ಕರ್ನಾಟಕ

karnataka

ಕುಡಿತದ ಚಟಕ್ಕೆ ಬೇಸತ್ತು ಪತಿಯನ್ನೆ ಕೊಲೆ ಮಾಡಿದ ಪತ್ನಿ

By ETV Bharat Karnataka Team

Published : Nov 2, 2023, 3:55 PM IST

ಗಂಡ ಮದ್ಯ ಸೇವಿಸುತ್ತಾನೆಂದು ಆತನನ್ನು ಹೆಂಡತಿ ಹತ್ಯೆಗೈಯ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಕೊಲೆ
ಕೊಲೆ

ಬೆಳಗಾವಿ:ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡನನ್ನು ಹೆಂಡತಿಯೇ ಕೊಲೆ ಮಾಡಿರುವ ಘಟನೆ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಪತಿಗೆನಿದ್ರೆ ಮಾತ್ರೆ ನೀಡಿ, ನಿದ್ದೆ ಹತ್ತಿದ ಬಳಿಕ ಕುತ್ತಿಗೆಗೆ ಹಗ್ಗದಿಂದ‌ ಬಿಗಿದು ಪತ್ನಿ ಮಹಾದೇವಿ ಕರ್ಕಿ ಕೊಲೆ ಮಾಡಿದ್ದಾಳೆ. ಬಾಬು ಕಲ್ಲಪ್ಪ ಕರ್ಕಿ (48) ಕೊಲೆಯಾದ ದುರ್ದೈವಿ.

ನಿನ್ನೆ ಬೆಳಗ್ಗೆಯ ಸಮಯ ಆರೋಪಿ ಪತ್ನಿ ಮಹಾದೇವಿ ಕರ್ಕಿ, 'ಆಕಸ್ಮಿಕವಾಗಿ ಪತಿ ಮೃತ'ರಾಗಿದ್ದಾರೆಂದು ಅಕ್ಕಪಕ್ಕದ ಮನೆಯವರನ್ನು ನಂಬಿಸಲು ಪ್ರಯತ್ನಿಸಿದ್ದಾಳೆ. ಈ ವೇಳೆ, ಮೃತ ಬಾಬು ಕುತ್ತಿಗೆಗೆ ಗಾಯವಾಗಿದ್ದು ಗಮನಿಸಿದ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದರು. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ನಂದಗಡ ಪೊಲೀಸರು ಮತ್ತು ಗ್ರಾಮಸ್ಥರ ಮುಂದೆ ಆರೋಪಿ ಮಹಾದೇವಿ ತನ್ನ ಗಂಡ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಕಿರುಕುಳ‌ ತಾಳಲಾರದೇ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇನ್ನು ನಿನ್ನೆ ತಡರಾತ್ರಿ ಆರೋಪಿಯನ್ನು ಬಂಧಿಸಿದ ನಂದಗಡ ಪೊಲೀಸರು, ಖಾನಾಪುರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ. ಸದ್ಯ ಪ್ರಕರಣ ನಂದಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ:Watch.. ಪ್ರಕರಣ ಹಿಂಪಡೆಯಲು ನಿರಾಕರಿಸಿದವನ ಮೇಲೆ ಕಾರು ಹತ್ತಿಸಿ ಹತ್ಯೆ: ಆರೋಪಿಗಳ ಬಂಧಿಸಿದ ಬೆಂಗಳೂರು ಪೊಲೀಸರು

ಇತ್ತೀಚಿನ ಅಪರಾಧ ಪ್ರಕರಣಗಳು...ಬೆಳ್ತಂಗಡಿಯಲ್ಲಿ ತಂದೆಯಿಂದ ಮಗನ ಕೊಲೆ: ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅಕ್ಟೋಬರ್​ 29 ರಂದು ತಂದೆ ಮಗನನ್ನು ಹತ್ಯೆ ಮಾಡಿರುವ ಘಟನೆ ನಡೆದಿತ್ತು. ಮನೆಯಲ್ಲಿ ತಂದೆ ಕೃಷ್ಣಯ್ಯ ಆಚಾರಿ ಎಂಬವರು ಮಲಗಿದ್ದಾಗ ಮಗ ಜಗದೀಶ್ ಆಚಾರಿ (ಮೃತ ವ್ಯಕ್ತಿ) ತಂದೆಯೊಂದಿಗೆ ಯಾವುದೋ ಕಾರಣಕ್ಕೆ ಮಾತು ಆರಂಭಿಸಿ ಮಾತು ಜಗಳಕ್ಕೆ ಮಾರ್ಪಟಿತ್ತು. ಕೊನೆಗೆ ಜಗಳ ಮಗನ ಕುತ್ತಿಗೆಗೆ ಚೂರಿ ಇರಿಯುವ ಮಟ್ಟಿಗೆ ತಾರಕಕ್ಕೆ ಏರಿತ್ತು. ಗಂಭೀರವಾಗಿ ಗಾಯಗೊಂಡ ಜಗದೀಶ್​ನನ್ನು ಮನೆಯವರೇ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಆರೋಪಿ ತಂದೆ ಕೃಷ್ಣಯ್ಯ ಆಚಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಮಂಡ್ಯದಲ್ಲಿ ಆಸ್ತಿಗಾಗಿ ವೃದ್ಧೆ ಹತ್ಯೆ: ಅಕ್ಟೋಬರ್​ 26 ರಂದು ಜಿಲ್ಲೆಯಹೆಬ್ಬಾಳ ಸಮೀಪದ ಹೊರವಲಯದಲ್ಲಿಆಸ್ತಿ ವಿಚಾರಕ್ಕೆ ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ನಡೆದಿತ್ತು. ಕೊಲೆಯಾದ ನಳಿನಿ ರಮೇಶ್ ಎಂಬ ವೃದ್ದೆ ಉದ್ದಿಮೆ ಆರಂಭಿಸಲು ತಮ್ಮ ಕಾಫಿ ಪುಡಿ ಅಂಗಡಿ ಹಾಗೂ ಚಿಕೋರಿ ಕಾರ್ಖಾನೆಯನ್ನು ಬ್ಯಾಂಕ್​​ನಲ್ಲಿ ಅಡಮಾನ ಇಟ್ಟಿದ್ದರು. ಆದರೆ, ಇವರಿಗೆ ಸಾಲ ತೀರಿಸಲು ಸಾಧ್ಯವಾಗದ ಕಾರಣ ಬ್ಯಾಂಕ್​ ಕಾರ್ಖಾನೆಯನ್ನು ವಶಕ್ಕೆ ಪಡೆದಿತ್ತು. ಇದರಿಂದ ಮಂಡ್ಯ ಬಿಟ್ಟು ಮೈಸೂರಿನ ವೃದ್ಧಾಶ್ರಮದಲ್ಲಿ ವೃದ್ದೆ ವಾಸವಿದ್ದರು. ಇದಾಗಿ ಹತ್ಯೆ ನಡೆಯುವ ಸ್ವಲ್ಪ ದಿನದ ಹಿಂದೆ ಅಲ್ಲಿಂದ ತಮ್ಮ ಕಾರ್ಖಾನೆಯ ಮನೆಯಲ್ಲಿ ವಾಸವಿದ್ದರು. ಇಲ್ಲಿ ವೃದ್ದೆಯನ್ನು ಟವೆಲ್​ನಿಂದ ದುಷ್ಕರ್ಮಿಗಳು ಕೊಲೆಗೈಯಿದ್ದರು. ಈ ಪ್ರಕರಣ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ತನಿಖೆ ನಡೆಯುತ್ತಿದೆ.

ABOUT THE AUTHOR

...view details