ಕರ್ನಾಟಕ

karnataka

ಬೆಳಗಾವಿ: ಅಥಣಿ ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರ ಸಾವು

By

Published : May 30, 2023, 8:22 PM IST

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸಿಡಿಲು ಬಡಿದು ಅಮೂಲ್ ಜಯಸಿಂಗ ಕಾನಡೆ (24) ಮತ್ತು ವಿಠ್ಠಬಾಯಿ ಮಹದೇವ ಕಾಮಕರ (50) ಎಂಬವರು ಸಾವಪ್ಪಿದ್ದಾರೆ.

two-killed-in-lightning-strike-in-athani-taluk
ಬೆಳಗಾವಿ: ಅಥಣಿ ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವು

ಚಿಕ್ಕೋಡಿ (ಬೆಳಗಾವಿ):ರಾಜ್ಯದಲ್ಲಿ ಮುಂಗಾರು ಮಳೆ ಆಗಮನದ ಮೊದಲೇ ಗುಡಗು, ಸಿಡಿಲಿನ ಅಬ್ಬರ ಹೆಚ್ಚಾಗಿದ್ದು, ಸಂಜೆ ಸುರಿದ ಭಾರಿ ಮಳೆಗೆ ಅಥಣಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ತಾಲೂಕಿನಲ್ಲಿ ಪ್ರತ್ಯೇಕ ಗ್ರಾಮದಲ್ಲಿ ಸಿಡಿಲು ಬಡೆದು ಒಬ್ಬ ಯುವಕ, ಒರ್ವ ಮಹಿಳೆ ಮೃತ ಪಟ್ಟಿದ್ದಾರೆ.

ತಾಲೂಕಿನ ಕೋಹಳ್ಳಿ ಗ್ರಾಮದ ಕೆಸ್ಕರಿ ದಡ್ಡಿ ನಿವಾಸಿಯಾದ ಅಮೂಲ್ ಜಯಸಿಂಗ ಕಾನಡೆ (24) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ತೋಟದಲ್ಲಿ ಆಡುಗಳನ್ನು ಮೇಯಿಸಲು ಹೋಗಿದ್ದ ಸಮಯದಲ್ಲಿ ಯುವಕನಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ ಅಥಣಿ ತಾಲೂಕಿನ ದೇಸಾರಹಟ್ಟಿ ಗ್ರಾಮದಲ್ಲಿ ವಿಠ್ಠಬಾಯಿ ಮಹದೇವ ಕಾಮಕರ (50) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಡಿಯುಡಿ ಗ್ರಾಮದ ನಿವಾಸಿಯಾಗಿದ್ದು, ಅಥಣಿ ತಾಲೂಕಿನ ದೇಸಾರಹಟ್ಟಿ ಗ್ರಾಮದ ಮಗಳ ಮನೆಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಳೆದ ಸೋಮವಾರ ಮತ್ತು ಮಂಗಳವಾರ ಬೆಳಗಾವಿ ನಗರದಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ಹಿನ್ನೆಲೆ ಹಲವು ಅವಾಂತರ ಸೃಷ್ಟಿಸಿತ್ತು. ಅನೇಕ ಕಡೆಗಳಲ್ಲಿ ಮರಗಳು ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಇದರ ಪರಿಣಾಮ‌ ನಗರದ ಬಹಳಷ್ಟು ಪ್ರದೇಶಗಳಲ್ಲಿನ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಶಿವಮೊಗ್ಗದಲ್ಲಿ ಸಿಡಿಲು ಬಡಿದು ಮಹಿಳೆ ಸಾವು:ಕುರಿಗಳಿಗೆ ಮೇವು ತರಲು ಹೊರಗಡೆ ಹೋದಾಗ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ನಗರದ ಆಶ್ರಯ ಬಡಾವಣೆಯ ನಿವಾಸಿ ಲಕ್ಷ್ಮೀ ಬಾಯಿ (28) ಮೃತ ದುರ್ದೈವಿ. ಸ್ಥಳಕ್ಕೆ ವಿನೋಬ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಮರದ ಕೆಳಗೆ ಆಶ್ರಯ ಪಡೆದಿದ್ದ 7 ಜನ ಬರಸಿಡಿಲು ಬಡಿದು ಸಾವು: ಇತ್ತೀಚಿಗೆ ಮಹಾರಾಷ್ಟ್ರದಲ್ಲಿ 48 ಗಂಟೆಗಳಲ್ಲಿ ಕಾಲ ರಾಜ್ಯಾದ್ಯಂತ ಅಕಾಲಿಕ ಮಳೆ ಸುರಿದ್ದರಿಂದ ಸುಮಾರು 13 ಜನರು ಮೃತ ಪಟ್ಟಿರುವ ಘಟನೆ ನಡೆದಿತ್ತು, ನೀರಿನಲ್ಲಿ ಮುಳುಗಿ ಒಬ್ಬರು ಸಾವನ್ನಪ್ಪಿದ್ದಾರೆ. ಅಕೋಲಾದ ಪರಸ್‌ಗಾಂವ್​ ಗ್ರಾಮದಲ್ಲಿರುವ ಬಾಬೂಜಿ ಮಹಾರಾಜ್ ಸಂಸ್ಥಾನದ ಆಶ್ರಮದಲ್ಲಿ 150 ವರ್ಷಗಳಷ್ಟು ಹಳೆಯದಾದ ಬೇವಿನ ಮರದ ಕೆಳಗೆ ಆಶ್ರಯ ಪಡೆದಿದ್ದ 7 ಜನರು ಭಕ್ತರು ಬರಸಿಡಿಲಿನಿಂದ ಬಡಿದು ಮೃತ ಪಟ್ಟಿದ್ದರು.

ಮಳೆ ಆರಂಭಕ್ಕೆ ದಿನಗಣನೆ: ಕರ್ನಾಟಕದಲ್ಲಿ ಪೂರ್ವ ಮುಂಗಾರು ಗುಡುಗು, ಸಿಡಿಲಿನ ಸಮೇತ ಅಬ್ಬರಿಸುತ್ತಿದೆ. ಜೂನ್ 1ರ ವರೆಗೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವ ಮುಂಗಾರಿನ ಪರಿಣಾಮ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ:ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ: ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಭಾರೀ ಮಳೆ..

ABOUT THE AUTHOR

...view details