ಕರ್ನಾಟಕ

karnataka

ಚಾಮರಾಜನಗರ: ಯಾತ್ರಿಕರ ಕಾರು ಪಲ್ಟಿಯಾಗಿ ಮಗು ಸಾವು, 6 ಮಂದಿಗೆ ಗಾಯ

By

Published : Dec 22, 2022, 4:30 PM IST

ಮೈಸೂರು ಮೂಲದ ಯಾತ್ರಿಕರ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಾಮರಾಜ ನಗರದ ಮಂಗಲ ಗ್ರಾಮದಲ್ಲಿ ಸಂಭವಿಸಿದೆ.

pilgrim-car-overturns-child-killed-6-injured
ಯಾತ್ರಿಕರ ಕಾರು ಪಲ್ಟಿ: ಮಗು ಸಾವು, 6 ಮಂದಿಗೆ ಗಾಯ

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಆದ ಪರಿಣಾಮ ಮಗು ಅಸುನೀಗಿರುವ ಘಟನೆ ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ಸಂಭವಿಸಿದೆ.

ಮೈಸೂರು ಮೂಲದ ತನ್ಮಯ್ (3) ಮೃತಪಟ್ಟ ಮಗು. ಮಂಜು, ಸಾಕಮ್ಮ, ಕಿರಣ್, ಚಂದ್ರಮ್ಮ, ಸಂತೇಯಮ್ಮ ಹಾಗೂ ಚಾಲಕ ವೆಂಕಟೇಶ್ ಎಂಬುವವರು ಗಾಯಗೊಂಡಿದ್ದಾರೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಪೂಜೆ ಮುಗಿಸಿ ವಾಪಸ್​ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ತಾಲೂಕಿನ ಮಂಗಲ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ. ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಹನೂರು ಪೊಲೀಸರು ಗಾಯಾಳುಗಳನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ:ಕಾರವಾರದಲ್ಲಿ ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಮಕ್ಕಳಿಗೆ ಗಾಯ

ABOUT THE AUTHOR

...view details