ಕರ್ನಾಟಕ

karnataka

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ: ಬಿಎಸ್‌ವೈ ಭಾವಚಿತ್ರಕ್ಕೆ ಕ್ಷೀರಾಭಿಷೇಕ

By

Published : Nov 17, 2020, 7:46 PM IST

ಕೆಲ ದಿನಗಳ ಹಿಂದೆ ಮರಾಠ ಸಮುದಾಯಕ್ಕೆ ಹಾಗೂ ಅಂಬಿಗರ ಚೌಡಯ್ಯ ನಿಗಮಕ್ಕೆ ಸರ್ಕಾರದಿಂದ ಸೂಕ್ತ ಅನುದಾನ ನೀಡಲಾಗಿದೆ. ಇದೀಗ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂ ಉತ್ತಮವಾಗಿ ಸ್ಪಂದಿಸಿದ್ದು, ಸಂತಸ ಮೂಡಿಸಿದೆ ಎಂದು ಉಮೇಶ ಬಿರಬಿಟ್ಟೆ ಅಟ್ಟೂರ್ ಹೇಳಿದ್ದಾರೆ.

anointing of milk to bs yadiyurappa photo
ಬಿಎಸ್‌ವೈ ಭಾವಚಿತ್ರಕ್ಕೆ ಕ್ಷೀರಾಭಿಷೇಕ

ಬಸವಕಲ್ಯಾಣ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ವೀರಶೈವ-ಲಿಂಗಾಯತ ಸಮುದಾಯಕ್ಕೆ ಮಹತ್ವದ ಕೊಡುಗೆ ನೀಡಿದ್ದು ಹರ್ಷ ತಂದಿದೆ ಎಂದು ಕೇಂದ್ರ ಆಹಾರ ನಿಗಮ ಮಂಡಳಿ ಸದಸ್ಯ ಉಮೇಶ ಬಿರಬಿಟ್ಟೆ ಅಟ್ಟೂರ್ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಮರಾಠ ಸಮುದಾಯಕ್ಕೆ ಹಾಗೂ ಅಂಬಿಗರ ಚೌಡಯ್ಯ ಅವರ ನಿಗಮಕ್ಕೆ ಸರ್ಕಾರದಿಂದ ಸೂಕ್ತ ಅನುದಾನ ನೀಡಲಾಗಿದೆ. ಇದೀಗ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂ ಉತ್ತಮವಾಗಿ ಸ್ಪಂದಿಸಿದ್ದು, ಸಂತಸ ಮೂಡಿಸಿದೆ ಎಂದರು.

ಬಿಎಸ್‌ವೈ ಭಾವಚಿತ್ರಕ್ಕೆ ಕ್ಷೀರಾಭಿಷೇಕ

ನಿಗಮ ಸ್ಥಾಪನೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ನಡೆ ಸ್ವಾಗತಿಸಿ ನಗರದ ಬಸವೇಶ್ವರ ವೃತದಲ್ಲಿ ಉಮೇಶ ಬಿರಬಿಟ್ಟೆ ನೇತೃತ್ವದಲ್ಲಿ ಬಿಎಸ್​​ವೈ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಲಾಯಿತು. ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ABOUT THE AUTHOR

...view details