ಕರ್ನಾಟಕ

karnataka

''No Vaccine, No Ration​'ಗೆ ಟೀಕೆ, ಆಕ್ಷೇಪ: ಚಾಮರಾಜನಗರ ಜಿಲ್ಲಾಧಿಕಾರಿ ಯೂ ಟರ್ನ್!

By

Published : Sep 1, 2021, 1:24 PM IST

'ನೋ‌ ವ್ಯಾಕ್ಸಿನೇಷನ್‌- ನೋ ರೇಷನ್, ನೋ ಪೆನ್ಷನ್' ಜಾರಿ ಸಂಬಂಧ ಚಾಮರಾಜನಗರ ಜಿಲ್ಲಾಧಿಕಾರಿ ತಮ್ಮ ತೀರ್ಮಾನದಿಂದ ಯೂ‌ ಟರ್ನ್ ತೆಗೆದುಕೊಂಡಿದ್ದಾರೆ.

chamarajanagara-dc-clarification-on-no-vaccination-no-ration-no-pension-decision
'ನೋ ವ್ಯಾಕ್ಸಿನ್-ನೋ ರೇಷನ್​'ಗೆ ಟೀಕೆ, ಆಕ್ಷೇಪ: ಚಾಮರಾಜನಗರ ಜಿಲ್ಲಾಧಿಕಾರಿ ಯೂ ಟರ್ನ್...!

ಚಾಮರಾಜನಗರ: 'ನೋ‌ ವ್ಯಾಕ್ಸಿನೇಷನ್‌- ನೋ ರೇಷನ್, ನೋ ಪೆನ್ಷನ್' ಜಾರಿ ಸಂಬಂಧ ಸಾಮಾಜಿಕ ಜಾಲತಾಣ ಹಾಗೂ ರಾಜಕೀಯ ಮುಖಂಡರಿಂದ ಆಕ್ಷೇಪ, ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಮ್ಮ ತೀರ್ಮಾನದಿಂದ ಯೂ‌ ಟರ್ನ್ ತೆಗೆದುಕೊಂಡಿದ್ದಾರೆ.

ಹೌದು, ಈ ಸಂಬಂಧ ಇಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಆ ರೀತಿಯ ಯಾವುದೇ ಅಧಿಕೃತ ಆದೇಶವನ್ನು ಇದುವರೆವಿಗೂ ನೀಡಿಲ್ಲವಾದ್ದರಿಂದ ಪಿಂಚಣಿದಾರರಿಗೆ ಮತ್ತು ಪಡಿತರದಾರರಿಗೆ ಸೇವೆ ನಿರಾಕರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರವಷ್ಟೇ 'ಈಟಿವಿ ಭಾರತ'ದೊಂದಿಗೆ ಡಿ ಸಿ ಮಾತನಾಡಿ, ಸೆ.1ರಿಂದ ಲಸಿಕೆ ಪಡೆಯದವರಿಗೆ ಪಡಿತರ, ಪಿಂಚಣಿ ತಡೆ ಹಿಡಿಯುವ ಕಾರ್ಯಕ್ರಮ ರೂಪಿಸಲಾಗಿದೆ.‌ ಈಗಲೂ ಲಸಿಕೆ ಪಡೆಯಲು ಅಸಡ್ಡೆ ತೋರುವವರಿಗೆ, ಉದಾಸೀನ ಪ್ರವೃತ್ತಿಯವರು ಇರುವುದರಿಂದ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದರು. ಇದಾದ ಬಳಿಕ, ಡಿಸಿ ಅವರ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜಕೀಯ ಮುಖಂಡರು, ನೆಟ್ಟಿಗರು ಪರ ವಿರೋಧ ಚರ್ಚೆ ನಡೆಸಿದ್ದರು.

ಪತ್ರಿಕಾ ಪ್ರಕಟಣೆ

ಅಲ್ಲದೆ, ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ಸುಧಾಕರ್, ನೋ ವ್ಯಾಕ್ಸಿನ್-ನೋ ರೇಷನ್ ನೋ ಪೆನ್ಷನ್ ವಿಚಾರ ಸರ್ಕಾರದ ನಿರ್ಧಾರವಲ್ಲ. ಈ ರೀತಿಯಾಗಿ ಹೇಳಿದ್ದರೆ ಅದನ್ನ ಸರ್ಕಾರವೂ ಒಪ್ಪುವುದಿಲ್ಲ. ಚಾಮರಾಜನಗರದ ಜಿಲ್ಲಾಧಿಕಾರಿ ರವಿಯವರು, ಲಸಿಕೆ ಹಾಕಿಸಿಕೊಳ್ಳಿ ಎಂದು ಜಾಗೃತಿ ಮೂಡಿಸುವ ವೇಳೆ ಹೇಳಿರಬಹುದು. ಈ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ. ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಮನವರಿಕೆ ಮಾಡಿಕೊಡುತ್ತೇವೆ‌. ಇದಕ್ಕೆ ಆಡಳಿತ-ವಿರೋಧ ಪಕ್ಷ ಎಲ್ಲಾ ಸೇರಿ ಮನವರಿಕೆ ಮಾಡಿಕೊಡೋಣ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕಲಾಪಕ್ಕೆ ಹಾಜರಾಗುವ ಮುನ್ನ ಹೃದಯಾಘಾತ: ಕೊರ್ಟ್ ಆವರಣದಲ್ಲಿ ಚಾಮರಾಜನಗರ ನಗರಸಭಾ ಸದಸ್ಯ ಸಾವು

ABOUT THE AUTHOR

...view details