ಕರ್ನಾಟಕ

karnataka

ರಾಣೆಬೆನ್ನೂರು ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಬಿಡುಗಡೆ: ಯಾರಾಗ್ತಾರೆ ನಗರಸಭಾ ಅಧ್ಯಕ್ಷೆ?

By

Published : Oct 8, 2020, 10:12 PM IST

ಎರಡು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ರಾಣೆಬೆನ್ನೂರು ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಬಿಡುಗಡೆಯಾಗಿದೆ.

Ranebennur
ರಾಣೆಬೆನ್ನೂರು

ರಾಣೆಬೆನ್ನೂರು:ಎರಡು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಬಿಡುಗಡೆಯಾಗಿದೆ.

ರಾಣೆಬೆನ್ನೂರು ನಗರಸಭೆಯ ಮೀಸಲಾತಿಯ ಪಟ್ಟಿ ಸಹ ಪ್ರಕಟವಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವು ಈ ಬಾರಿ ಮಹಿಳೆಯರ ಪಾಲಾಗಿವೆ. ಕಳೆದ ಬಾರಿ ಮೀಸಲಾತಿ ಪ್ರಕಟಿಸಿದ ಸಮಯದಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸತತ ಎರಡು ವರ್ಷದ ನಂತರ ಇಂದು ರಾಜ್ಯ ಸರ್ಕಾರ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಿದೆ.

ರಾಣೆಬೆನ್ನೂರು ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಬಿಡುಗಡೆಯಾಗಿದೆ.

ರಾಣೆಬೆನ್ನೂರು ನಗರಸಭಾ ಮೀಸಲಾತಿ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ. ಇನ್ನೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರಿಂದ ಬಹುತೇಕವಾಗಿ ರಾಣೆಬೆನ್ನೂರು ನಗರಸಭೆ ಮಹಿಳಾ ಮಣಿಗಳಿಗೆ ಎಂಬುದು ಖಾತ್ರಿಯಾಗಿದೆ.

ನಗರಸಭಾ ಸದಸ್ಯರಲ್ಲಿ ಹಿಂದುಳಿದ ವರ್ಗದ ಮೀಸಲಾತಿಯಲ್ಲಿ ಒಟ್ಟು ಎಂಟು ಮಹಿಳೆಯರು ಬರುತ್ತಾರೆ. ಬಿಜೆಪಿಯಿಂದ ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ರತ್ನವ್ವ ಪೂಜಾರ, ಉಷಾ ಚಿನ್ನಿಕಟ್ಟಿ, ಹೊನ್ನವ್ವ ಕಾಟಿ, ಕಾಂಗ್ರೆಸ್ ಪಕ್ಷದಿಂದ ಜಯಶ್ರಿ ಪಿಸೆ, ಚಂಪಾಕ ಬೀಸಲಹಳ್ಳಿ ಮತ್ತು ಕೆಪಿಜೆಪಿ ಪಕ್ಷದಿಂದ ಆರಿಫ್ ಖಾನಂ ಸೌದಗಾರ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ABOUT THE AUTHOR

...view details