ಕರ್ನಾಟಕ

karnataka

ಮದುವೆಗೆ ಮನೆಯವ್ರೇ ಓಕೆ ಅಂದ್ರೂ ಒಲ್ಲೆ ಎಂದ ಪ್ರಿಯಕರ.. ಮನನೊಂದು ಯುವತಿ ಆತ್ಮಹತ್ಯೆಗೆ ಶರಣು

By

Published : Dec 4, 2020, 1:05 PM IST

ಈ ಕಾರಣಕ್ಕೆ ಆಕೆಯನ್ನು ಮದುವೆ ಆಗಲು ನಿರಾಕರಿಸಿದ್ದಾನೆ ಎನ್ನಲಾಗಿದೆ. ಇದರಿಂದ‌ ಮನನೊಂದ ನಂದಿನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಸದ್ಯ ಯಳಂದೂರು ಪೊಲೀಸ್ ಠಾಣೆಯಲ್ಲಿ ಮೃತಳ ಪಾಲಕರು ದೂರು ನೀಡಿದ್ದಾರೆ..

lover refuse to marrie
ಯುವತಿ ಆತ್ಮಹತ್ಯೆ

ಚಾಮರಾಜನಗರ :ಮನೆಯವರು ಒಪ್ಪಿದರೂ ಪ್ರೀತಿಸಿದ ಯುವಕ ಮದುವೆಗೆ ಒಪ್ಪದೇ ಹೋಗಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಳಂದೂರು ತಾಲೂಕಿನ ಹೊನ್ನೂರು ಸಮೀಪದ ಬೀಚಹಳ್ಳಿಯಲ್ಲಿ ನಡೆದಿದೆ.

ಯುವತಿ ಆತ್ಮಹತ್ಯೆ
ಗ್ರಾಮದ ನಂದಿನಿ(19) ಮೃತ ದುರ್ದೈವಿ. ‌ಅಪ್ರಾಪ್ತ ವಯಸ್ಸಿನಲ್ಲಿ ಅದೇ ಗ್ರಾಮದ ಯೋಗೇಶ್ ಎಂಬಾತನನ್ನು ನಂದಿನಿ ಪ್ರೀತಿಸುತ್ತಿದ್ದಳು. ಮನೆಯವರಿಗೆ ಪ್ರೀತಿಯ‌ ವಿಚಾರ ತಿಳಿದು, ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ರು. ಕಳೆದ ಆರು ತಿಂಗಳ ಹಿಂದೆಯೇ ಎರಡೂ ಮನೆಯವರು ಕುಳಿತು ಮದುವೆ ಮಾತುಕತೆ ನಡೆಸಿದ್ದರು ಎಂದು ತಿಳಿದು ಬಂದಿದೆ. ಇನ್ನು ಈ ಮಧ್ಯೆ ಯೋಗೇಶ್​ಗೆ ಸರ್ಕಾರಿ ನೌಕರಿ ಸಿಕ್ಕಿದೆ.
ಈ ಕಾರಣಕ್ಕೆ ಆಕೆಯನ್ನು ಮದುವೆ ಆಗಲು ನಿರಾಕರಿಸಿದ್ದಾನೆ ಎನ್ನಲಾಗಿದೆ. ಇದರಿಂದ‌ ಮನನೊಂದ ನಂದಿನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಸದ್ಯ ಯಳಂದೂರು ಪೊಲೀಸ್ ಠಾಣೆಯಲ್ಲಿ ಮೃತಳ ಪಾಲಕರು ದೂರು ನೀಡಿದ್ದಾರೆ.

ABOUT THE AUTHOR

...view details