ಕರ್ನಾಟಕ

karnataka

ಸಿಎಂ ಹುದ್ದೆ ಖಾಲಿಯಿಲ್ಲ, ಎರಡೂವರೇ ವರ್ಷ ಬಿಎಸ್​​​ವೈ ಅವರೇ ಸಿಎಂ: ಜಗದೀಶ್ ಶೆಟ್ಟರ್​

By

Published : Jan 7, 2021, 1:08 PM IST

ಇಂದು ಸಚಿವ ಜಗದೀಶ್ ಶೆಟ್ಟರ್​ ಅವರು ನಗರಕ್ಕೆ ಭೇಟಿ ನೀಡಿ, ಕೆಲ್ಲಂಬಳ್ಳಿ - ಬದನಗುಪ್ಪೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದರು.

ಜಗದೀಶ್ ಶೆಟ್ಟರ್​
Jagadish Shetter

ಚಾಮರಾಜನಗರ:ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಿಎಂ ಹುದ್ದೆಗೆ ಆಕಾಂಕ್ಷೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರೇ ಎರಡೂವರೆ ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

ನಗರದಲ್ಲಿ ಕೈಗಾರಿಕೋದ್ಯಮಿಗಳ‌ ಜೊತೆ ಸಂವಾದ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮುಖ್ಯಮಂತ್ರಿ ಬದಲಾಗಲು ಸಿಎಂ ಹುದ್ದೆ ಖಾಲಿಯಿಲ್ಲ.‌ ಈ ಕುರಿತು ಈಗಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಇನ್ನು ಯತ್ನಾಳ್ - ರೇಣುಕಾಚಾರ್ಯ ವಾಗ್ವಾದ ನನಗೆ ಗೊತ್ತಿಲ್ಲ. ಅವರ ಸಮಸ್ಯೆಗಳನ್ನು ಸಿಎಂ ಹಾಗೂ ರಾಜ್ಯಾಧ್ಯಕ್ಷರು ಬಗೆಹರಿಸುತ್ತಾರೆ ಎಂದರು.

ನಾನು ಹಿಂದೆ ಮಂತ್ರಿಯಾಗಿ, ಸಿಎಂ ಆಗಿದ್ದಾಗ ಚಾಮರಾಜನಗರಕ್ಕೆ ಬಂದಿದ್ದೆ. ಸಿಎಂ ಬಿಎಸ್​​ವೈ ಯಾಕೆ ಬಂದಿಲ್ಲ ಅಂತ ಅವರನ್ನೇ ಕೇಳಿ ಹೇಳುವುದಾಗಿ ಪ್ರಶ್ನೆಯೊಂದಕ್ಕೆ ಹಾಸ್ಯ ಚಟಾಕಿ ಹಾರಿಸಿದರು.

ಜಿಪಂ ಸಭಾಂಗಣದಲ್ಲಿ ಚಾಮರಾಜನಗರದ ಕೆಲ್ಲಂಬಳ್ಳಿ - ಬದನಗುಪ್ಪೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂದು ಅಧಿಕಾರಿಗಳು, ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ‌‌.

ABOUT THE AUTHOR

...view details