ಕರ್ನಾಟಕ

karnataka

ಸ್ಥಳ ಮಹಜರು ಮಾಡದೇ ಪೊಲೀಸರು ಮೃತದೇಹ ಕೊಂಡೊಯ್ದ ಆರೋಪ; ಮರಳಿ ಶವ ಪಡೆಯದ ಸಂಬಂಧಿಕರು!

By

Published : Oct 18, 2021, 12:40 PM IST

Updated : Oct 18, 2021, 2:09 PM IST

gundlupet-police-who-carried-the-dead-without-inquest

ಮೃತ ದೇಹದ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ದೇಹ ಹಸ್ತಾಂತರಿಸಲು ಪೊಲೀಸರು ಹೋದಾಗ ಮೃತನ ಸಂಬಂಧಿಕರು ಸ್ಥಳದ ಮಹಜರು ನಡೆಸದೆ ದೇಹವನ್ನು ತೆಗೆದುಕೊಂಡು ಹೋಗಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಹಾಗೆ ಮೃತ ದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದಾರೆ.

ಚಾಮರಾಜನಗರ: ಸ್ಥಳ ಮಹಜರು ಪೊಲೀಸರ ಪ್ರಾಥಮಿಕ ಕರ್ತವ್ಯವಾದರೂ ಕೂಡ ಇದನ್ನು ನಡೆಸದೇ ಮೃತದೇಹವನ್ನು ರವಾನಿಸಿರುವ ಗಂಭೀರ ಆರೋಪ ಗುಂಡ್ಲುಪೇಟೆ ಪೊಲೀಸರ ವಿರುದ್ಧ ಕೇಳಿಬಂದಿದೆ.

ಮೊಲದ ಬೇಟೆಗೆ ತೆರಳಿದ್ದವ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರರು ಜಾಣ ಕುರುಡುತನ ಪ್ರದರ್ಶಿಸಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ‌.

ಇನ್ನು ಯುವಕ ಮೃತನಾದ ನಂತರ ಆತನ ಜೊತೆ ತೆರಳಿದ್ದ ಇಬ್ಬರು ಗ್ರಾಮಕ್ಕೆ ಬಂದು ಗ್ರಾಮಸ್ಥರಿಗೆ ಮತ್ತು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಘಟನೆ ನಂತರ ಪೊಲೀಸರು ಸ್ಥಳದ ಮಹಜರು ನಡೆಸದೆ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನ ಮೇರೆಗೆ ಕುಟುಂಬಸ್ಥರ ಅನುಮತಿ ಇಲ್ಲದೇ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಸ್ಥಳ ಮಹಜರು ಮಾಡದೇ ಪೊಲೀಸರು ಮೃತದೇಹ ಕೊಂಡೊಯ್ದ ಆರೋಪ

ಹೆಚ್ಚಿನ ಓದಿಗೆ: ಮೊಲದ ಬೇಟೆಗೆ ತೆರಳಿದ ಮೂವರು ಯುವಕರಲ್ಲಿ ಓರ್ವ ಬಲಿ: ಅಕ್ರಮ ವಿದ್ಯುತ್ ಸ್ಪರ್ಶ ಶಂಕೆ

ಮೃತ ದೇಹದ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ದೇಹ ಹಸ್ತಾಂತರಿಸಲು ಪೊಲೀಸರು ಹೋದಾಗ ಮೃತನ ಸಂಬಂಧಿಕರು ಸ್ಥಳದ ಮಹಜರು ನಡೆಸದೆ ದೇಹವನ್ನು ತೆಗೆದುಕೊಂಡು ಹೋಗಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಮೃತ ದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದಾರೆ. ಸದ್ಯ, ಶವವನ್ನು ಸುರಕ್ಷಿತವಾಗಿಡಲು ಮೈಸೂರಿಗೆ ರವಾನಿಸಲಾಗಿದೆ.

ಘಟನೆ ಹಿನ್ನೆಲೆ :

ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಕುಮಾರ್(27) ಎಂಬಾತ ಶನಿವಾರ ರಾತ್ರಿ ಮೊಲ ಬೇಟೆಯಾಡಲು ತೆರಳಿದ್ದ ವೇಳೆ ಚೌಡಹಳ್ಳಿ ಗ್ರಾಮದ ಜಮೀನೊಂದರಲ್ಲಿ ಬೆಳೆ ರಕ್ಷಣೆಗೆ ಹಾಕಲಾಗಿದ್ದ ಅಕ್ರಮ ವಿದ್ಯುತ್​ ಸ್ವರ್ಶಿಸಿ ಬಲಿಯಾಗಿದ್ದಾನೆ‌. ಇಂದು ರೈತ ಸಂಘದ ಕಾರ್ಯಕರ್ತರೊಟ್ಟಿಗೆ ಮೃತನ ಸಂಬಂಧಿಕರು ಗುಂಡ್ಲುಪೇಟೆ ಪೊಲೀಸರ ವಿರುದ್ಧ ಪ್ರತಿಭಟಿಸಲು ಮುಂದಾಗಿದ್ದಾರೆ.

Last Updated :Oct 18, 2021, 2:09 PM IST

ABOUT THE AUTHOR

...view details