ಕರ್ನಾಟಕ

karnataka

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ಯಾಕಿಷ್ಟು ಆತುರ: ಟಪಾಲ್ ಗಣೇಶ್​​ ಪ್ರಶ್ನೆ

By

Published : Nov 17, 2020, 4:30 PM IST

ಮೂರು ಜಿಲ್ಲೆಗಳ ಭೇಟಿ ಕುರಿತು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿ ಕುರಿತು ಬಳ್ಳಾರಿಯಲ್ಲಿ ಹೋರಾಟಗಾರ ಟಪಾಲ್ ಗಣೇಶ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲೋ ಒಂದು ಕಡೆಗೆ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆದಿದೆಯೇನೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Illegal mining case; Tapal Ganesh Question to Janardhan Reddy
ಗಣಿ ಉದ್ಯಮಿ ಟಪಾಲ್ ಗಣೇಶ

ಬಳ್ಳಾರಿ: ನೆರೆಯ ಆಂಧ್ರ ಮತ್ತು ಕರ್ನಾಟಕ ರಾಜ್ಯದ ಗಡಿ ಗುರುತಿಸುವ ಕಾರ್ಯ (ಗಡಿ ಸರ್ವೇ) ಕೈಗೊಂಡಿರುವ ಹಿನ್ನೆಲೆ ಗಣಿ ಅಕ್ರಮದ ಪ್ರಮುಖ ರೂವಾರಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ಯಾಕಿಷ್ಟು ಆತುರ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್​ ಪ್ರಶ್ನಿಸಿದ್ದಾರೆ.

ಬಳ್ಳಾರಿಯ ತಮ್ಮ ನಿವಾಸದಲ್ಲಿ ಇಂದು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಗಡಿ ಧ್ವಂಸ ಹಾಗೂ ಗಡಿ ಗುರುತು ನಾಶಪಡಿಸಿರುವ ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿರುವ ಗಾಲಿ ರೆಡ್ಡಿಗೆ ಇಷ್ಟು ದಿನ ಬಳ್ಳಾರಿ ಬಗ್ಗೆ ಇರಲಾರದ ಕಾಳಜಿ ದಿಢೀರನೆ ಈಗ್ಯಾಕೆ ಬಂತು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಗಡಿ ಧ್ವಂಸ ಹಾಗೂ ಗಡಿ ಗುರುತು ನಾಶದ ಬಗ್ಗೆ ಹೋರಾಟಗಾರ ಟಪಾಲ್ ಗಣೇಶ ಆಕ್ರೋಶ

ನೆರೆಯ ಆಂಧ್ರದ ಕಡಪ, ಅನಂತಪುರ ಹಾಗೂ ಕರ್ನಾಟಕ ರಾಜ್ಯದ ಗಡಿಯಂಚಿನ ಬಳ್ಳಾರಿ ಜಿಲ್ಲೆಗೆ ಭೇಟಿ ಕೊಡಲು ಅನುಮತಿ ಕೋರಿ ನಿನ್ನೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಿಬಿಐ ಕೋರ್ಟ್ ಸುತಾರಾಂ ಒಪ್ಪಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಸಿಬಿಐ ಕೋರ್ಟ್​ಗೆ ಎರಡು ವಾರಗಳಲ್ಲಿ ಈ ಕುರಿತು ವಿಸ್ತ್ರೃತ ವರದಿ ನೀಡಲು ಸೂಚನೆ ನೀಡಿದೆ.

ಗಣಿ ಉದ್ಯಮಿ ಟಪಾಲ್ ಗಣೇಶ್​

ಗಣಿ ಅಕ್ರಮ ಹಾಗೂ ಗಡಿ ಧ್ವಂಸ ಪ್ರಕರಣದ ಆರೋಪ ಹೊತ್ತಿರುವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ ಈ ಮೂರು ಜಿಲ್ಲೆಗಳಿಗೆ ಭೇಟಿ ಕೊಡಲು ಅವಕಾಶ ಕಲ್ಪಿಸೋದಕ್ಕೆ ಹೊರಟಿರೋದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಭಾರೀ ಅನುಮಾನ ಮೂಡಿದೆ. ಎಲ್ಲೋ ಒಂದು ಕಡೆಗೆ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆಯೇನೋ ಎಂಬ ಸಂಶಯ ನನಗೆ ಮೂಡಿದೆ ಎಂದರು.

ABOUT THE AUTHOR

...view details