ಕರ್ನಾಟಕ

karnataka

ಕೃಷ್ಣಾ ನದಿ ನೀರು ಹಂಚಿಕೆ ವಿಚಾರ:  ಸಚಿವ ರಮೇಶ್ ಜಾರಕಿಹೊಳಿ ಏನಂದ್ರು..?

By

Published : May 18, 2020, 4:14 PM IST

ಪ್ರತಿವರ್ಷ ಬೇಸಿಗೆಯಲ್ಲಿ ಉಂಟಾಗುವ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಈ ಕುರಿತು ಮಹಾರಾಷ್ಟ್ರ ಸಚಿವರ ಜತೆಗೆ ಈಗಾಗಲೇ ಚರ್ಚಿಸಲಾಗಿದೆ ಎಂದಿದ್ದಾರೆ.

Ramesh Jarkiholi reaction on river water allocation between Karnataka and Maharashtra
ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ:ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಮಹಾರಾಷ್ಟ್ರ ಸಚಿವರ ಜತೆಗೆ ಈಗಾಗಲೇ ಮಾತನಾಡಲಾಗಿದ್ದು, ಅತೀ ಶೀಘ್ರದಲ್ಲೇ ಚರ್ಚೆ ನಡೆಸಿ ಪರಿಹಾರ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ ಪಾಟೀಲ್ ಅವರಿಗೆ ಮನವಿ ಮಾಡಿಕೊಂಡಿದ್ದು, ಅವರೇ ಬೆಂಗಳೂರಿಗೆ ಬರಲು ಒಪ್ಪಿದ್ದಾರೆ. ಅಂದಿನ ಸಭೆಯಲ್ಲಿ ಅಥಣಿ, ಜಮಖಂಡಿ ಭಾಗಕ್ಕೆ ನೀರು ಕಲ್ಪಿಸಲು ಮಹಾರಾಷ್ಟ್ರ ಸರ್ಕಾರದ ಬಳಿ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಇದಲ್ಲದೇ ಕಳಸಾ, ಬಂಡೂರಿ ಹಾಗೂ ಮಹದಾಯಿ ಕಾಮಗಾರಿ ಆರಂಭ ವಿಚಾರ ಕುರಿತು ದೆಹಲಿಗೆ ಹೋಗಲು ಈಗ ವಿಮಾನ ಸೌಲಭ್ಯ ಇಲ್ಲ. ಹೀಗಾಗಿ ದೆಹಲಿಗೆ ಹೋಗಲಾಗುತ್ತಿಲ್ಲ. ಶೀಘ್ರದಲ್ಲೇ ರಸ್ತೆಯ ಮೂಲಕವೇ ಅಧಿಕಾರಿಗಳ ಜೊತೆಗೆ ದೆಹಲಿಗೆ ಹೋಗಿ ಕೇಂದ್ರದ ಜತೆಗೆ ಚರ್ಚೆ ಮಾಡುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಜಲಸಂಪನ್ಮೂಲ ಸಚಿವನಾದ ಬಳಿಕ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲ ಜಲಾಶಯಕ್ಕೆ ಭೇಟಿ ಪರಿಶೀಲನೆ ನಡೆಸಿ, ಏನೆಲ್ಲಾ ಕೆಲಸಗಳು ಆಗಬೇಕು ಎಂಬುವುದರ ಕುರಿತು ಚರ್ಚೆ ಮಾಡಿದ್ದೇನೆ. ಗೋಕಾಕ್ ತಾಲೂಕಿನಲ್ಲಿ ಘಟ್ಟಿ ಬಸವಣ್ಣ ಡ್ಯಾಂ ನಿರ್ಮಾಣ ಯೋಜನೆಯಿಂದ ಅರಣ್ಯ ಪ್ರದೇಶ, ಗ್ರಾಮಗಳಿಗೆ ಯಾವುದೇ ಹಾನಿ ಆಗುವುದಿಲ್ಲ. ಅಲ್ಲಿನ ನಿರ್ವಾಣೇಶ್ವರ ದೇವಸ್ಥಾನ ಮುಳುಗಡೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ

ಕುಡಿವ ನೀರು, ಕೆರೆ ತುಂಬುವ ಯೋಜನೆಗೆ ಆದ್ಯತೆ ನೀಡಲಾಗುವುದು, ನವಲಿ ಡ್ಯಾಂ ನಿರ್ಮಾಣಕ್ಕೆ ತೆಲಂಗಾಣ, ಆಂಧ್ರಪ್ರದೇಶ ಸರ್ಕಾರದಿಂದ ಸಹಕಾರ ಸಿಕ್ಕಿದೆ. ಇಲ್ಲದೇ ಕೊರೊನಾ ವೈರಸ್ ಕುರಿತಾಗಿ ಇಂದು ಸಂಜೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಬೆಳಗಾವಿಯ ಗಡಿಯಲ್ಲಿರುವ ನಿಪ್ಪಾಣಿ ಚೆಕ್ ಪೋಸ್ಟ್ ಮತ್ತು ಇತರ ಚೆಕ್ ಪೋಸ್ಟ್​ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಶೀಲನೆ ಮಾಡುವ ಮೂಲಕ ಸಮಸ್ಯೆಗಳಿದ್ದರೆ, ಸ್ಥಳದಲ್ಲೇ ಸ್ಪಂದಿಸುವುದಾಗಿ ಸಚಿವರು ತಿಳಿಸಿದರು.

ABOUT THE AUTHOR

...view details