ಕರ್ನಾಟಕ

karnataka

ಚಾಮರಾಜನಗರ: ಚಿಕನ್ ಊಟ ತಿಂದು 30 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

By

Published : Jul 17, 2023, 11:03 AM IST

Updated : Jul 17, 2023, 12:40 PM IST

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ರಾತ್ರಿ ಚಿಕನ್​ ಊಟ ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ.

ಚಿಕನ್ ಊಟ ತಿಂದ ಮಕ್ಕಳು ಅಸ್ವಸ್ಥ
ಚಿಕನ್ ಊಟ ತಿಂದ ಮಕ್ಕಳು ಅಸ್ವಸ್ಥ

ಚಾಮರಾಜನಗರ: ಚಿಕನ್ ಊಟ ಸೇವಿಸಿದ ಮಕ್ಕಳು ವಾಂತಿ, ಬೇಧಿಯಾಗಿ ಅಸ್ವಸ್ಥಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಒಟ್ಟು 30 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದು, 15 ಮಂದಿಗೆ ಬೇಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಕೆಲ ದಿನಗಳ ಹಿಂದೆ ಬೀದರ್​ನ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ, ಭೇದಿಯಿಂದ ಅನಾರೋಗ್ಯಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹುಮನಾಬಾದ್ ತಾಲೂಕಿನ ನಿಂಬೂರ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ ನಡೆದಿತ್ತು. ಮೊದಲಿಗೆ ಕೆಲವೇ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ವಾಂತಿ, ಭೇದಿ ಕಂಡು ಬಂದಿದೆ. ಬಳಿಕ ಮನೆಗೆ ತೆರಳಿದ ಇನ್ನುಳಿದ ವಿದ್ಯಾರ್ಥಿಗಳಲ್ಲೂ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮನೆಯಲ್ಲಿ ಅಕ್ರಮ ಕಡವೆ ಮಾಂಸ ಪತ್ತೆ :ಮನೆಯಲ್ಲಿ ಅಕ್ರಮವಾಗಿ ಕಡವೆ ಮಾಂಸ ಶೇಖರಿಸಿಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹನೂರು ತಾಲೂಕಿನ ಜಲ್ಲಿ ಪಾಳ್ಯ ಗ್ರಾಮದ ರಾಜು ಆಲಿಯಸ್ ಕೊಲಕಾರ್ ರಾಜು ಬಂಧಿತ ಆರೋಪಿ. ಹನೂರು ತಾಲೂಕಿನ ಜೆಲ್ಲಿಪಾಳ್ಯ ಗ್ರಾಮದ ರಾಜು ಎಂಬವರ ಮನೆಯಲ್ಲಿ ಅಕ್ರಮವಾಗಿ ಕಡವೆ ಮಾಂಸ ಶೇಖರಿಸಿಟ್ಟಿರುವ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಗಿರಿಧರ ಜಿ.ಕೆ ಹಾಗೂ ಉಪವಲಯ ಅರಣ್ಯಾಧಿಕಾರಿ ಗಿರೀಶ್ ಎಸ್ ಹಾಗೂ ಅಮೀನ್ ಸಾಬ್ ದಾಳಿ ನಡೆಸಿದ್ದರು. ಆರೋಪಿಯಿಂದ ಕಡವೆ ಚರ್ಮ, ಎರಡು ಕಾಲು, ಎರಡು ಒಂಟಿ ನಳಿಕೆಯ ನಾಡ ಬಂದೂಕುಗಳು, ಮದ್ದು ಗುಂಡುಗಳು ಮತ್ತು ಚೂರಿ ಮಚ್ಚುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜೂಜಾಟ- ನಾಲ್ವರು ಸೆರೆ :ಜೂಜಾಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ನಡೆದಿದೆ. ಕೋಡಹಳ್ಳಿ ಗ್ರಾಮದ ಮಹದೇವಶೆಟ್ಟಿ, ಗೋವಿಂದ ಶೆಟ್ಟಿ, ಸಿದ್ದರಾಜು, ಸ್ವಾಮಿ ಬಂಧಿತರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸುವ ಜೊತೆಗೆ ಪಣಕ್ಕಿಟ್ಟಿದ್ದ ಹಣ ವಶಕ್ಕೆ ಪಡೆದಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಯಾದಗಿರಿ: ವಾಂತಿ, ಭೇದಿ ಪ್ರಕರಣಗಳು ಉಲ್ಬಣ.. 40ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು

Last Updated : Jul 17, 2023, 12:40 PM IST

ABOUT THE AUTHOR

...view details