ಕರ್ನಾಟಕ

karnataka

ಚಾಮರಾಜನಗರ ಡಿಸಿ ಭೇಟಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

By

Published : Jan 22, 2022, 1:12 PM IST

ತಮ್ಮನ್ನು ಭೇಟಿ ಮಾಡಲು ಕೋವಿಡ್​ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಡಿಸಿ ಚಾರುಲತಾ ಸೋಮಲ್ ಮೌಖಿಕ ಆದೇಶ ನೀಡಿದ್ದಾರೆ.

Covid Negative Report is mandatory for visits Chamarajanagar DC
ಡಿಸಿ ಚಾರುಲತಾ ಸೋಮಲ್

ಚಾಮರಾಜನಗರ:ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಲು, ಅಹವಾಲು ಸಲ್ಲಿಸಬೇಕಾದರೆ ಕೋವಿಡ್ ನೆಗೆಟಿವ್ ವರದಿ ಇರಬೇಕು. ಇಲ್ಲದಿದ್ದರೇ, ಡಿಸಿ ಭೇಟಿಯ ಅವಕಾಶವೇ ಸಿಗುವುದಿಲ್ಲ‌.

ಚಾಮರಾಜನಗರ ಡಿಸಿ ಭೇಟಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಹೌದು‌‌‌. ತಮ್ಮನ್ನು ಭೇಟಿ ಮಾಡಲು ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಡಿಸಿ ಚಾರುಲತಾ ಸೋಮಲ್ ಮೌಖಿಕ ಆದೇಶ ನೀಡಿದ್ದಾರೆ. ಡಿಸಿ ಆಪ್ತಶಾಖೆ ಸಿಬ್ಬಂದಿ ಕೋವಿಡ್​ ನೆಗೆಟಿವ್ ವರದಿ ಇಲ್ಲದವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ಈ ನಿಯಮ ಕಳೆದ ಮೂರು ದಿನಗಳಿಂದ ಜಾರಿಯಾಗಿದ್ದು, ಜಿಲ್ಲಾಡಳಿತ ಭವನದಲ್ಲೇ ಟೆಸ್ಟಿಂಗ್ ಸೆಂಟರ್ ಕೂಡ ಆರಂಭಿಸಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಮೈಸೂರು ಜಿಲ್ಲಾಧಿಕಾರಿ ಮತ್ತು ಕುಟುಂಬ ವರ್ಗಕ್ಕೆ ಕೋವಿಡ್​ ಸೋಂಕು ತಗುಲಿದ್ದು ಹಾಗೂ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಈ ನಿಯಮ ಜಾರಿಯಾಗಿದೆ ಎಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿದೆ.

ಹಿಂದಿನ ಡಿಸಿಯಾಗಿದ್ದ ಡಾ.ಎಂ.ಆರ್.ರವಿ, ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದರೂ, ಮಾಸ್ಕ್ ಯಾವಾಗಲೂ ಧರಿಸುತ್ತಿದ್ದರೂ ಕೊರೊನಾ ಸೋಂಕು ತಗುಲಿರುವುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:ಜನರಿಗೆ ಆದಾಯ ಬರುವ ಕೆಲಸ ನೀಡಿ ನಂತರ ಬೆಲೆ ಏರಿಕೆ ಮಾಡಿ : ಸರ್ಕಾರಕ್ಕೆ ಡಿಕೆಶಿ ಸಲಹೆ

ABOUT THE AUTHOR

...view details