ಕರ್ನಾಟಕ

karnataka

ರೈತರ ಬೆಳೆಗೆ ಸರ್ಕಾರದಿಂದ ಪರಿಹಾರ ನೀಡಲು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ

By

Published : Sep 2, 2020, 12:56 AM IST

ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ
ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ

ಬಸವಕಲ್ಯಾಣ (ಬೀದರ್​) : ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಉದ್ದು ಮತ್ತು ಹೆಸರು ಬೆಳೆಗಳಿಗೆ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಧನ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.

ನಗರದ ರೈತ ಭವನದಲ್ಲಿ ನಡೆದ ಸಂಘದ ತಾಲೂಕು ಮಟ್ಟದ ಮಾಸಿಕ ಸಭೆಯಲ್ಲಿ ಚರ್ಚಿಸಿದ ರೈತ ಸಂಘದ ಪ್ರಮುಖರು, ಬೆಲೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಂಗಾರು ಹಂಗಾಮಿನಲ್ಲಿ ಬೆಳೆಯಲಾದ ಹೆಸರು ಮತ್ತು ಉದ್ದಿನ ಬೆಳೆಗಳು ಅಧಿಕ ಮಳೆಗೆ ಹಾನಿಯಾಗಿವೆ. ಬೆಳೆದ ಅಲ್ಪ, ಸ್ವಲ್ಪ ಬೆಳೆಗಳಿಗೂ ಬೆಲೆ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಬೆಂಬಲ ಯೋಜನೆಯಡಿಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಕಾಡು ಪ್ರಾಣಿಗಳಿಂದ ರೈತರ ಬೆಳೆಗೆ ಆದ ಹಾನಿಗೆ ಪರಿಹಾರವನ್ನು ನೀಡಲು ಅರಣ್ಯ ಇಲಾಖೆಯವರಿಗೆ ಒತ್ತಾಯ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಭೂ-ಸ್ವಾಧೀನ, ವಿದ್ಯುತ್​ ಚ್ಛಕ್ತಿ ಮತ್ತು ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿಗೆ ಆಗ್ರಹ ಮಾಡಲಾಯಿತು. ಬಹಳಷ್ಟು ರೈತರಿಗೆ ಮೊಬೈಲ್ ಬಳಕೆ ಮಾಡುವುದು ಗೊತ್ತಿರುವುದಿಲ್ಲ. ಅದಕ್ಕಾಗಿ ಕೃಷಿ ಇಲಾಖೆಯವರೇ ಪ್ರತಿಯೊಬ್ಬ ರೈತನ ಬೆಳೆ ಸಮೀಕ್ಷೆ ಮಾಡಬೇಕು.

ಉದೋಗ ಖಾತರಿ ಯೋಜನೆಡಿಯಲ್ಲಿ ನಮ್ಮ ಹೊಲ ನಮ್ಮ ದಾರಿ ಯೋಜನೆಡಿಯಲ್ಲಿ ಪ್ರತಿಯೊಬ್ಬ ರೈತನ ಹೊಲಕ್ಕೆ ಹೋಗಲು ರಸ್ತೆ ನಿರ್ಮಾಣ ಮಾಡಬೇಕು. ರಾತ್ರಿ ಹೊತ್ತಿನಲ್ಲಿ ರೈತರಿಗೆ ಸಿಂಗಲ್ ಫೆಸ್ ವಿದ್ಯುತ್​ ಪೊರೈಸಬೇಕು. ತರಕಾರಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಎ.ಪಿ.ಎಂ.ಸಿ, ಮುಂದಾಗಬೇಕು ಎಂದು ಒತ್ತಾಯಿಸಲಾಯಿತು.

ABOUT THE AUTHOR

...view details