ಕರ್ನಾಟಕ

karnataka

ಇಷ್ಟೆಲ್ಲಾ ಮಾತಾಡುವ ಕಾಂಗ್ರೆಸ್ ಲಿಂಗಾಯತ ಸಿಎಂ ಘೋಷಿಸಲಿ: ಸೋಮಣ್ಣ ಸವಾಲ್

By

Published : Apr 20, 2023, 1:52 PM IST

Updated : Apr 20, 2023, 2:32 PM IST

ಚಾಮರಾಜನಗರ ಹಾಗೂ ವರುಣಾ ಕ್ಷೇತ್ರಗಳ ಅಭ್ಯರ್ಥಿಯಾಗಿರುವ ಸಚಿವ ವಿ ಸೋಮಣ್ಣ ಚಾಮರಾಜನಗರದಲ್ಲಿ ಭರದ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

Minister V Somanna
ಸಚಿವ ವಿ ಸೋಮಣ್ಣ

ಸಚಿವ ವಿ ಸೋಮಣ್ಣ

ಚಾಮರಾಜನಗರ: ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ವೀರಶೈವ ಲಿಂಗಾಯತರನ್ನೇ ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ಎಂದು ಸಚಿವ ಸೋಮಣ್ಣ ಸವಾಲ್ ಹಾಕಿದ್ದಾರೆ. ಚಾಮರಾಜನಗರದ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಲಿಂಗಾಯತ ವಿರೋಧಿಗಳು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ವೀರೇಂದ್ರ ಪಾಟೀಲರನ್ನು ತೆಗೆದಿದ್ದು ಯಾರು.? ರಾಜಶೇಖರ ಮೂರ್ತಿ ಅವರನ್ನು ಓಡಿಸಿದ್ದು ಯಾರು.? ನಿಜಲಿಂಗಪ್ಪ ಅವರನ್ನು ದೇಶಬಿಟ್ಟು ಕಳುಹಿಸಿದ್ದು ಯಾರು..? ಲಿಂಗಾಯತರು ಬಿಟ್ಟು ಹೋದಾಗ ಕಾಂಗ್ರೆಸ್​ಗೆ ಏನಾಯ್ತು..! ಜಗದೀಶ್ ಶೆಟ್ಟರ್, ಸವದಿ ಅಂತ ಹೇಳ್ತಿದ್ದಾರಲ್ಲ, ಜಗದೀಶ್​ ಶೆಟ್ಟರನ್ನು ಮುಖ್ಯಮಂತ್ರಿ ಮಾಡಲಿ..! ಇವೆಲ್ಲಾ ಕಣ್ಣೊರೆಸುವ ತಂತ್ರ ಎಂದು ಕೈಪಡೆ ವಿರುದ್ಧ ಕಿಡಿಕಾರಿದರು.

ಲಿಂಗಾಯತರು ದಡ್ಡರಲ್ಲ, ಅವರನ್ನು ಮತ ಬ್ಯಾಂಕ್ ಆಗಿ ಇಟ್ಟುಕೊಂಡು, ಆ ವರ್ಗಗಳಿಗೆ ಕಾಂಗ್ರೆಸ್ ಏನು ಮಾಡಿಲ್ಲ. ಜನರು ಬದಲಾವಣೆ ಬಯಸುತ್ತಿದ್ದಾರೆ. ಲಿಂಗಾಯತರನ್ನು ಬ್ಲ್ಯಾಕ್​ಮೇಲ್​ ಮೂಲಕ ಏನೋ ಮಾಡುತ್ತೇವೆ ಎಂದು ಆಸೆ ಇಟ್ಟುಕೊಂಡಿದ್ದರೇ ಅವರಿಗೇ ನಿರಾಸೆ ಆಗಲಿದೆ. ಅವರಲ್ಲಿ ಅಷ್ಟು ದೊಡ್ಡ ವಿಷನ್ ಇದ್ದರೆ ಲಿಂಗಾಯತರನ್ನು ಸಿಎಂ ಮಾಡುತ್ತೇವೆಂದು ಹೇಳಲಿ, ಯೂಸ್ ಆ್ಯಂಡ್ ಥ್ರೋ ಮಾತುಗಳು ಬೇಡ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅದಕ್ಕೇ, ಕಾಂಗ್ರೆಸ್​ನವರು ಒಂದೊಂದು ಗಂಟೆಗೆ, ಘಳಿಗೆಗೊಂದು ದಾಳ ಹಾಕ್ತಾ ಇದ್ದಾರೆ. ಆದರೆ ಅವೆಲ್ಲಾ ಏನೂ ಆಗಲ್ಲ. ವೀರಶೈವ ಲಿಂಗಾಯತ ಸಮುದಾಯವನ್ನು ಮೂಲೆಗುಂಪು ಮಾಡುವ ವಿಚಾರ ನಮ್ಮಲ್ಲಿ ಇಲ್ಲ. ಆ ರೀತಿ ಮಾಡುವುದು ಕಾಂಗ್ರೆಸ್ ಮಾತ್ರ. ಈ ಬಗ್ಗೆ ಎಲ್ಲವನ್ನೂ ನಿನ್ನೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಲಾಗಿದೆ ಎಂದು ಲಿಂಗಾಯತ ನಾಯಕರ ಸಭೆ ಬಗ್ಗೆ ಸೋಮಣ್ಣ ಹೇಳಿದರು.

ಬಿ.ಎಲ್. ಸಂತೋಷ್ ಓರ್ವ ಸಕ್ರಿಯ ಕಾರ್ಯಕರ್ತ. 24*7 ಕೆಲಸಗಾರ, ನಾಯಕರನ್ನು ತುಳಿಯುವ ಹುಚ್ಚಿಲ್ಲ. ಕಾಂಗ್ರೆಸ್​ನವರಿಗೆ ಮಾತನಾಡಲು ಏನು ಇಲ್ಲ. ಅದಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಮೋದಿ, ಅಮಿತ್ ಶಾ ವಿರುದ್ಧ ಏನು ಹೇಳಲಾಗದಿದ್ದರಿಂದ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ. ಲಿಂಗಾಯತರಿಗೆ ಕಾಂಗ್ರೆಸ್ ಎಷ್ಟು ಚುರುಮುರಿ ಕೊಟ್ಟಿದೆ ಎಂಬುದು ಸ್ವಾಭಿಮಾನಿ ಲಿಂಗಾಯತರಿಗೆ ಗೊತ್ತಿದೆ ಎಂದು ಕೈಪಡೆ ಕುರಿತು ಸಚಿವ ಸೋಮಣ್ಣ ಟೀಕಿಸಿದರು.

ಜಗದೀಶ್ ಶೆಟ್ಟರ್ ಇಷ್ಟೊಂದು ವೀಕ್ ಅಂತಾ ಗೊತ್ತಿರಲಿಲ್ಲ:ಜಗದೀಶ್ ಶೆಟ್ಟರ್ ನನಗೆ ಆತ್ಮೀಯರು. ಅವರನ್ನು ಕರೆದು ವರಿಷ್ಠರು ವಿನಂತಿಸಿಕೊಂಡರು, ಪತ್ನಿಗೆ ಟಿಕೆಟ್, ರಾಜ್ಯಸಭೆಗೆ ಕಳುಹಿಸುತ್ತೀವೆ ಎಂದಿದ್ರು. ಅವರನ್ನು ಮಂತ್ರಿ, ಸ್ಪೀಕರ್, ಸಿಎಂ ಕೂಡ ಮಾಡಿದ್ದೇವೆ. ಆದರೆ, ಯಾರದೋ ಮಾತಿನಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಮನಸ್ಥಿತಿ ಇಷ್ಟೊಂದು ವೀಕ್ ಎಂದು ಗೊತ್ತಿರಲಿಲ್ಲ ಎಂದು ಸೋಮಣ್ಣ ಜರಿದರು.

ಬಹಳ ಬುದ್ಧಿವಂತ ಶೆಟ್ಟರ್ ವೀಕ್ ಮೈಂಡ್ ಆಗಿದ್ದಾರೆ. 6 ತಿಂಗಳು ಅವರೂ ಕಾಂಗ್ರೆಸ್​ನಲ್ಲಿ ಇರಲು ಸಾಧ್ಯವಿಲ್ಲ, ಅಷ್ಟು ಉಸಿರು ಕಟ್ಟುವ ವಾತಾವರಣ ಇದೆ‌. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಡಿಕೆಶಿ ಮತ್ತೊಂದು ಕಡೆ ಖರ್ಗೆ ಎಂದು ಲೇವಡಿ ಮಾಡಿದರು. ರಾಜಕಾರಣ ಶಾಶ್ವತವಲ್ಲ, ಆದ್ದರಿಂದ ಜಗದೀಶ್ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು, ದಯವಿಟ್ಟು ವಿನಂತಿ ಮಾಡುವುದೇನೆಂದರೆ ಬಿಜೆಪಿ ಬಗ್ಗೆ, ಬಿಜೆಪಿ ನಡವಳಿಕೆ ಬಗ್ಗೆ ಅವರು ಚಿಂತಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಲಿಂಗಾಯತ ಸಿಎಂ ಚರ್ಚೆ ಆಗಿದೆ, ನಿರ್ಣಯ ಕೈಗೊಂಡಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

Last Updated : Apr 20, 2023, 2:32 PM IST

ABOUT THE AUTHOR

...view details