ಕರ್ನಾಟಕ

karnataka

ರಾಜ್ಯದಲ್ಲಿ ಜೆಡಿಎಸ್​ ಮಾಯವಾಗಿದೆ, ನಮ್ಮ ಎದುರಾಳಿ ಕಾಂಗ್ರೆಸ್ ಮಾತ್ರ : ಸಚಿವ ಆರ್​.ಅಶೋಕ್

By

Published : Nov 20, 2021, 3:30 PM IST

Updated : Nov 20, 2021, 8:52 PM IST

ಚಾಮರಾಜನಗರದಲ್ಲಿ ನಡೆಯುತ್ತಿರುವ ಜನಸ್ವರಾಜ್​ ಸಮಾವೇಶದಲ್ಲಿ ಮಾತನಾಡಿದ ಸಚಿವ ಆರ್​.ಅಶೋಕ್​, ಕುಟುಂಬ ರಾಜಕಾರಣದಿಂದ ರಾಜ್ಯದಲ್ಲಿ ಜೆಡಿಎಸ್ ಮಾಯವಾಗಿದೆ. ಮೇಲ್ಮನೆ ಚುನಾವಣೆಯಲ್ಲಿ ನಮ್ಮ ಎದುರಾಳಿ ಕಾಂಗ್ರೆಸ್ ಮಾತ್ರ ಎಂದು ಹೇಳಿದರು..

BJP Janaswaraj Convention in Chamarajanagar, BJP Janaswaraj Convention in Chamarajanagar news, ಚಾಮರಾಜನಗರದಲ್ಲಿ ಬಿಜೆಪಿ ಜನಸ್ವರಾಜ್ ಸಮಾವೇಶ, ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ಆರ್ ಅಶೋಕ್
ಸಚಿವ ಆರ್​.ಅಶೋಕ್

ಚಾಮರಾಜನಗರ :ಕುಟುಂಬ ರಾಜಕಾರಣದಿಂದ ರಾಜ್ಯದಲ್ಲಿ ಜೆಡಿಎಸ್ ಮಾಯವಾಗಿದೆ. ಮೇಲ್ಮನೆ ಚುನಾವಣೆಯಲ್ಲಿ ನಮ್ಮ ಎದುರಾಳಿ ಕಾಂಗ್ರೆಸ್ ಮಾತ್ರ ಎಂದು ಕಂದಾಯ ಸಚಿಚ ಆರ್‌.ಅಶೋಕ್ ಹೇಳಿದರು.

ನಗರದಲ್ಲಿ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶ (BJP Janaswaraj Convention) ದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸಮಾವೇಶ ಏಕೆ ಮಾಡುತ್ತಿದ್ದಾರೆಂದು ಹೆಚ್​ಡಿಕೆ ಕೇಳಿದ್ದಾರೆ. ನಾವು ಸಮಾವೇಶ ಮಾಡಿದರೆ ಜನ ಬರುತ್ತಾರೆ ಅದಕ್ಕೆ ಮಾಡುತ್ತಿದ್ದೇವೆ. ನೀವು ಮಾಡಿದರೆ ಸಭೆ ಖಾಲಿ ಹೊಡೆಯಲಿದೆ ಎಂದು ತಿರುಗೇಟು ನೀಡಿದರು.

ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ಸಚಿವ ಆರ್.ಅಶೋಕ್

ಕಾಂಗ್ರೆಸ್‌ನ ಕೂಡ ಜನ ತಿರಸ್ಕರಿಸುತ್ತಿದ್ದಾರೆ‌ :ಇಡೀ ದೇಶದಲ್ಲಿ ಕಾಂಗ್ರೆಸ್‌ನ ಕೂಡ ಜನ ತಿರಸ್ಕರಿಸುತ್ತಾ ಬರುತ್ತಿದ್ದಾರೆ‌. ನಾನು ಎಲ್ಲಾ ಭಾಗ್ಯಗಳನ್ನು ಕೊಟ್ಟೆ ಎಂದು ಸಿದ್ದರಾಮಯ್ಯ ಬೀಗುತ್ತಾರೆ. ಆದರೆ, ಜನಪರ ಆಡಳಿತ ಕೊಟ್ಡಿದ್ದರೇ ಜನ ಯಾಕೆ ತಿರಸ್ಕರಿಸುತ್ತಿದ್ದರು‌. ಅಲ್ಪಸಂಖ್ಯಾತರಿಗಾಗಿ ಶಾದಿ ಭಾಗ್ಯ, ಟಿಪ್ಪು ಜಯಂತಿ ಮಾಡಿದರು‌. ಬೇರೆ ವರ್ಗದ ಬಡವರು ಅವರ ಕಣ್ಣಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.

ಜನ ಮೆಚ್ಚುವಂತೆ ಸಿಎಂ ಬೊಮ್ಮಾಯಿ ಆಡಳಿತ :ಸರಳ, ಸಜ್ಜನಿಕೆಯಿಂದ ಜನ ಮೆಚ್ಚುವಂತೆ ಸಿಎಂ ಬೊಮ್ಮಾಯಿ ಆಡಳಿತ ನಡೆಸುತ್ತಿದ್ದಾರೆ. ಅಧಿಕಾರ ವಹಿಸಿಕೊಂಡ ದಿನದಿಂದಲೇ ಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್ (Zero Traffic) ತಿರಸ್ಕರಿಸಿ ಜನಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಕೃಷಿ ಕಾಯ್ದೆ ಹಿಂಪಡೆದಿದ್ದು ಮೋದಿ ಅವರ ದೊಡ್ಡತನ :ಕೃಷಿ ಕಾಯ್ದೆ ಹಿಂಪಡೆದಿದ್ದು(Farm laws repeal) ಪ್ರಧಾನಿ ಮೋದಿ ಅವರ ದೊಡ್ಡತನ, ಒಂದು ವರ್ಗದ ರೈತರು ಒಪ್ಪದಿದ್ದಕ್ಕೇ ಕಾಳಜಿಯಿಂದ ಕೃಷಿ ಕಾಯ್ದೆ ವಾಪಸ್ ಪಡೆದಿದ್ದಾರೆ‌‌. ಆದರೆ, ಕೃಷಿ ಕಾಯ್ದೆ ಬಗ್ಗೆ ಹೋರಾಟವನ್ನೇ ಮಾಡದ ಕಾಂಗ್ರೆಸ್ ಪಕ್ಷದವರು ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಿದ್ದಾರೆ. ಅವರು ಪ್ರತಿಭಟನೆಗೆ ತೆರಳಿದ್ದಾಗ ರೈತರು ವಾಪಸ್ ಕಳುಹಿಸಿದ್ದರು. ಈಗ ತಾವೇ ವಾಪಸ್ ಪಡೆದವರಂತೆ ಬೀದಿಯಲ್ಲಿ ಕುಣಿತಿದ್ದಾರೆ ಎಂದರು.

ಪರಿಷತ್ ಚುನಾವಣೆ ಬಳಿಕ ನೆರೆ ಪರಿಹಾರ ಘೋಷಣೆ :ಅಕಾಲಿಕ ಮಳೆಗೆ ರಾಜ್ಯದಲ್ಲಿ (Heavy rain in Karnataka) ಸಾಕಷ್ಟು ಹಾನಿಯಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದನ್ನು ಸರ್ಕಾರ ಘೋಷಣೆ ಮಾಡಲು ಆಗುತ್ತಿಲ್ಲ. ವಿಧಾನ ಪರಿಷತ್ ಚುನಾವಣೆ (Karnataka council election) ಮುಗಿದ ಕೂಡಲೇ ಪರಿಹಾರ ಒದಗಿಸುವ ಕೆಲಸವಾಗಲಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅಂದ್ರೇನೆ ಸುಳ್ಳು: ಸಚಿವ ಈಶ್ವರಪ್ಪ

ಸಿದ್ದರಾಮಯ್ಯ ಅಂದ್ರೇನೆ ಸುಳ್ಳು, ಚಾಮುಂಡೇಶ್ವರಿಯಲ್ಲಿ ಸೋತಂತೆ ಮುಂದಿನ ಚುನಾವಣೆಯಲ್ಲೂ ಬಾದಾಮಿಯಲ್ಲಿ ಅವರು ಸೋಲ್ತಾರೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಸಚಿವ ಈಶ್ವರಪ್ಪ ಹೇಳಿಕೆ

ನಗರದಲ್ಲಿ ಜನಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಮುಖಂಡರಿಗೆ ಟಿಕೆಟ್ ಕೇಳಲು ಹೋಗಿದ್ದ ಕೈ ಕಾರ್ಯಕರ್ತರಿಗೆ ತನ್ನನ್ನು ಸೋಲಿಸಿ‌ ಈಗ ಬಂದ್ದಿದ್ದೀರಿ ನಾಚಿಕೆ ಆಗಲ್ವಾ ಎಂದಿದ್ದಾರೆ. ಮುಂದಿನ‌ ಚುನಾವಣೆಯಲ್ಲೂ ಅವರನ್ನು ಸೋಲಿಸಿಯೇ ಸೋಲಿಸುತ್ತಾರೆ. ಇದು ಅವರ ಪರಿಸ್ಥಿತಿ ಎಂದು ಕಿಡಿಕಾರಿದರು.

ಬಣ ರಾಜಕೀಯದಿಂದ ಕಾಂಗ್ರೆಸ್ ಅಲ್ಪಸಂಖ್ಯಾತರ ಸಭೆಯಲ್ಲಿ ವೇದಿಕೆಯಿಂದ ಸಿದ್ದರಾಮಯ್ಯ ಇಳಿದಂತೆ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷವನ್ನು ಓಡಿಸುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅವ್ರು ಎರಡು ಸೀಟು ಗೆಲ್ಲಲ್ಲ ಅಂತಿದ್ರು ಅವರಿಗೆ ಸಿಕ್ಕಿದ್ದು ಒಂದೇ ಒಂದು ನಾಮ. ಬಾಯಿಗೆ ಬಂದಂತೆ ದಿನ ಮಾತನಾಡುವ ಕಾಂಗ್ರೆಸ್ ನವರಿಗೆ ಯಾವಾಗ ಬುದ್ಧಿ ಬರಲಿದೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಓದಿ:ಇನ್ನೂ 5 ದಿನ ಭಾರಿ ಮಳೆ: ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಬೆಳಗಾವಿ ಡಿಸಿ ಸೂಚನೆ

Last Updated : Nov 20, 2021, 8:52 PM IST

ABOUT THE AUTHOR

...view details