ಕರ್ನಾಟಕ

karnataka

ಅಧಿಕಾರಿ ನಡಿಗೆ ಗ್ರಾಮದ ಕಡೆಗೆ: ಸಮಯಕ್ಕೆ ಬರದ ಅಧಿಕಾರಿಗಳ ನಡೆಗೆ ಗ್ರಾಮಸ್ಥರ ಅಸಮಾಧಾನ

By

Published : Mar 21, 2021, 5:38 AM IST

ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಾದ ಕಾರ್ಯಕ್ರಮ ಒಂದು ಗಂಟೆ ಸಮೀಪದಲ್ಲಿ ಪ್ರಾರಂಭವಾಯಿತು. ಅಲ್ಲದೆ ಕೆಲವು ಇಲಾಖೆಗಳ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪ್ರಾರಂಭಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ
ಅಧಿಕಾರಿ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ

ಅಥಣಿ: ರಾಜ್ಯ ಸರ್ಕಾರ ಬಹು ನಿರೀಕ್ಷಿತ ಅಧಿಕಾರಿಗಳ ನಡೆ ಗ್ರಾಮದ ಕಡೆ ಎಂಬ ವಿನೂತನ ಕಾರ್ಯಕ್ರಮ ಎರಡನೇ ತಿಂಗಳು ಕೋಕಟನೂರ ಗ್ರಾಮದಲ್ಲಿ ನಡೆಯಿತು. ಅಧಿಕಾರಿಗಳು ಸಮಯಕ್ಕೆ ಬಾರದ ಹಾಗೂ ಸಮಸ್ಯೆಯ ಪರಿಹಾರ ನೀಡುವ ಇಲಾಖೆ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.

ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಾದ ಕಾರ್ಯಕ್ರಮ ಒಂದು ಗಂಟೆ ಸಮೀಪದಲ್ಲಿ ಪ್ರಾರಂಭವಾಯಿತು. ಅಲ್ಲದೆ ಕೆಲವು ಇಲಾಖೆಗಳ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪ್ರಾರಂಭಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದರು. ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಸಮಯಕ್ಕೆ ಸರಿಯಾಗಿ ಬಂದರೂ, ಕೆಲವು ಇಲಾಖೆಯ ಅಧಿಕಾರಿಗಳು ತಮಗೆ ತೋಚಿದ ಸಮಯಕ್ಕೆ ಬರುತ್ತಿದ್ದು ಜನರು ಅವರ ದಾರಿ ಕಾದು ಕಾದು ಮನೆಗೆ ತೆರಳಿ ಕಾರ್ಯಕ್ರಮ ಖಾಲಿ ಖಾಲಿಯಾಗಿ ಕಂಡು ಬಂತು.

ಅಧಿಕಾರಿ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ

ಜನರ ಆರೋಪಕ್ಕೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ, ಅಥಣಿ ಹಾಗೂ ಕಾಗವಾಡ ಅವಳಿ ತಾಲೂಕು ಇರುವುದರಿಂದಾಗಿ ಕೆಲವು ಅಧಿಕಾರಿಗಗಳು ಅಥಣಿಗೆ ಮತ್ತೆ ಕೆಲವರು ಕಾಗವಾಡ ತಾಲೂಕಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಕಾರ್ಯಕ್ರಮ ವಿಳಂಬವಾಗಿದೆ ಎಂದು ತಿಳಿಸಿದರು.

ಇಂದು ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಯುತ್ತಿದೆ. ಈ ಗ್ರಾಮದಲ್ಲಿ ಅನೇಕರು ತಮ್ಮ ಸಮಸ್ಯೆ ಹೇಳಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿದೆ. ತ್ವರಿತಗತಿಯಲ್ಲಿ ನೀರಿನ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು. ಹಾಗೂ ಕೆಲವು ಅಧಿಕಾರಿಗಳು ಗ್ರಾಮ ವಾಸ್ತವ್ಯ ಸಭೆಗೆ ಗೈರಾಗಿರುವರಿಗೆ ನೋಟಿಸ್ ನೀಡಲಾಗುವುದು ಎಂದು ಭರವಸೆ ನೀಡಿದರು.

ABOUT THE AUTHOR

...view details