ಕರ್ನಾಟಕ

karnataka

ಚಿಕ್ಕೋಡಿಯಲ್ಲಿ ಬಿಡಾಡಿ ದನಗಳ ಕಾಟ.. ವಾಹನ ಸವಾರರಿಗೆ ಸಂಕಷ್ಟ

By

Published : Dec 18, 2019, 11:22 PM IST

ನಗರದಲ್ಲಿ ಬಿಡಾಡಿ ದನಕರುಗಳ ಸಂಖ್ಯೆ ಹೆಚ್ಚಾಗಿದೆ. ವಾಹನ ಸವಾರರಿಗಂತೂ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಸೂಕ್ರ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಚಿಕ್ಕೋಡಿಯಲ್ಲಿ ಬಿಡಾಡಿ ದನಗಳ ಕಾಟ
Street cow problem in chikodi

ಚಿಕ್ಕೋಡಿ :ನಗರದಲ್ಲಿ ಬಿಡಾಡಿ ದನಕರುಗಳ ಸಂಖ್ಯೆ ಹೆಚ್ಚಾಗಿದೆ. ವಾಹನ ಸವಾರರಿಗಂತೂ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಸೂಕ್ರ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಚಿಕ್ಕೋಡಿಯಲ್ಲಿ ಬಿಡಾಡಿ ದನಗಳ ಕಾಟ..

ನಗರದ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್ ಸೇರಿ ವಿವಿಧ ಕಡೆಗಳಲ್ಲಿ ಈ ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ. ವಾಹನ ಸವಾರರೂ ಜೀವದ ಮೇಲೆ ಹಂಗೂ ಬಿಟ್ಟು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಜನಸಂದಣಿ ಇರುವ ರಸ್ತೆಗಳಲ್ಲಿಯೇ ಅಡ್ಡಾದಿಡ್ಡಿಯಾಗಿ ಸಂಚರಿಸುವ ಇವುಗಳು ಒಮ್ಮೊಮ್ಮೆ ರಸ್ತೆ ಮಧ್ಯೆಯೇ ಕುಳಿತು ಬಿಡುತ್ತವೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಸವಾರರಿಗೆ ಕಂಟಕ:ರಾತ್ರಿ ಹೊತ್ತು ದನಕರುಗಳು ರಸ್ತೆ ಮಧ್ಯೆಯೇ ಕುಳಿತು ಬಿಡುತ್ತವೆ ಅಥವಾ ಕಾಳಗ ನಡೆಸಲು ಪ್ರಾರಂಭಿಸುತ್ತವೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಇವುಗಳನ್ನು ಓಡಿಸಲು ಜನರು ಹರಸಹಾಸ ಪಟ್ಟರೂ ಯಾವುದೇ ಪ್ರಯೋಜನವಾಗುವುದಿಲ್ಲ.

ಕಣ್ಮುಚ್ಚಿ ಕುಳಿತ ಪುರಸಭೆ:ಬಿಡಾಡಿ ದನಕರುಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ತೊಂದರೆ ಅನುಭವಿಸುತ್ತಿದ್ದರೂ ಪುರಸಭೆ ಮಾತ್ರ ತಮಗೆ ಸಂಬಂಧ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತ್ತಿರುವ ವಿಪರ್ಯಾಸವೇ ಸರಿ.

Intro:ಬಿಡಾಡಿ ದನಗಳ ಕಾಟ : ಚಿಕ್ಕೋಡಿ ವಾಹನ ಸವಾರರಿಗೆ ಕಂಟಕBody:

ಚಿಕ್ಕೋಡಿ :

ಚಿಕ್ಕೋಡಿ ನಗರದಲ್ಲಿ ಬಿಡಾಡಿ ದನಕರುಗಳ ಸಂಖ್ಯೆ ಹೆಚ್ಚಾಗಿದ್ದು, ಎಲ್ಲೆಡೆ ಹಿಂಡು ಹಿಂಡಾಗಿ ಕಂಡುಬರುತ್ತಿವೆ. ಇವುಗಳು ಪ್ರಮುಖ ರಸ್ತೆಗಳ ಮಧ್ಯೆಯೇ ಠಿಕಾಣಿ ಹೂಡುವುದರಿಂದ ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ಸವಾರರ ಜೀವಕ್ಕೂ ಕಂಟಕವಾಗಿದೆ.

ಚಿಕ್ಕೋಡಿಯ ಬಸ್ ತಂಗುದಾಣದಿಂದ ಬಸವೇಶ್ವರ ಸರ್ಕಲ್ ವರೆಗೆ ವಾಹನ ಸವಾರರೂ ಸಂಚರಿಸಬೇಕಾದರೆ ಜೀವದ ಮೇಲೆ ಹಂಗೂ ಬಿಟ್ಟು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ದನಕರುಗಳ ಹಿಂಡು ನಿತ್ಯ ಎಲ್ಲೆಂದರಲ್ಲಿ ದಿಕ್ಕಾಪಾಲಾಗಿ ಸಂಚರಿಸುತ್ತಿವೆ. ಜನಸಂದಣಿ ಇರುವ ರಸ್ತೆಗಳಲ್ಲಿಯೇ ಅಡ್ಡಾದಿಡ್ಡಿಯಾಗಿ ಸಂಚರಿಸುವ ಇವುಗಳು ಒಮ್ಮೊಮ್ಮೆ ರಸ್ತೆ ಮಧ್ಯೆಯೇ ಕುಳಿತುಬಿಡುತ್ತವೆ.

ಸವಾರರಿಗೆ ಕಂಟಕ :

ರಾತ್ರಿ ಹೊತ್ತು ದನಕರುಗಳು ರಸ್ತೆ ಮಧ್ಯೆಯೇ ಆರಾಮವಾಗಿ ಕುಳಿತುಬಿಡುತ್ತವೆ. ಒಮ್ಮೊಮ್ಮೆ ತಮ್ಮಷ್ಟಕ್ಕೆ ತಾವೇ ಕಾಳಗ ಹಿಡಿದರೆ ಅಲ್ಲಿರುವ ಸಾರ್ವಜನಿಕರು ಅವುಗಳನ್ನು ಒಂದೆಡೆ ಕರೆದೊಯಲು ಯತ್ನಿಸಿದರೂ ಅವು ಕೇಳದೆ ಇರುವುದರಿಂದ ಸಾರ್ವಜನಿಕರಿಗೆ ತೀರ್ವ ಸಂಕಷ್ಟ ಅನುಭವಿಸಬೇಕಾದಂತ ಸ್ಥಿತಿ ನಿರ್ಮಾಣವಾಗಿದೆ.

ಕಣ್ಮುಚ್ಚಿ ಕುಳಿತ ಪುರಸಭೆ : ಬಿಡಾಡಿ ದನಕರುಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದರೂ ಪುರಸಭೆ ಮಾತ್ರ ತಮ್ಮಗೆ ಸಂಬಂಧ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದೆ.
ಇವುಗಳಿಗೆ ಕಡಿವಾಣ ಹಾಕದೇ ಹೋದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

ABOUT THE AUTHOR

...view details