ಕರ್ನಾಟಕ

karnataka

Elephant death: ವಿಶ್ವ ಆನೆ ದಿನದಂದೇ ಚಾಮರಾಜನಗರದಲ್ಲಿ ಅನುಮಾನಸ್ಪದ ರೀತಿಯಲ್ಲಿ ಕಾಡಾನೆ ಸಾವು: ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ

By

Published : Aug 12, 2023, 3:59 PM IST

Updated : Aug 12, 2023, 4:06 PM IST

ಜಮೀನಿನಲ್ಲಿ ಕಾಡಾನೆಯೊಂದು ಅನುಮಾನಸ್ಪದವಾಗಿ‌ ಮೃತಪಟ್ಟಿರುವ ಘಟನೆ ನಡೆದಿದೆ.

Elephant death
Elephant death

ಚಾಮರಾಜನಗರ: ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಅನುಮಾನಾಸ್ಪದವಾಗಿ‌ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ನಾಗರಾಜು ಮತ್ತು ಸೆಲ್ವಂ ಎಂಬವರ ಜಮೀನಿನಲ್ಲಿ ಅಂದಾಜು 12 ವರ್ಷದ ಗಂಡಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರತ್ಯೇಕ ಪ್ರಕರಣಗಳು..

ವೃದ್ಧೆಯಿಂದ ಹಣ, ಮೊಬೈಲ್ ದೋಚಿ ದುಷ್ಕರ್ಮಿಗಳು ಪರಾರಿ:ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ವೃದ್ಧೆಗೆ ಪೊಂಗಲ್ ತಿನ್ನಿಸಿ ಹಣ, ಮೊಬೈಲ್ ದೋಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ರತ್ಮಮ್ಮ(70) ವಂಚನೆಗೊಳಗಾದ ವೃದ್ಧೆ.

ಮಲೆಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ರತ್ನಮ್ಮ‌ ದೇವರ ದರ್ಶನ ಮುಗಿಸಿ ರಂಗಮಂದಿರದಲ್ಲಿ ಮಲಗಿದ್ದ ವೇಳೆ ಮೂವರು ಪುರುಷರು, ಓರ್ವ ಮಹಿಳೆ ಪರಿಚಯಿಸಿಕೊಂಡು ಜೊತೆಗೆ ಮಲಗಿದ್ದಾರೆ. ಬೆಳಗ್ಗೆ ವೃದ್ಧೆ ಎದ್ದ ಬಳಿಕ ಪೊಂಗಲ್​ನಲ್ಲಿ ಮತ್ತು ಬರುವ ಔಷಧಿ ಬೆರೆಸಿಕೊಟ್ಟು ಪ್ರಜ್ಞೆ ತಪ್ಪಿಸಿ ಬಳಿಕ 10 ಸಾವಿರ ನಗದು, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಸದ್ಯ ಮಲೆ ಮಹದೇಶ್ವರ ಬೆಟ್ಟದಲ್ಲಿ‌ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಅಂಬರ್ ಗ್ರೀಸ್ ಸಾಗಿಸುತ್ತಿದ್ದವರ ಬಂಧನ: ತಿಮಿಂಗಲ ವಾಂತಿ(ಅಂಬರ್ ಗ್ರೀಸ್) ಸಾಗಣೆ ಮಾಡುತ್ತಿದ್ದವರನ್ನು ಬಂಧಿಸಿದ ಘಟನೆ ಕೊಳ್ಳೇಗಾಲದ ಮೈಸೂರು ರಸ್ತೆಯಲ್ಲಿ ನಡೆದಿದೆ. ಭಟ್ಕಳ ಮೂಲದ ಆನಂದ್ ದೇವಾಡಿಗ, ಬಾಬು ಅಣ್ಣಪ್ಪನಾಯ್ಕ ಬಂಧಿತ ಆರೋಪಿಗಳು.‌‌ ಕೊಳ್ಳೇಗಾಲ ಮಾರ್ಗದಿಂದ ಕೊಯಮತ್ತೂರಿಗೆ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 3 ಕೆಜಿ ಅಂಬರ್ ಗ್ರೀಸ್, ಎರಡು ಮೊಬೈಲ್, ಕಾರು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

6 ಕುರಿಗಳನ್ನು ಕದ್ದೊಯ್ದ ಖದೀಮರು: ಮೈಸೂರು ಜಿಲ್ಲೆಯ ಹಂಚ್ಯಾಗ್ರಾಮದಲ್ಲಿ ಕೊಟ್ಟಿಗೆಯಲ್ಲಿದ್ದ 6 ಕುರಿಗಳನ್ನು ಖದೀಮರು ಕದೊಯ್ದಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಗ್ರಾಮದೊಳಗಿದ್ದ ಶ್ರೀ ಸೋಮೇಶ್ವರ ದೇವಾಲಯದ ಬೀಗ ಮುರಿದು ಹುಂಡಿ ಒಡೆದು ಹಣ ದೋಚಿ ಪರಾರಿಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಶ್ರೀನಿವಾಸ್ ಅವರ ಕೊಟ್ಟಿಗೆ ಮನೆಯ ಬಾಗಿಲ ಬೀಗ ಒಡೆದು ಒಳಗಿದ್ದ 6 ಕುರಿಗಳನ್ನು ಹೊತ್ತೊಯ್ದಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:World Elephant Day: ಆನೆಗಳು ಗ್ರಾಮಗಳಿಗೆ ಪ್ರವೇಶಿಸಿದಂತೆ ತಡೆಯಲು ಇದೆ ಪರಿಹಾರ: ಈ ನಿಟ್ಟಿನಲ್ಲಿ ಸಾಗಬೇಕಿದೆ ಅರಣ್ಯ ಇಲಾಖೆ

Last Updated :Aug 12, 2023, 4:06 PM IST

ABOUT THE AUTHOR

...view details