಸಲು ಆರ್ಐ ವೇಣುಗೊಪಾಲ್ ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅದರಂತೆ ಇಂದು ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ತಂಡ ದಾಳಿ ಮಾಡಿ ರೆಡ್ ಹ್ಯಾಡ್‌ಆಗಿ ಬಂಧಿಸಿದೆ.

ನಿವೃತ್ತ ಮಾಜಿ ಯೋಧ ದಿವಾಕರ್‌ ಸೇನೆಯಿಂದ ನಿವೃತ್ತಿಯಾದಾಗ ಕೇಂದ್ರ ಸರ್ಕಾರ ಜಮೀನು ಮಂಜೂರು ಮಾಡುವಂತೆ ಆದೇಶ ನೀಡಿತ್ತು. ಆದರೆ, ಬಶೆಟ್ಟಿಹಳ್ಳಿ ರೆವಿನ್ಯೂ ಇನ್ಸ್‌ಪೆಕ್ಟರ್ ಜಮೀನು ಮಂಜೂರು ಮಾಡಲು ಮೂರು ಲಕ್ಷಕ್ಕೆ ಬೇಡಿಕೆ ಇಟ್ಟು 2 ಲಕ್ಷಕ್ಕೆ ಮಾಡಿಕೊಡುವುದಾಗಿ ಒಪ್ಪಿಗೆ ನೀಡಿದ್ದರು.

ಅದರಲ್ಲಿ ಮುಂಗಡವಾಗಿ ಒಂದು ಲಕ್ಷ ರೂ. ನೀಡಬೇಕು ಎಂದು ತಿಳಿಸಿದ್ದಾರೆ. ಈ ಕುರಿತು ದಿವಾಕರ್ ಎಸಿಬಿ ಅಧಿಕಾರಿಗಳಿಗೆ ಮಾಹಿತೆ ಮುಟ್ಟಿಸಿದ್ದಾರೆ.

ಹಣವನ್ನು ಕಂದಾಯ ಭವನದಲ್ಲಿ ಸ್ವೀಕರಿಸದೆ ಯಾರೂ ಇಲ್ಲದ ಪ್ರವಾಸಿ ಮಂದಿರಲ್ಲಿ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್‍ಪಿ ಮಂಜುನಾಥ್ ಹಾಗೂ ತಂಡ ದಾಳಿ ನಡೆಸಿ ವೇಣುಗೋಪಾಲ್‌ನನ್ನು ಬಂಧಿಸಿದ್ದಾರೆ.

ABOUT THE AUTHOR

...view details