ಕರ್ನಾಟಕ

karnataka

ಅಗ್ನಿವೀರರ ಸೇನಾ ನೇಮಕಾತಿಯಲ್ಲಿ 525 ಅಭ್ಯರ್ಥಿಗಳು ಉತ್ತೀರ್ಣ

By

Published : Dec 10, 2022, 4:12 PM IST

ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ ಆರನೆಯ ದಿನದ ಅಗ್ನಿಪಥ ಅಗ್ನಿವೀರರ ಸೇನಾ ನೇಮಕಾತಿಯಲ್ಲಿ 4268 ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 525 ಅಭ್ಯರ್ಥಿಗಳು ಮಾತ್ರ ಓಟದಲ್ಲಿ ಉತ್ತೀರ್ಣರಾಗಿದ್ದಾರೆ.

Army Recruitment of Firefighters
ಅಗ್ನಿವೀರರ ಸೇನಾ ನೇಮಕಾತಿ

ಬೀದರ್‌: ಜಿಲ್ಲಾಡಳಿತದ ಸಹಕಾರದೊಂದಿಗೆ ಸೇನಾ ನೇಮಕಾತಿ ವಿಭಾಗದವರು ನೆಹರೂ ಕ್ರೀಡಾಂಗಣದಲ್ಲಿ ನಡೆಸಿದ ಆರನೆಯ ದಿನದ ಅಗ್ನಿಪಥ ಅಗ್ನಿವೀರರ ಸೇನಾ ನೇಮಕಾತಿಯಲ್ಲಿ 4268 ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 525 ಅಭ್ಯರ್ಥಿಗಳು ಮಾತ್ರ ಓಟದಲ್ಲಿ ಉತ್ತೀರ್ಣರಾಗಿದ್ದಾರೆ.

ಅಭ್ಯರ್ಥಿಗಳು ಭಾರಿ ಸಂಖ್ಯೆಯಲ್ಲಿ ಬಂದ ಕಾರಣ ಅವರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸೇನಾ ಸಿಬ್ಬಂದಿ ಪ್ರಯಾಸ ಪಡಬೇಕಾಯಿತು. ಇಂದಿನಿಂದ ಬೆಳಗಾವಿ ಜಿಲ್ಲೆಯ ಸಂಪಗಾಂವ್​ ತಾಲೂಕಿನ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಯಲಿದೆ.

ಇದನ್ನೂ ಓದಿ:ಅಗ್ನಿಪಥ್​ ರ‍್ಯಾಲಿ ಇಂದಿನಿಂದ ಆರಂಭ: 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಂದ ನೋಂದಣಿ

ABOUT THE AUTHOR

...view details