ಕರ್ನಾಟಕ

karnataka

ಹನುಮಾನ್ ಜನ್ಮಭೂಮಿ ಕುರಿತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಖಂಡನೀಯ: ಗೋವಿಂದಾನಂದ ಸರಸ್ವತಿ ಸ್ವಾಮೀಜಿ

By

Published : May 7, 2021, 11:03 PM IST

ಟಿಟಿಡಿ ಇಡೀ ಸಮಾಜದ ಭಕ್ತರನ್ನು ದಾರಿತಪ್ಪಿಸುವ ಮತ್ತು ಮೋಸ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಎಂದು ಶ್ರೀ ಹುನುಮಾನ್​ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಆರೋಪಿಸಿದ್ದಾರೆ.

govindananda-saraswati-swamiji
ಗೋವಿಂದಾನಂದ ಸರಸ್ವತಿ ಸ್ವಾಮೀಜಿ

ಹೊಸಪೇಟೆ: ಹನುಮಾನ್ ಜನ್ಮಭೂಮಿ ಕುರಿತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದನ್ನು ಖಂಡಿಸಿ ಆಂಧ್ರಪ್ರದೇಶದ ಟಿಟಿಡಿಗೆ ಶ್ರೀ ಹುನುಮಾನ್​ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಅವರು ಪತ್ರ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಟಿಡಿಯು ಹನುಮನ ಜನ್ಮಸ್ಥಳದ ಕುರಿತ ದಾಖಲೆಗಳೊಂದಿಗೆ ಸಾಕ್ಷಿಗಳನ್ನು ಸೃಷ್ಟಿಸಿದೆ. ಎಂಟು ತಿಂಗಳ ಹಿಂದೆ ವಿದ್ವಾಂಸರು ಈ ದಾಖಲೆಗಳನ್ನು ಒಪ್ಪಿಗೆ ನೀಡಿ ಎಂದು ಹಿಂದೆ ಬಿದ್ದಿದ್ದರು. ಆದರೆ, ನಾವು ಅದರ ಅಪ್ರಾಮಾಣಿಕ ಗ್ರಂಥಗಳಿಗೆ ಒಪ್ಪಿಗೆ ನೀಡಲು ಹೋಗಿಲ್ಲ ಎಂದು ಸ್ವಾಮೀಜಿ ಅವರು ತಿಳಿಸಿದರು.

ಗೋವಿಂದಾನಂದ ಸರಸ್ವತಿ ಸ್ವಾಮೀಜಿ

ಟಿಟಿಡಿ ಇಡೀ ಸಮಾಜದ ಭಕ್ತರನ್ನು ದಾರಿತಪ್ಪಿಸುವ ಮತ್ತು ಮೋಸ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಹನುಮಾನ್ ಜನ್ಮಭೂಮಿ ಅಂಜನಾದ್ರಿಯಲ್ಲಿ ಸಾಕಷ್ಟು ದಾಖಲೆಗಳಿವೆ ಎಂದು ಹೇಳಿದರು.

ತಿರುಮಲ ತಿರುಪತಿ ಅವರು ಹೇಳುತ್ತಿರುವುದು ಅಸತ್ಯವಾಗಿದೆ. ಹನುಮಾನ್ ಅಂಜನಾದ್ರಿಯಲ್ಲಿ ಹುಟ್ಟಿರುವುದು ಯಾವುದೇ ಸಂಶಯವಿಲ್ಲ. ಈ ಬೆಟ್ಟದಲ್ಲಿ ಅಂಜನಿಯಮ್ಮ ತಪಸ್ಸು ಮಾಡಿರುವ ಕುರಿತು ಉಲ್ಲೇಖಗಳಿವೆ. ಅಲ್ಲಿ 50 ಗುಹೆಗಳಿವೆ. ಇಲ್ಲಿ ಹನುಮಾನ್ ಹುಟ್ಟಿರುವುದು ಎಲ್ಲರೂ ತಿಳಿದಿದೆ ಎಂದರು.

ಓದಿ:ಸುಳ್ಳು ಹೇಳುವ ಬಿಜೆಪಿಯವರಿಗೆ ಆತ್ಮಸಾಕ್ಷಿ ಹೋಗಲಿ, ಕನಿಷ್ಟಪಕ್ಷ ನಾಚಿಕೆಯೂ ಇಲ್ಲವೆ? : ದಿನೇಶ್ ಗುಂಡೂರಾವ್

ABOUT THE AUTHOR

...view details