ಕರ್ನಾಟಕ

karnataka

ಚಾಮರಾಜನಗರದಲ್ಲಿ ಮಳೆ ಅಬ್ಬರ: ಗ್ರಾಮಗಳ ಸಂಪರ್ಕ ಕಡಿತ, ಹೊಗೆನಕಲ್ ಜಲಪಾತ ಬಳಿ ಮೊಸಳೆ ದರ್ಶನ

By

Published : Aug 4, 2022, 4:43 PM IST

chamarajanagara rain effect

ಚಾಮರಾಜನಗರದಲ್ಲಿ ಮಳೆ ಮುಂದುವರಿದಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಚಾಮರಾಜನಗರ: ಚಾಮರಾಜನಗರದಲ್ಲಿ ಮಳೆ ಮುಂದುವರಿದಿದ್ದು, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮೆಟ್ಟೂರು ಜಲಾಶಯದ ಹಿನ್ನೀರು ಹೆಚ್ಚಾದ ಪರಿಣಾಮ ಹನೂರು ತಾಲೂಕಿನ ಗೋಪಿನಾಥಂನ ಸೇತುವೆ ಮುಳುಗಡೆ ಆಗಿದೆ.

ಗೋಪಿನಾಥಂನಿಂದ ಆಲಂಬಾಡಿ, ಜಂಬಲ್ ಪಟ್ಟಿ, ಮಾರಿಕೊಟ್ಟಾಯಂ ಹಾಗೂ ಹೊಗೆನಕಲ್ ಜಲಪಾತಕ್ಕೆ ತೆರಳುವ ಮಾರ್ಗ ಕಡಿತಗೊಂಡಿದೆ. ಇಂದು ಸಾರಿಗೆ ಸಂಸ್ಥೆ ಬಸ್ ಸಾಹಸದಿಂದ ಹೊಗೆನಕಲ್​ನಿಂದ ಹಿಂತಿರುಗಿದ್ದು, ಮತ್ತೆ ಮಳೆ ಕಡಿಮೆಯಾಗುವವರೆಗೂ ಬಸ್ ಸಂಚಾರ ಆರಂಭವಾಗುವುದು ಸಂದೇಹ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಳೆ ಹೆಚ್ಚಾಗಿ ಗ್ರಾಮಗಳ ಸಂಪರ್ಕ ಕಡಿತಗೊಂಡ ಹಿನ್ನೆಲೆ ಶಾಲೆಗಳಿಗೆ ಹಲವು ಮಕ್ಕಳು ಹಾಜರಾಗಿಲ್ಲ ಎಂದು ಗೋಪಿನಾಥಂ ಗ್ರಾಮಸ್ಥರು ತಿಳಿಸಿದ್ದಾರೆ. ಮಳೆ ಮುಂದುವರಿದಿದ್ದು, ಕೊಳ್ಳೇಗಾಲದ 7-8 ಊರುಗಳು ಪ್ರವಾಹ ಭೀತಿ ಎದುರಿಸುತ್ತಿವೆ.

ಚಾಮರಾಜನಗರದಲ್ಲಿ ಮಳೆ ಮುಂದುವರಿದಿದೆ...

ಮೊಸಳೆ ದರ್ಶನ: ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಹೊಗೆನಕಲ್ ಜಲಪಾತದಲ್ಲಿ ನೀರಿನ ರಭಸ ಹೆಚ್ಚಾಗಿದ್ದು, ಜಲಪಾತದ ಬಳಿ ಮೊಸಳೆಯೊಂದು ದರ್ಶನ ನೀಡಿದೆ. ಭಾರೀ ಗಾತ್ರದ ಮೊಸಳೆಯೊಂದು ದಡದಲ್ಲಿ ಬಂದು ಠಿಕಾಣಿ ಹೂಡಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮುಂದುವರೆದ ಮಳೆಯ ಆರ್ಭಟ: ಅಲ್ಲಲ್ಲಿ ಭಾರೀ ಅನಾಹುತ

ABOUT THE AUTHOR

...view details