ಚಾಮರಾಜನಗರ: ನೆರೆ ರಾಜ್ಯಗಳಲ್ಲಷ್ಟೇ ಅಲ್ಲದೇ ವಿದೇಶಗಳಿಂದಲೂ ನಂದಿನಿ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ನೇಪಾಳ, ಭೂತಾನ್ ದೇಶಗಳಿಗೆ ಇದೀಗ ಚಾಮರಾಜನಗರ ಹಾಲು ಒಕ್ಕೂಟ (ಚಾಮುಲ್) ಹಾಲು ಪೂರೈಕೆ ಮಾಡುತ್ತಿದೆ.
ಚಾಮುಲ್ನಿಂದ ಭೂತಾನ್ಗೆ 22.5 ಲಕ್ಷ ಲೀ. ಗುಡ್ ಲೈಫ್ ಗೋಲ್ಡ್ ಹಾಲು ರಫ್ತಾಗುತ್ತಿದ್ದು, ನೇಪಾಳಕ್ಕೂ ಬೇಡಿಕೆಗೆ ತಕ್ಕಂತೆ ಹಾಲು ಪೂರೈಕೆ ಮಾಡಲಾಗ್ತಿದೆ. ಇದರೊಟ್ಟಿಗೆ, ಅಸ್ಸಾಂ ರೈಫಲ್ಸ್, ಜಮ್ಮು ಮತ್ತು ಕಾಶ್ಮೀರದ ಸೈನಿಕರಿಗೂ ಹಾಲು ಪೂರೈಕೆ ಮಾಡಲಾಗ್ತಿದೆ. ಅಸ್ಸಾಂ ರೈಫಲ್ಸ್ಗೆ ಪ್ರತಿ ತಿಂಗಳು 4 ಲಕ್ಷ ಲೀ. ಗುಡ್ ಲೈಫ್ ಗೋಲ್ಡ್ ಹಾಲು ನೀಡಲಾಗ್ತಿದೆ.