ಕರ್ನಾಟಕ

karnataka

ತಿಮ್ಮಪ್ಪ ಮೂರು ತರಹ ಕಾಣುವ ರೀತಿ ರಮೇಶ್ ಜಾರಕಿಹೊಳಿ ಮಾತಾಡ್ತಾರೆ: ಸತೀಶ್ ಜಾರಕಿಹೊಳಿ

By

Published : Dec 15, 2021, 3:44 PM IST

ಈ ಚುನಾವಣೆ ಫಲಿತಾಂಶದಿಂದ ನಮಗೆ ಶಕ್ತಿ ಬಂದಿದೆ. ಈ ಚುನಾವಣೆ ವಿಧಾನಸಭೆಗೆ ಒಂದು ಮೆಟ್ಟಿಲು. ಜನ ನಮ್ಮ ಪರವಾಗಿದ್ದಾರೆ ಕಾಂಗ್ರೆಸ್​​ಗೆ ಹೆಚ್ಚಿನ ಮತ ನೀಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

sathish-jarkiholi-ramesh-jarkiholi-
ರಮೇಶ್ ಜಾರಕಿಹೊಳಿ-ಸತೀಶ್ ಜಾರಕಿಹೊಳಿ

ಬೆಳಗಾವಿ: ತಿರುಪತಿ ತಿಮ್ಮಪ್ಪ ಮೂರು ತರಹ ಕಾಣುವ ರೀತಿಯಲ್ಲಿ ರಮೇಶ್ ಜಾರಕಿಹೊಳಿ ಸಹ ಮೂರು ತರಹ ಮಾತನಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ.

ರಮೇಶ್ ಜಾರಕಿಹೊಳಿ ಕುರಿತು ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವೇಸ್ಟ್​ ಬಾಡಿ ಎಂದ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಂದು ಸರಿ ಗುರು ಅಂತಾರೆ ಒಮ್ಮೆ ನಾನು ಶಿಷ್ಯ ಅಂತಾರೆ. ಬೆಳಗ್ಗೆ ಒಂದು ರೀತಿ, ಸಂಜೆ ಒಂದು ರೀತಿ ಮಾತನಾಡುತ್ತಾರೆ. ಬಿಜೆಪಿಯಲ್ಲಿ ಇದ್ದರೂ ಕೂಡ ಸಿದ್ದರಾಮಯ್ಯ ನಮ್ಮ ಗುರು ಅಂತಾರೆ. ಡಿ.ಕೆ ಶಿವಕುಮಾರ್ ಫ್ರೆಂಡ್ ಅಂತ ಹೇಳ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದರು.

ಬೆಳಗಾವಿ ಪರಿಷತ್ ಫಲಿತಾಂಶ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜನ ನಮ್ಮ ಪರವಾಗಿದ್ದಾರೆ. 2 ಸ್ಥಾನದಲ್ಲಿ ಕಡಿಮೆ ಅಂತರದಿಂದ ಸೋತಿದ್ದೇವೆ. ಈ ಬಾರಿಯ ಚುನಾವಣೆ ನಮ್ಮ ಪರವಾಗಿದೆ. ನಮ್ಮ ಪರವಾಗಿದೆ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ. ಬೆಳಗಾವಿ ಚುನಾವಣೆ ಹಾಗೂ ನಮಗೆ ಶಕ್ತಿ ಬಂದಿದೆ. ಈ ಚುನಾವಣೆ ವಿಧಾನ ಸಭೆಗೆ ಒಂದು ಮೆಟ್ಟಿಲು ಎಂದರು.

ಇದನ್ನೂ ಓದಿ:ಗೆಲ್ಲುವುದೇ ನಮ್ಮ ಗುರಿಯಾಗಿತ್ತು, ಗೆಲುವು ಸಾಧಿಸಿದ್ದೇವೆ: ಲಕ್ಷ್ಮಿ ಹೆಬ್ಬಾಳ್ಕರ್

ABOUT THE AUTHOR

...view details