ಕರ್ನಾಟಕ

karnataka

ಚಾಮರಾಜನಗರದಲ್ಲಿ ಕೇರಳ ಲಾಟರಿ ಮಾರುತ್ತಿದ್ದ ಮೂವರ ಬಂಧನ

By

Published : Feb 5, 2022, 9:16 PM IST

ಬಂಧಿತರಿಂದ 6720 ರೂ. ಮೌಲ್ಯದ 168 ಲಾಟರಿ ಟಿಕೆಟ್, 5680 ರೂ. ನಗದನ್ನು ವಶಪಡಿಸಿಕೊಂಡು ಮೂವರನ್ನು ಚಾಮರಾಜನಗರ ಪೂರ್ವ ಠಾಣೆಯ ವಶಕ್ಕೆ ಕೊಟ್ಟಿದ್ದಾರೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಕೇರಳ ಲಾಟರಿ ಮಾರುತ್ತಿದ್ದ ಮೂವರ ಬಂಧನ
ಕೇರಳ ಲಾಟರಿ ಮಾರುತ್ತಿದ್ದ ಮೂವರ ಬಂಧನ

ಚಾಮರಾಜನಗರ :ಅಕ್ರಮವಾಗಿ ಕೇರಳ ಲಾಟರಿಗಳನ್ನು ತಂದು ಚಾಮರಾಜನಗರ ಜಿಲ್ಲಾ ಕೇಂದ್ರದ ಸುತ್ತಮುತ್ತ ಮಾರಾಟ ಮಾಡುತ್ತಿದ್ದ ಮೂವರನ್ನು CEN ಪೊಲೀಸರು ಬಂಧಿಸಿದ್ದಾರೆ‌.

ಚಾಮರಾಜನಗರದ ಗಾಳಿಪುರ ನಿವಾಸಿ ಜಮೀರ್ ಅಹ್ಮದ್, ಕೋಡಿಉಗನೆ ಗ್ರಾಮದ ಮಹಾದೇವಯ್ಯ ಹಾಗೂ ಹರದನಹಳ್ಳಿ ಗ್ರಾಮದ ಕೃಷ್ಣ ಬಂಧಿತ ಆರೋಪಿಗಳು‌.

ಕೇರಳದಿಂದ ಲಾಟರಿಗಳನ್ನು ತಂದು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ CEN PI ಮಹಾದೇವಶೆಟ್ಟಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಲಾಟರಿ ಟಿಕೆಟ್ ಸಮೇತ ಬಂಧಿಸಿದ್ದಾರೆ‌.

ಬಂಧಿತರಿಂದ 6720 ರೂ. ಮೌಲ್ಯದ 168 ಲಾಟರಿ ಟಿಕೆಟ್, 5680 ರೂ. ನಗದನ್ನು ವಶಪಡಿಸಿಕೊಂಡು ಮೂವರನ್ನು ಚಾಮರಾಜನಗರ ಪೂರ್ವ ಠಾಣೆಯ ವಶಕ್ಕೆ ಕೊಟ್ಟಿದ್ದಾರೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TAGGED:

ABOUT THE AUTHOR

...view details