ಕರ್ನಾಟಕ

karnataka

ಸಿಕ್ಕಿದ ಚಿನ್ನದ ಸರ ವಾಪಸ್ ಮಾಡಿ ಮದುವೆ ಸಂಭ್ರಮ ಹೆಚ್ಚಿಸಿದ ಮಹಾತಾಯಿ

By

Published : Aug 22, 2022, 9:03 PM IST

ಚಾಮರಾಜನಗರದ ರಾಮಸಮುದ್ರ ಬಡಾವಣೆಯ ಮದುವೆ ಮನೆಯಲ್ಲಿ ಚಿನ್ನದ ಸರ ಕಳವು ಆಗಿತ್ತು. ಇದನ್ನು ಮಹಿಳೆಗೆ ಚಿನ್ನದ ಸರ ವಾಪಸ್​ ನೀಡಿ ಮಾನವೀಯತೆ ಮೆರೆದ ವೃದ್ಧೆ

ಗೃಹಿಣಿ ನಿರ್ಮಲಾ ನಾಗರಾಜು
ಗೃಹಿಣಿ ನಿರ್ಮಲಾ ನಾಗರಾಜು

ಚಾಮರಾಜನಗರ: ಮದುವೆ ಮನೆಯಲ್ಲಿ ಕಳೆದುಕೊಂಡಿದ್ದ ಚಿನ್ನದ ಸರವನ್ನು ಮಹಿಳೆಗೆ ಮರಳಿಸಿ ಮಹಾತಾಯಿಯೊಬ್ಬರು ಮಾನವೀಯತೆ ಮೆರೆದಿರುವ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.

ಚಾಮರಾಜನಗರ ಪಟ್ಟಣದ ರಾಮಸಮುದ್ರ ಬಡಾವಣೆಯ ನಿವಾಸಿ ರವೀಶ್ ಪುತ್ರಿ ಅನ್ನಪೂರ್ಣ ಮತ್ತು ಗುರುಪ್ರಸಾದ್ ವಿವಾಹವು ಚಾಮರಾಜನಗರದ ನಂದಿಭವನದಲ್ಲಿ ನಡೆದಿತ್ತು. ಈ ವೇಳೆ ಮದುವೆಗೆ ಆಗಮಿಸಿದ್ದ ರಾಮಸಮುದ್ರದವರೇ ಆದ ಬ್ರಿಜೇಶ್ ಕುಮಾರ್ ಪತ್ನಿ ಭಾನುಮತಿ ಕೂಡ ನಂದಿ ಭವನಕ್ಕೆ ಮದುವೆಗೆ ಆಗಮಿಸಿದ್ದರು. ಸಡಗರದ ಓಡಾಟದಲ್ಲಿ 42 ಗ್ರಾಂ ತೂಕದ ಸುಮಾರು 2 ಲಕ್ಷದ 30 ಸಾವಿರ ಮೌಲ್ಯದ ಚಿನ್ನವನ್ನು ಜನಜಂಗುಳಿ ನಡುವೆ ಕಳೆದುಕೊಂಡಿದ್ದಾರೆ.‌

ಚಿನ್ನದ ಸರ ಕಳೆದುಕೊಂಡ ಮಹಿಳೆ ಭಾನುಮತಿ ಆತಂಕಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತ ಹುಡುಕಾಟ ನಡೆಸಿದ್ದಾರೆ. ಇದನ್ನು ಗಮನಿಸಿದ ರಾಮಸಮುದ್ರದ ಗೃಹಿಣಿ ನಿರ್ಮಲಾ ನಾಗರಾಜು, ಚಿನ್ನದ ಸರ ತನಗೆ ಸಿಕ್ಕಿದೆ ಎಂದು ಮರಳಿ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಈಗಿನ ಕಾಲದಲ್ಲಿ ನೂರು ರೂಪಾಯಿ‌ ಸಿಕ್ಕಿದರೆ ಸಾಕು ಯಾರಿಗೂ ತಿಳಿಯದ ಹಾಗೆ ಬಚ್ಚಿಟ್ಟುಕೊಳ್ಳುವ ಸ್ವಾರ್ಥಿಗಳ ನಡುವೆ ಇಂತಹ ಮಹಾತಾಯಿಯ ಪ್ರಾಮಾಣಿಕ ಕಾರ್ಯಕ್ಕೆ ಮದುವೆ ಮನೆಯಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಓದಿ:ಗುಡ್ಡೆಹೊಸೂರಿನಲ್ಲಷ್ಟೇ ಅಲ್ಲ, ಮಡಿಕೇರಿಯಲ್ಲೂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದರು: ಕಾಂಗ್ರೆಸ್​ ಕಿಡಿ

ABOUT THE AUTHOR

...view details