ಕರ್ನಾಟಕ

karnataka

ದುನಿಯಾ ವಿಜಯ್ ಡೈಲಾಗ್ ಮೇಲೆ ಡೈಲಾಗ್.. ದುಶ್ಚಟಗಳಿಂದ ದೂರ ಇರುವಂತೆ ಅಭಿಮಾನಿಗಳಿಗೆ ಕಿವಿಮಾತು

By

Published : Sep 25, 2021, 7:27 AM IST

Updated : Sep 25, 2021, 11:49 AM IST

actor Vijay dialogue
ನಟ ವಿಜಯ್ ಡೈಲಾಗ್ ()

ಮದ್ಯಪಾನ ಹಾಗೂ ಧೂಮಪಾನದಂತಹ ದುಶ್ಚಟಗಳಿಂದ ದೂರ ಉಳಿಯಬೇಕು. ವಿಶ್ವಚೇತನ ವಿದ್ಯಾ ಸಂಸ್ಥೆಯ ಸದುಪಯೋಗದಿಂದ ಮಕ್ಕಳು ಚೆನ್ನಾಗಿ ಓದಿಕೊಂಡು ಜೀವನ‌ ರೂಪಿಸಿಕೊಳ್ಳಬೇಕು ಎಂದು ಕೊಳ್ಳೇಗಾಲದ ವಿಶ್ವಚೇತನ ವಿದ್ಯಾ ಸಂಸ್ಥೆಯ ಆವರಣದಲ್ಲಿ ನೆರೆದಿದ್ದವರಿಗೆ ನಟ ದುನಿಯಾ ವಿಜಯ್​​ ಕಿವಿಮಾತು ಹೇಳಿದ್ದಾರೆ.

ಕೊಳ್ಳೇಗಾಲ(ಚಾಮರಾಜನಗರ):ಅಭಿಮಾನಿಗಳ ಬೇಡಿಕೆಗೆ ಮಣಿದು ಡೈಲಾಗ್ ಮೇಲೆ ಡೈಲಾಗ್ ಹೊಡೆದು ಮನರಂಜಿಸಿದ ನಟ ದುನಿಯಾ ವಿಜಯ್ ತಮ್ಮನ್ನು ನೋಡಲು ಮುಗಿಬಿದ್ದಿದ್ದ ಯುವ ಅಭಿಮಾನಿಗಳಿಗೆ ಕಿವಿಮಾತು ಕೂಡ ಹೇಳಿದರು.

ಕೊಳ್ಳೇಗಾಲದ ವಿಶ್ವಚೇತನ ವಿದ್ಯಾ ಸಂಸ್ಥೆಯ ಆವರಣದಲ್ಲಿ ದಿ. ಹೆಚ್.ಕೃಷ್ಣಸ್ವಾಮಿ ಅವರ ಪುಣ್ಯಸ್ಮರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಉಚಿತ ಬೃಹತ್ ಆರೋಗ್ಯ ಚಿಕಿತ್ಸೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ದಿ.ಹೆಚ್. ಕೃಷ್ಣಸ್ವಾಮಿ ಅವರ ಪುಣ್ಯಸ್ಮರಣೆಯಲ್ಲಿ ನಾಗರೀಕರಿಗೆ ಉಚಿತವಾಗಿ ವಿವಿಧ ಆರೋಗ್ಯ ಚಿಕಿತ್ಸೆ ಏರ್ಪಡಿಸಿರುವುದು ಉತ್ತಮ ಕೆಲಸವಾಗಿದೆ. ಇಂತಹ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿರುವುದು ನನಗೆ ಬಹಳ ಸಂತೋಷವಾಗಿದೆ ಎಂದರು.

ನಟ ವಿಜಯ್ ಡೈಲಾಗ್.. ಜೊತೆಗೆ ಕಿವಿಮಾತು

ಇದನ್ನೂ ಓದಿ:'ಆ ಮಧುರ ಕ್ಷಣ ಇಂದಿಗೂ ಸವಿನೆನಪು' : 33 ವರ್ಷಗಳ ಹಿಂದಿನ ಫೋಟೋ ಹಂಚಿಕೊಂಡ ಪವರ್ ಸ್ಟಾರ್

ಹೆಚ್.ಕೆ. ಟ್ರಸ್ಟ್ ನಡೆಸುತ್ತಿರುವ ವಿಶ್ವಚೇತನ ವಿದ್ಯಾ ಸಂಸ್ಥೆಯ ಸದುಪಯೋಗದಿಂದ ಮಕ್ಕಳು ಚೆನ್ನಾಗಿ ಓದಿಕೊಂಡು ಜೀವನ‌ ರೂಪಿಸಿಕೊಳ್ಳಬೇಕು. ಬದುಕಿನ ಹಾದಿಯಲ್ಲಿ ಬರುವ ಕಷ್ಟ-ಸುಖವನ್ನು ನಿಭಾಯಿಸಬೇಕು ಎಂದರು.

ಮದ್ಯಪಾನ-ಧೂಮಪಾನದಿಂದ ದೂರವಿರಿ:

ಯುವಕರಲ್ಲಿ ನಾನು ಮನವಿ ಮಾಡುವುದೇನೆಂದರೆ, ಮದ್ಯಪಾನ ಹಾಗೂ ಧೂಮಪಾನದಂತಹ ದುಶ್ಚಟಗಳಿಂದ ದೂರ ಉಳಿಯಬೇಕು. ಇಂತಹ ಕೆಟ್ಟ ಹವ್ಯಾಸಗಳು ಜೀವನವನ್ನು ನಾಶಮಾಡಿ ಬಿಡುತ್ತದೆ. ಇಂದಿನಿಂದಲೇ ಎಲ್ಲರೂ ಮನಸ್ಸಿನಲ್ಲಿ ಸಂಕಲ್ಪಮಾಡಿ ಮದ್ಯಪಾನ-ಧೂಮಪಾನದಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.

ಅಭಿಮಾನಿಗಳಿಗೆ ಫುಲ್ ಖುಶ್ :

ವಿಜಯ್ ಅವರು ಶಿವಾಜಿನಗರ, ದುನಿಯಾ, ಸಲಗ, ಜಂಗ್ಲಿ ಇನ್ನಿತರ ತಮ್ಮ ಸಿನಿಮಾದ ಡೈಲಾಗ್ ಹೇಳಿ ಅಭಿಮಾನಿಗಳನ್ನು ಮನಂಜಿಸಿದರು. ಈ ವೇಳೆ ಅಭಿಮಾನಿಗಳ ಹರ್ಷೋಧ್ಗಾರ ಹೆಚ್ಚಾಗಿತ್ತು.

Last Updated :Sep 25, 2021, 11:49 AM IST

ABOUT THE AUTHOR

...view details