ಕರ್ನಾಟಕ

karnataka

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ವಿಜಯನಗರ ಜಿಲ್ಲೆ ಅದರ ರಾಜಧಾನಿ: ಆನಂದ್​ ಸಿಂಗ್​​

By

Published : Dec 15, 2022, 9:58 PM IST

ವಿಜಯನಗರ ನೆಲದ ಗುಣವೇ ವಿಶೇಷವಾಗಿದೆ. ಗತವೈಭವ ಸಾರಿದ ನಾಡು ಇದು. ಇಲ್ಲಿ ಕೈಗೊಂಡ ತೀರ್ಮಾನಗಳು, ಯಾವುದೇ ಯೋಜನೆಗಳು ತಪ್ಪಿದ ಇತಿಹಾಸವೇ ಇಲ್ಲ ಎಂದು ಸಚಿವ ಆನಂದ್​ ಸಿಂಗ್​​ ಹೇಳಿದ್ದಾರೆ.

if-uttara-karnataka-seperate-state-vijayanagara-will-be-capital-says-minister-anand-singh
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ವಿಜಯನಗರ ಜಿಲ್ಲೆ ಅದರ ರಾಜಧಾನಿ : ಸಚಿವ ಆನಂದ್​ ಸಿಂಗ್​​

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ವಿಜಯನಗರ ಜಿಲ್ಲೆ ಅದರ ರಾಜಧಾನಿ : ಸಚಿವ ಆನಂದ್​ ಸಿಂಗ್​​

ವಿಜಯನಗರ :ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ವಿಜಯನಗರ ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮತ್ತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಗರದ ಹೊರವಲಯದ ಭಟ್ರಳ್ಳಿ ಆಂಜನೇಯ ದೇಗುಲದ ಮೈದಾನದ ಬಳಿ ಬಿಜೆಪಿ ಜಿಲ್ಲಾ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಜಯನಗರ ನೆಲದ ಗುಣವೇ ವಿಶೇಷವಾಗಿದೆ. ಗತವೈಭವ ಸಾರಿದ ನಾಡು ಇದು. ಇಲ್ಲಿ ಕೈಗೊಂಡ ತೀರ್ಮಾನಗಳು, ಯಾವುದೇ ಯೋಜನೆಗಳು ತಪ್ಪಿದ ಇತಿಹಾಸವೇ ಇಲ್ಲ. ಆದ್ದರಿಂದ ಉತ್ತರ ಕರ್ನಾಟಕ ರಾಜ್ಯವಾದರೆ ನೂತನ ವಿಜಯನಗರ ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದರು.

ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ ಬಿಜೆಪಿ ಜಿಲ್ಲಾ ಕಚೇರಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ನಿಮಿತ್ತ ಕಚೇರಿ ಜಾಗದಲ್ಲಿ ಬೆಳಗಿನಿಂದ ವಿಶೇಷವಾಗಿ ಹೋಮ ಹವನಗಳನ್ನು ನಡೆಸಲಾಯಿತು. ಈ ಸಂದರ್ಭ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮುಖಂಡರಾದ ಅಶೋಕ್ ಜೀರೆ, ಸಾಲಿ ಸಿದ್ದಯ್ಯ, ದಿನಾ ಮಂಜುನಾಥ್, ಕವಿತಾ ಈಶ್ವರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಮಗಳ ಮದುವೆಯಲ್ಲಿ ಸಚಿವ ಆನಂದ್​ ಸಿಂಗ್‌ರಿಂದ ನಾಗಿನ್​ ಡ್ಯಾನ್ಸ್: ವಿಡಿಯೋ

ABOUT THE AUTHOR

...view details