ಕರ್ನಾಟಕ

karnataka

ಮಾದಪ್ಪನ ದರ್ಶನ ಪಡೆದು ಹಿಂತಿರುಗುವಾಗ ಅಪಘಾತ: ಬೈಕ್ ಸವಾರ ಸಾವು

By

Published : Sep 28, 2019, 3:29 PM IST

ಮಲೆ ಮಹದೇಶ್ವರನ‌ ದರ್ಶನ ಪಡೆದು ಹಿಂತಿರುಗುವಾಗ ಆಟೋ-ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಹನೂರು ಸಮೀಪದ ಎಲ್ಲೆಮಾಳ‌ ತಿರುವಿನಲ್ಲಿ ನಡೆದಿದೆ.

ಮಾದಪ್ಪನ ದರ್ಶನ ಪಡೆದು ಹಿಂತಿರುಗುವಾಗ ಅಪಘಾತ: ಬೈಕ್ ಸವಾರ ಸಾವು

ಚಾಮರಾಜನಗರ:ಮಹಾಲಯ ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರನ‌ ದರ್ಶನ ಪಡೆದು ಹಿಂತಿರುಗುವಾಗ ಆಟೋ- ಬೈಕ್ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಹನೂರು ಸಮೀಪದ ಎಲ್ಲೆಮಾಳ‌ ತಿರುವಿನಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ‌ ಮಲ್ಲಿಪುರ ಗ್ರಾಮದ ಕುಳ್ಳಣ್ಣ ಎಂಬವರ ಮಗ ಸುರೇಶ್(25) ಮೃತ ದುರ್ದೈವಿ.‌

ಅದೇ ಗ್ರಾಮದ ಹಿಂಬಂದಿ ಸವಾರ ನಾಗೇಂದ್ರ ಎಂಬಾತನ ಕಾಲು ಮುರಿದಿದ್ದು, ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾಗಿದೆ.

ಮಲೆಮಹದೇಶ್ವರ ಬೆಟ್ಟಕ್ಕೆ ಹನೂರಿನಿಂದ ತೆರಳುತ್ತಿದ್ದ ಗೂಡ್ಸ್ ಆಟೋ ತೀವ್ರ ತಿರುವಿನಲ್ಲಿ ಮುಖಾಮುಖಿಯಾದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details