ಕರ್ನಾಟಕ

karnataka

ಬಿಜೆಪಿ ನಾಯಕರು ಸುಳ್ಳು ಹೇಳುವುದಕ್ಕೆ ಹೆದರುವುದಿಲ್ಲ: ಶಾಸಕ ಯು.ಟಿ. ಖಾದರ್

By

Published : Jul 8, 2021, 8:28 PM IST

ಬಿಜೆಪಿಯ ವಾಟ್ಸ್ಆಪ್ ವಿಶ್ವವಿದ್ಯಾಲಯದಲ್ಲಿ ಬರುವಂತಹ ಸುದ್ದಿ ಸುಳ್ಳು ಎಂಬುದು ಜನರಿಗೆ ತಿಳಿಯಲಿ ಎಂದು ಶಾಸಕ ಯು. ಟಿ. ಖಾದರ್ ಹೇಳಿದ್ದಾರೆ.

u-t-khadar
ಶಾಸಕ ಯು. ಟಿ. ಖಾದರ್

ಹೊಸಪೇಟೆ(ವಿಜಯನಗರ): ಬಿಜೆಪಿಯವರು ಸುಳ್ಳು ಹೇಳುವುದಕ್ಕೆ ಹೆದರುವುದಿಲ್ಲ. ಆದರೆ ಕಾಂಗ್ರೆಸ್ ಸತ್ಯ ಹೇಳುವುದಕ್ಕೆ ಹಿಂದೇಟು ಹಾಕುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪಕ್ಷದವರು ಧೈರ್ಯವಾಗಿ‌ ಮಾತನಾಡಬೇಕು ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಯು. ಟಿ. ಖಾದರ್

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡೀಸೆಲ್​, ಪೆಟ್ರೋಲ್ ಏರಿಕೆಯನ್ನು ಖಂಡಿಸಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದಕ್ಕೆ ಉತ್ತರವನ್ನು ನೀಡಬೇಕು. ಬಿಜೆಪಿಯ ವಾಟ್ಸ್ಆಪ್ ವಿಶ್ವವಿದ್ಯಾಲಯದಲ್ಲಿ ಬರುವಂತಹ ಸುದ್ದಿ ಸುಳ್ಳು ಎಂಬುದು ಜನರಿಗೆ ತಿಳಿಯಲಿ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವ ವಾತಾವರಣವನ್ನು ಸೃಷ್ಟಿಸಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಪಟ್ಟಣದಲ್ಲಿ ಶಾಸಕ ಯು. ಟಿ. ಖಾದರ್, ಭೀಮಾನಾಯ್ಕ ಹಾಗೂ ಕಾರ್ಯಕರ್ತರು ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ಸೈಕಲ್ ಜಾಥಾ ನಡೆಸಿದರು.

ಓದಿ:ಸುಮಲತಾಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್ ಕುಮಾರಸ್ವಾಮಿ

ABOUT THE AUTHOR

...view details