ಕರ್ನಾಟಕ

karnataka

ಹನೂರು: ತಪ್ಪಿಸಿಕೊಂಡು ಓಡುತ್ತಿದ್ದರೂ ಅಟ್ಟಿಸಿಕೊಂಡು ಬಂದು ವ್ಯಕ್ತಿಗೆ ತುಳಿದ ಕಾಡಾನೆ

By

Published : Jan 28, 2022, 5:26 PM IST

ಚಂಗಡಿ ಗ್ರಾಮದ ವೆಂಕಟಮುನಿಗೌಡ ಅವರು ಕೌದಳ್ಳಿಗೆ ನಡೆದುಕೊಂಡು‌ ಹೋಗುವಾಗ ಆನೆಯೊಂದು ಎದುರಾಗಿದೆ. ಓಡಿ ಹೋಗಿ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಅಟ್ಟಾಡಿಸಿಕೊಂಡು ಬಂದ ಆನೆ ಕಾಲನ್ನು ತುಳಿದು ಪೇರಿ ಕಿತ್ತಿದೆ..

elephant-attacked-on-man-in-chamarajanagara
ತಪ್ಪಿಸಿಕೊಂಡು ಓಡುತ್ತಿದ್ದರೂ ಅಟ್ಟಿಸಿಕೊಂಡು ಬಂದು ವ್ಯಕ್ತಿಗೆ ತುಳಿದ ಕಾಡಾನೆ

ಚಾಮರಾಜನಗರ :ಕಾಡು ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಆನೆ ದಾಳಿ ಮಾಡಿ ತುಳಿದಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ನಡೆದಿದೆ.

ಹನೂರು ತಾಲೂಕಿನ ಚಂಗಡಿ ಗ್ರಾಮದ ವೆಂಕಟಮುನಿಗೌಡ ಎಂಬುವರು ಗಾಯಗೊಂಡವರು. ಚಂಗಡಿ ಗ್ರಾಮದಿಂದ ಕೌದಳ್ಳಿಗೆ ನಡೆದುಕೊಂಡು‌ ಹೋಗುವಾಗ ಆನೆಯೊಂದು ಎದುರಾಗಿದೆ. ಓಡಿ ಹೋಗಿ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಅಟ್ಟಾಡಿಸಿಕೊಂಡು ಬಂದ ಆನೆ ಕಾಲನ್ನು ತುಳಿದು ಪೇರಿ ಕಿತ್ತಿದೆ.

ಸದ್ಯ, ವೆಂಕಟಮುನಿಗೌಡ ಅವರ ಕಾಲು‌ ಮುರಿದಿದ್ದು, ಸೊಂಟಕ್ಕೂ ಪೆಟ್ಟಾಗಿದೆ. ಆನೆ ದಾಳಿ ಮಾಹಿತಿ ಅರಿತ ಚಂಗಡಿ ಗ್ರಾಮಸ್ಥರು 108 ಆ್ಯಂಬುಲೆನ್ಸ್ ಮೂಲಕ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಓದಿ:ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಡಿಪ್ರೆಷನ್‌ ಕಾರಣ?

TAGGED:

ABOUT THE AUTHOR

...view details