ಕರ್ನಾಟಕ

karnataka

ಬಸವಕಲ್ಯಾಣದಲ್ಲಿ ಭಾರೀ ಮಳೆ... ಮನೆಗಳಿಗೆ ನೀರು ನುಗ್ಗಿ ಅವಾಂತರ

By

Published : Jul 2, 2020, 2:56 PM IST

Updated : Jul 2, 2020, 4:39 PM IST

ಬೀದರ್​ ಜಿಲ್ಲೆಯ ಬಸವಕಲ್ಯಾಣದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಹೀಗಾಗಿ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

rain water
ಮಳೆ ನೀರು

ಬಸವಕಲ್ಯಾಣ: ನಗರ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಲಾಲ್​ ತಲಾಬ್ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ, 50ಕ್ಕೂ ಅಧಿಕ ಮನೆಗಳ ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.

ಮಳೆ ನೀರಿನಿಂದ ಜನರು ಅತಂತ್ರರಾದ ಸುದ್ದಿ ತಿಳಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಅವರನ್ನು ಸುರಕ್ಷಿತವಾಗಿ ಮನೆಗಳಿಂದ ಹೊರಕ್ಕೆ ಕರೆ ತರುವಲ್ಲಿ ಶ್ರಮಿಸಿದರು.

ಮಳೆ ನೀರು ಹರಿದು ಹೋಗಲು ಸಮರ್ಪಕವಾದ ವ್ಯವಸ್ಥೆ ಇಲ್ಲದ ಕಾರಣ ಘಟನೆ ನಡೆದಿದೆ. ನೀರಿನಿಂದಾಗಿ ಮನೆಗಳಲ್ಲಿಯ ಅನೇಕ ವಸ್ತುಗಳು ಹಾನಿಯಾಗುತ್ತಿವೆ. ಇದು ಇವತ್ತಿನ ಸಮಸ್ಯೆ ಮಾತ್ರವಲ್ಲ, ಸುಮಾರು ವರ್ಷಗಳಿಂದ ಈ ಇದೇ ರೀತಿಯ ದುಸ್ಥಿತಿ ಎದುರಾಗುತ್ತಿದೆ ಜನ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮನೆಗಳಿಗೆ ನುಗ್ಗಿದ ನೀರು

ಈ ಅವಾಂತರ ಸೃಷ್ಟಿಯಾಗುತ್ತಿರುವ ಸಂಬಂಧ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Last Updated : Jul 2, 2020, 4:39 PM IST

ABOUT THE AUTHOR

...view details