ಕರ್ನಾಟಕ

karnataka

ಥಿಯೇಟರ್​​​​ಗಳಿಗೆ ಬೈರಾಗಿ ಭೇಟಿ.. ಚಾಮರಾಜನಗರ ರಾಯಭಾರಿಯಾಗಲು ಸಿದ್ಧ ಎಂದ ಶಿವಣ್ಣ!!

By

Published : Jul 5, 2022, 6:29 PM IST

ಬೈರಾಗಿ ಚಿತ್ರದ ಪ್ರಚಾರಕ್ಕಾಗಿ ನಟ ಶಿವರಾಜ್ ಕುಮಾರ್ ಇಂದು ಜಿಲ್ಲೆಯ ಥಿಯೇಟರ್​​​ಗಳಿಗೆ ಭೇಟಿ ನೀಡಿದರು.

actor-shivarajkumar-visited-theatres-in-chamarajnagar
ಥಿಯೇಟರ್ ಗಳಿಗೆ ಬೈರಾಗಿ ಭೇಟಿ... ಚಾಮರಾಜನಗರ ರಾಯಭಾರಿಯಾಗಲು ಸಿದ್ಧ ಎಂದ ಶಿವಣ್ಣ!!

ಚಾಮರಾಜನಗರ: ಬೈರಾಗಿ ಚಿತ್ರದ ಪ್ರಚಾರಕ್ಕಾಗಿ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಾಮರಾಜನಗರ ಮತ್ತು‌ ಕೊಳ್ಳೇಗಾಲ ಚಿತ್ರಮಂದಿರಗಳಿಗೆ ಭೇಟಿ ನೀಡಿದರು. ಕೊಳ್ಳೇಗಾಲದ ಶ್ರೀನಿವಾಸ ಚಿತ್ರಮಂದಿರಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಅವರನ್ನು ಶಾಸಕ ಎನ್.ಮಹೇಶ್ ಬರಮಾಡಿಕೊಂಡರು. ನಟ ಶಿವರಾಜ್ ಕುಮಾರ್ ಜೊತೆ ಕಾಫಿ ಸೇವಿಸಿ ಪುನೀತ್ ಪುತ್ಥಳಿ ನಿರ್ಮಾಣ ಬಗ್ಗೆ ಶಾಸಕ ಮಹೇಶ್ ಜೊತೆ ಚರ್ಚೆ ನಡೆಸಿದರು. ಜೊತೆಗೆ ಭರಚುಕ್ಕಿ ಜಲಪಾತದ ಬಳಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಶಾಸಕರು ತಿಳಿಸಿದರು.

ಥಿಯೇಟರ್ ಗಳಿಗೆ ಬೈರಾಗಿ ಭೇಟಿ... ಚಾಮರಾಜನಗರ ರಾಯಭಾರಿಯಾಗಲು ಸಿದ್ಧ ಎಂದ ಶಿವಣ್ಣ!!

ನೆಚ್ಚಿನ ನಟ ಶಿವರಾಜ್ ಕುಮಾರ್ ಅವರನ್ನು ನೋಡಲು ನೂರಾರು ಅಭಿಮಾನಿಗಳು ಸೇರಿದ್ದರು. ಈ ವೇಳೆ, ಅಭಿಮಾನಿಗಳು ಅಪ್ಪು,ಅಪ್ಪು ಎಂದು ಘೋಷಣೆ ಕೂಗಿದರು. ಬಳಿಕ ಹಾಡು ಹೇಳಿ ರಂಜಿಸಿದ ಶಿವರಾಜ್ ಕುಮಾರ್ 'ಪುನೀತ್ ನನ್ನ ರಕ್ತ ಹಂಚಿಕೊಂಡು ಹುಟ್ಟಿರುವ ತಮ್ಮ, ಅವರಿಗೆ ನಾನು ಕೊಡುವಷ್ಟು ಗೌರವ, ಪ್ರೀತಿ ಇನ್ಯಾರು ಕೊಡಲ್ಲ ಎಂದು ಹೇಳಿದರು.

ಅಭಿಮಾನಿಯ ಟೀ ಸವಿದ ಶಿವಣ್ಣ: ಕೊಳ್ಳೇಗಾಲದ ಬಳಿಕ ಚಾಮರಾಜನಗರದ ಅಭಿಮಾನಿಯೊಬ್ಬರ ಟೀ ಅಂಗಡಿಗೆ ಆಗಮಿಸಿದ ಶಿವಣ್ಣ ಚಹಾ ಸೇವಿಸಿ ಅಭಿಮಾನಿ ಮಂಜುವಿನ 5 ವರ್ಷಗಳ ಆಸೆ ಈಡೇರಿಸಿದರು. ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಚಿತ್ರಕ್ಕೆ ಪ್ರೋತ್ಸಾಹ, ಉತ್ತಮ ವಿಮರ್ಶೆ ಬರುತ್ತಿದೆ. ಜನರು ಈ ಮಟ್ಟಿಗೆ ಬೆಂಬಲ, ಪ್ರೋತ್ಸಾಹ ನೀಡಿದರೆ ಮತ್ತಷ್ಟು ವಿಭಿನ್ನ ಚಿತ್ರಗಳನ್ನು ಮಾಡಲು ಪ್ರೇರಣೆ ಸಿಕ್ಕಂತಾಗಲಿದೆ, ಒಳ್ಳೆಯ ಸಂದೇಶ, ಮನರಂಜನೆ ಇರು ಚಿತ್ರ ಬೈರಾಗಿ ಎಂದು ಹೇಳಿದರು.

ರಾಯಭಾರಿಯಾಗಲು ಸಿದ್ಧ : ಈ ವೇಳೆ, ಚಾಮರಾಜನಗರ ರಾಯಭಾರಿ ಆಗುವ ಅವಕಾಶ ಬಂದರೇ ಒಪ್ಪಿಕೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, ಚಾಮರಾಜನಗರ ನಮ್ಮ ಊರು, ರಾಯಭಾರಿಯಾಗುವ ಭಾಗ್ಯ ಬಂದರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.

ಓದಿ :ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಕುಡಿದ ಶಿವಣ್ಣ: 5 ವರ್ಷದ ಕನಸು - ನನಸು

ABOUT THE AUTHOR

...view details