ಕರ್ನಾಟಕ

karnataka

ಚಾಮರಾಜನಗರ: ಬಾಲಕಿಗೆ ಕುಕ್ಕಿದ ಕೋಳಿ; ಒಂದು ವಾರದಿಂದ ಶಾಲೆಗೆ ಹೋಗದ ಮಕ್ಕಳು!

By ETV Bharat Karnataka Team

Published : Nov 29, 2023, 12:41 PM IST

Updated : Nov 29, 2023, 2:43 PM IST

Parents protest against school: ಶಾಲೆ ಸುತ್ತ ಕಾಂಪೌಂಡ್​ ಕಟ್ಟಿ ಸೂಕ್ತ ರಕ್ಷಣೆ ಕೊಡುವವರೆಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.

Children did not go to school for a week afraid of chicken
ಕೋಳಿಗೆ ಹೆದರಿ ಒಂದು ವಾರದಿಂದ ಶಾಲೆಗೆ ಹೋಗದ ಮಕ್ಕಳು

ಕೋಳಿಗೆ ಹೆದರಿ ಒಂದು ವಾರದಿಂದ ಶಾಲೆಗೆ ಹೋಗದ ಮಕ್ಕಳು

ಚಾಮರಾಜನಗರ: ಕೋಳಿ ಮಾಡಿದ ಎಡವಟ್ಟು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ 1 ವಾರದಿಂದ ಮಕ್ಕಳು ಶಾಲೆಗೆ ತೆರಳದಿರುವ ಘಟನೆ ಹನೂರು ತಾಲೂಕಿನ ಪೆದ್ದನಪಾಳ್ಯ ಗ್ರಾಮದಲ್ಲಿ ನಡೆದಿದೆ. ಕಳೆದ ಗುರುವಾರ ಶಾಲೆಯಲ್ಲಿ ಒಂದನೇ ತರಗತಿ ಬಾಲಕಿಗೆ ಕೋಳಿ ಕುಕ್ಕಿ ಗಾಯಗೊಳಿಸಿದ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮಕ್ಕಳಿಗೆ ಸೂಕ್ತ ರಕ್ಷಣೆ ಕೊಡುವ ತನಕ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಬಿಇಒ, ತಾಲೂಕು ಇಒ ಅವರು ಬಂದು ಮನವೊಲಿಸಲು ಪ್ರಯತ್ನಿಸಿದರೂ, ಪಾಲಕರು ಪಟ್ಟು ಸಡಿಲಿಸಿಲ್ಲ. ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಿರುವುದರಿಂದ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಾಲಕರು ತಿಳಿಸಿದ್ದು, ಅದರಂತೆ ಮಕ್ಕಳು ಶಾಲೆಯತ್ತ ಮುಖ ಮಾಡಿ 1 ವಾರವಾಗಿದೆ.

ಶಾಲೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ವಿನಾಕಾರಣ ಹಸು ಕರುಗಳನ್ನು ಕಟ್ಟುತ್ತಿದ್ದು, ಕೋಳಿಗಳನ್ನು ಮೇಯಲು ಬಿಡುತ್ತಿರುವ ಪರಿಣಾಮ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಶಾಲಾ ಸುತ್ತಲೂ ಕಾಂಪೌಂಡ್ ಕಟ್ಟಬೇಕು, ಶಾಲಾ ಸಮಯದಲ್ಲಿ ಖಾಸಗಿ ವ್ಯಕ್ತಿಗಳು ಶಾಲಾ ಆವರಣ ಪ್ರವೇಶಿಸದಂತೆ ನಿರ್ಬಂಧ ಹೇರಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ಪೋಷಕರು: ಬಾಲಕಿಗೆ ಕೋಳಿ ಕುಕ್ಕಿ ಗಾಯಗೊಳಿಸಿದ್ದರಿಂದ ಶಾಲೆಗೆ ಬೀಗ ಜಡಿದು ಮಕ್ಕಳನ್ನು ಪಾಲಕರು ಮನೆಗೆ ಕರೆದೊಯ್ದಿದ್ದರು. ಮಕ್ಕಳನ್ನು ಶಾಲೆಗೆ ಕಳುಹಿಸದೇ ಪೋಷಕರು ಪ್ರತಿಭಟನೆ ನಡೆಸಿ, ಶಿಕ್ಷಣ ಇಲಾಖೆ ವಿರುದ್ಧ ಅಕ್ರೋಶ ಹೊರಹಾಕಿದ್ದರು.

ಶಾಲೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಹಸು, ಕರುಗಳನ್ನು ಕಟ್ಟುತ್ತಿದ್ದು, ಕೋಳಿಗಳನ್ನು ಮೇಯಲು ಬಿಡುತ್ತಿರುವ ಹಿನ್ನೆಲೆಯಲ್ಲಿ ಘಟನೆ ಜರುಗಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:ಬಿಬಿಎಂಪಿ ಅಧೀನದ ನರ್ಸರಿ ಸ್ಕೂಲ್ ಕಟ್ಟಡ ಕುಸಿತ ; ತಪ್ಪಿದ ಭಾರಿ‌ ಅನಾಹುತ

Last Updated : Nov 29, 2023, 2:43 PM IST

ABOUT THE AUTHOR

...view details