ಕರ್ನಾಟಕ

karnataka

ಸಿಗದ ಆಂಬ್ಯುಲೆನ್ಸ್: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಬೈಕ್ ಮೇಲೆಯೇ ಕೊಂಡೊಯ್ದರು!

By

Published : May 11, 2021, 12:50 PM IST

Updated : May 11, 2021, 1:03 PM IST

ಹೊಸಪೇಟೆಯಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್​ ಬಾರದ ಕಾರಣ ಬೈಕ್​ ಮೇಲೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

Injured person took hospital by Bike in Hospete
ಗಾಯಗೊಂಡ ವ್ಯಕ್ತಿಗೆ ಬೈಕ್ ಮೇಲೆ ಕೊಂಡೊಯ್ದು ಆಸ್ಪತ್ರೆಗೆ ದಾಖಲು

ಹೊಸಪೇಟೆ:ನಗರದಲ್ಲಿ ಕಾಲು ಮುರಿತಗೊಂಡ ವ್ಯಕ್ತಿಯನ್ನು ಬೈಕ್ ಮೂಲಕ ಪುತ್ತೂರು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಬೈಕ್​ನಲ್ಲಿ ಬಿದ್ದು ಗಾಯಗೊಂಡಿದ್ದ ಹಿಂಬದಿ ಸವಾರನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್​ ಲಭ್ಯವಾಗಿಲ್ಲ. ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಬೈಕ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಬಂಧಿಯೊಬ್ಬರ ಮದುವೆಗೆ ಪರವಾನಗಿ ಪಡೆಯಲು ಹೊಸಪೇಟೆ ತಹಶೀಲ್ದಾರ್ ಕಚೇರಿಗೆ ಬಂದಿದ್ದ ವೇಳೆ ಘಟನೆ ಜರುಗಿದೆ.

ಗಾಯಗೊಂಡ ವ್ಯಕ್ತಿಗೆ ಬೈಕ್ ಮೇಲೆ ಕೊಂಡೊಯ್ದು ಆಸ್ಪತ್ರೆಗೆ ದಾಖಲು

ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳನ್ನ ಸಂಪೂರ್ಣವಾಗಿ ನಿಷೇಧಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ. ಆದರೂ ಸಹ ಪರವಾನಗಿ ಪಡೆದುಕೊಳ್ಳಲು ಬಂದಾಗ ದುರ್ಘಟನೆ ಸಂಭವಿಸಿದೆ.

Last Updated : May 11, 2021, 1:03 PM IST

TAGGED:

ABOUT THE AUTHOR

...view details