ಬೀದರ್:ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧವಾದ ಬೆನ್ನಲ್ಲೇ ಅಕ್ರಮ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಭಾಲ್ಕಿ ಡಿವೈಎಸ್ಪಿ ಡಾ. ದೇವರಾಜ್ ಬಿ. ನೇತೃತ್ವದಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದ ಕೊಳೆ ನಾಶ ಮಾಡಲಾಗಿದೆ.
ಭಾಲ್ಕಿ ಡಿವೈಎಸ್ಪಿಯಿಂದ ಸರಣಿ ದಾಳಿ: ಕಳ್ಳಭಟ್ಟಿ ಅಡ್ಡೆ ಧ್ವಂಸ, ಅಪಾರ ಪ್ರಮಾಣದ ಕೊಳೆ ನಾಶ!
ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧವಾದ ಬೆನ್ನಲ್ಲೇ ಅಕ್ರಮ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಭಾಲ್ಕಿ ಡಿವೈಎಸ್ಪಿ ಡಾ. ದೇವರಾಜ್ ಬಿ. ನೇತೃತ್ವದಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದ ಕೊಳೆ ನಾಶ ಮಾಡಲಾಗಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಬಿರಿ ಗ್ರಾಮದ ಬಳಿಯ ಎಂಎಲ್ಎ ತಾಂಡದ ಹೊರವಲಯದಲ್ಲಿ ಅಕ್ರಮವಾಗಿ ತಯಾರಿಸುತ್ತಿದ್ದ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ 200 ಲೀಟರ್ ಕೊಳೆ ನಾಶ ಮಾಡಿ, 2 ಲಿಟರ್ ಕಳ್ಳಭಟ್ಟಿ ಜಪ್ತಿ ಮಾಡಿಕೊಂಡಿದ್ದಾರೆ.
ಅಲ್ಲದೆ ಭಾಲ್ಕಿ ತಾಲೂಕಿನ ನಾವದಗಿ ತಾಂಡದ ಮೇಲೆ ದಾಳಿ ಮಾಡಿದ ತಂಡ, ಅಕ್ರಮವಾಗಿ ತಯಾರಿಸುತ್ತಿದ್ದ 600 ಲೀಟರ್ ಕೊಳೆ ನಾಶ ಮಾಡಿದ್ದು, 28 ಲೀಟರ್ ಕಳ್ಳಭಟ್ಟಿ ಜಪ್ತಿ ಮಾಡಿಕೊಂಡಿದ್ದಾರೆ. ಕಮಲಾಕರ ಎಂಬಾತನನ್ನು ಬಂಧಿಸಿರುವ ಪೊಲೀಸರು, ಆರೋಪಿಯಿಂದ 2 ಕ್ಯಾನ್ಗಳಲ್ಲಿ ಸಾಗಾಟ ಮಾಡ್ತಿದ್ದ ಕಳ್ಳಭಟ್ಟಿ ಜಪ್ತಿ ಮಾಡಿಕೊಂಡಿದ್ದಾರೆ.