ಕರ್ನಾಟಕ

karnataka

ಶೇ.90ರಷ್ಟು ಜನ 2ನೇ ಡೋಸ್ ಪಡೆದರೆ 3ನೇ ಅಲೆ ತಡೆಯಬಹುದು : ಸಚಿವ ಸುಧಾಕರ್​

By

Published : Nov 29, 2021, 5:15 PM IST

minister-sudhakar

ಮೊದಲ‌ ಡೋಸ್ ವ್ಯಾಕ್ಸಿನೇಷನ್‌ ಶೇ.91ರಷ್ಟು ಮುಗಿದಿದೆ. 2ನೇ ಡೋಸ್ ಶೇ.57ರಷ್ಟು ನೀಡಲಾಗಿದೆ. ಇನ್ನೂ 47 ಲಕ್ಷ ಮಂದಿ ಲಸಿಕೆ ಪಡೆಯಬೇಕಿದೆ. ಎಲ್ಲರು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು. 43 ಸಾವಿರ ಮಂದಿ 2ನೇ ಡೋಸ್ ಪಡೆದಿಲ್ಲ..

ಚಿಕ್ಕಬಳ್ಳಾಪುರ: ದೇಶದಲ್ಲಿ ಓಮಿಕ್ರೋನ್ ವೈರಸ್ ಆತಂಕ ಹೆಚ್ಚುತ್ತಿದೆ. ರಾಜ್ಯದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. ಅಲ್ಲದೆ ಶೇ.90ರಷ್ಟು ಮಂದಿ 2ನೇ ಡೋಸ್ ಪಡೆದರೆ 3ನೇ ಅಲೆ ತಡೆಯಬಹುದು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಓಮಿಕ್ರೋನ್ ವೈರಸ್​ ಬಹು ಬೇಗ ಹರುಡುತ್ತದೆ ಎಂದು ಗೊತ್ತಾಗಿದೆ. ಈ ವೈರಸ್​​ನ ತೀವ್ರತೆ ಎಷ್ಟು ಎನ್ನುವ ಕುರಿತು ವರದಿ ಬಂದಿಲ್ಲ. ಆದರೆ, ನಮ್ಮ ಸರ್ಕಾರ ಈಗಾಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಸಿಎಂ ಬೊಮ್ಮಾಯಿ ಅವರು ಈಗಾಗಲೇ ಕೆಲವು ಕ್ರಮ ತೆಗೆದುಕೊಂಡಿದ್ದಾರೆ. ದೇಶದಲ್ಲಿಯೇ ನಮ್ಮ ರಾಜ್ಯ ಬಿಗಿ ಕ್ರಮಕ್ಕೆ ಮುಂದಾಗಿದೆ ಎಂದರು.

ಶೇ.90ರಷ್ಟು ಜನ 2ನೇ ಡೋಸ್ ಪಡೆದ್ರೆ 3ನೇ ಅಲೆ ತಡೆ ಸಾಧ್ಯ ಅಂತಾ ಹೇಳಿರುವ ಸಚಿವ ಸುಧಾಕರ್..​

ಮೊದಲ‌ ಡೋಸ್ ವ್ಯಾಕ್ಸಿನೇಷನ್‌ ಶೇ.91ರಷ್ಟು ಮುಗಿದಿದೆ. 2ನೇ ಡೋಸ್ ಶೇ.57ರಷ್ಟು ನೀಡಲಾಗಿದೆ. ಇನ್ನೂ 47 ಲಕ್ಷ ಮಂದಿ ಲಸಿಕೆ ಪಡೆಯಬೇಕಿದೆ. ಎಲ್ಲರು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು. 43 ಸಾವಿರ ಮಂದಿ 2ನೇ ಡೋಸ್ ಪಡೆದಿಲ್ಲ.

ಸೋಂಕು ಹೆಚ್ಚಾದ ಮೇಲೆ ಲಸಿಕೆ ತೆಗೆದುಕೊಂಡರೇ ಯಾವುದೇ ಪ್ರಯೋಜನವಿಲ್ಲ. ಶೇ.90ರಷ್ಟು ಮಂದಿ 2ನೇ ಡೋಸ್ ಪಡೆದರೆ 3ನೇ ಅಲೆ ತಡೆಯಬಹುದು ಎಂದರು.

ಇದನ್ನೂ ಓದಿ:ಇಎಸ್​ಐ ಆಸ್ಪತ್ರೆಯಲ್ಲಿ ಕೊಳೆತ 2 ಶವ ಪತ್ತೆ ಪ್ರಕರಣ : ಕ್ರಮಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹ

ABOUT THE AUTHOR

...view details