ಕರ್ನಾಟಕ

karnataka

ಮುಂಗಾರು ಅಬ್ಬರಕ್ಕೆ ಭೋರ್ಗರೆಯುತ್ತಿದೆ ಭರಚುಕ್ಕಿ..ಮಂಜಿನಲ್ಲಿ ಮಿಂದೆದ್ದ ಕೆ.ಗುಡಿ

By

Published : Jul 24, 2021, 2:26 PM IST

Updated : Jul 25, 2021, 11:48 AM IST

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತ ಮೈದುಂಬಿ ಭೋರ್ಗರೆಯುತ್ತಿದೆ.

bharachukki
ಭರಚುಕ್ಕಿ

ಚಾಮರಾಜನಗರ: ನಿರಂತರ ಮಳೆ ಮತ್ತು, ಕಬಿನಿ ಜಲಾಶಯದ ಹೊರಹರಿವು ಹೆಚ್ಚಾದ ಪರಿಣಾಮ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದ್ದು, ಜಿಲ್ಲೆಯ ಅರಣ್ಯ ಪ್ರದೇಶಗಳು ಮಂಜಿನಲ್ಲಿ ಮಿಂದೇಳುತ್ತಿವೆ.

ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿರುವ ಭರಚುಕ್ಕಿಯ ವೈಭವ ರುದ್ರ ರಮಣೀಯವಾಗಿದೆ. ಈ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಜನರು ಹಾಗೂ ಪ್ರವಾಸಿಗರು ಧಾವಿಸುತ್ತಿದ್ದಾರೆ. ಹಾಲ್ನೊರೆಯ ನೀರನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದ್ದು, ಹಳೇ ಮೈಸೂರು ಭಾಗದಲ್ಲಾಗುತ್ತಿರುವ ಸತತ ಮಳೆ ಮತ್ತು ಕಬಿನಿ ಹೊರ ಹರಿವಿನಿಂದಾಗಿ ಗಗನಚುಕ್ಕಿ- ಭರಚುಕ್ಕಿ ಜಲಪಾತಗಳಲ್ಲಿ ಜಲ ವೈಯ್ಯಾರ ಸೃಷ್ಟಿಯಾಗಿದೆ.

ಮೈದುಂಬಿ ಭೋರ್ಗರೆಯುತ್ತಿರುವ ಭರಚುಕ್ಕಿ

ಶಿವನ ಸಮುದ್ರದ ಸಮೂಹ ದೇವಾಲಯವನ್ನು ದಾಟುತ್ತಿದ್ದಂತೆ ಕಾವೇರಿಯ ನೋಟ ಅದ್ಭುತವಾಗಿದ್ದು, ವೆಸ್ಲಿ ಸೇತುವೆ ಬಳಿ ವಿಶಾಲವಾಗಿ ಹರಿಯುವ ನದಿಯ ಸೊಬಗು ಕಾಣುವುದೇ ಹಬ್ಬವಾಗಿದೆ. ಮತ್ತೊಂದೆಡೆ ಜಿಲ್ಲೆಯ ಕೆ.ಗುಡಿ, ಬಿಳಿಗಿರಿರಂಗನ ಬೆಟ್ಟಗಳು ಸಹ ಮಂಜಿನಿಂದ ಮಿಂದೇಳುತ್ತಿದ್ದು ಊಟಿ ವಾತಾವರಣ ಸೃಷ್ಟಿಯಾಗಿದೆ‌.

ಮುಂಗಾರು ಅಬ್ಬರಕ್ಕೆ ಭೋರ್ಗರೆಯುತ್ತಿದೆ ಭರಚುಕ್ಕಿ

ಕೊರೊನಾ‌ ಅನ್​ಲಾಕ್ ಬಳಿಕ ಮಳೆಯನ್ನೂ ಲೆಕ್ಕಿಸದೆ ಪ್ರವಾಸಿಗರು‌ ಜಿಲ್ಲೆಯ ವೀಕೆಂಡ್ ಸ್ಪಾಟ್​ಗಳಿಗೆ ಭೇಟಿ ನೀಡುತ್ತಿದ್ದು, ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ.

Last Updated :Jul 25, 2021, 11:48 AM IST

ABOUT THE AUTHOR

...view details