ಕರ್ನಾಟಕ

karnataka

ಬೆಳಗಾವಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ: ಕುಂದಾನಗರಿಯಲ್ಲಿ ಹರಿದ ನೆತ್ತರು

By

Published : Dec 17, 2020, 12:05 PM IST

Updated : Dec 18, 2020, 11:17 AM IST

ಹಳೆ ಬೆಳಗಾವಿಯ ಅಂಬೇಡ್ಕರ್​ ಗಲ್ಲಿಯ ನಿವಾಸಿ ಜಯಪಾಲ್ ಘರಾನೆ ಎಂಬುವರನ್ನು ದುಷ್ಕರ್ಮಿಗಳು ಮಧ್ಯರಾತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಹಳೆ ಬೆಳಗಾವಿಯ ಅಂಬೇಡ್ಕರ್​ ಗಲ್ಲಿಯ ನಿವಾಸಿ ಜೈಯಪಾಲ್ ಘರಾನೆ
ಹಳೆ ಬೆಳಗಾವಿಯ ಅಂಬೇಡ್ಕರ್​ ಗಲ್ಲಿಯ ನಿವಾಸಿ ಜೈಯಪಾಲ್ ಘರಾನೆ

ಬೆಳಗಾವಿ: ಸಂಬಂಧಿಕರ ಮದುವೆಯೊಂದರ ಅರಿಸಿನ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಳೆ ಬೆಳಗಾವಿಯ ಅಂಬೇಡ್ಕರ್​ ಗಲ್ಲಿಯಲ್ಲಿ ನಡೆದಿದೆ.

ಬೆಳಗಾವಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ

ಇಲ್ಲಿನ ಹಳೆ ಬೆಳಗಾವಿಯ ಅಂಬೇಡ್ಕರ್​ ಗಲ್ಲಿಯ ನಿವಾಸಿ ಜಯಪಾಲ್ ಘರಾನೆ (35) ಕೊಲೆಯಾದ ವ್ಯಕ್ತಿ. ಇವರು ನಿನ್ನೆ ರಾತ್ರಿ ತಮ್ಮ ಸಂಬಂಧಿಕರೊಬ್ಬರ ಮದುವೆಯ ಅರಿಸಿನ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದರು. ಬಳಿಕ ಕೊಲೆಯಾದ ಜಯಪಾಲ್ 12.30ರ ಸುಮಾರಿಗೆ ಮನೆಯಿಂದ ಮತ್ತೆ ಹೊರಗೆ ಹೋಗಿದ್ದಾರೆ. ಆಗ ಅವರನ್ನು ಯಾರೋ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇದನ್ನು ಓದಿ:ಯೋಗೀಶ್​ ಗೌಡ ಹತ್ಯೆ ಪ್ರಕರಣ: ಸಿಬಿಐ ವಿಚಾರಣೆಗೆ ಹಾಜರಾದ ವಿನಯ್ ಸಹೋದರ

ಶಾಹಾಪೂರ ಸಿಪಿಐ ರಾಘವೇಂದ್ರ ಹವಾಲ್ದಾರ್, ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಈ ಕುರಿತು ಶಾಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 18, 2020, 11:17 AM IST

ABOUT THE AUTHOR

...view details