ಕರ್ನಾಟಕ

karnataka

ಚಿಕ್ಕೋಡಿ: ಒಂದು ದಿನದ ನವಜಾತ ಶಿಶುವನ್ನು ಹಳ್ಳದಲ್ಲಿ ಬಿಟ್ಟು ಹೋದ ತಾಯಿ!

By

Published : Feb 14, 2021, 6:46 PM IST

Updated : Feb 14, 2021, 7:34 PM IST

ಖಾನಟ್ಟಿಯಿಂದ ಶಿವಾಪುರಕ್ಕೆ ಹೋಗುವ ದಾರಿ ಮಧ್ಯದ ಹಳ್ಳದಲ್ಲಿ ಮಗುವನ್ನು ತಾಯಿ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ಅಲ್ಲಿಯ ಗ್ರಾಮಸ್ಥರು ಮಗುವನ್ನು ನೋಡಿ ಆರೈಕೆ ಮಾಡುವುದರ ಜೊತೆಗೆ ಮೂಡಲಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

newborn child in the ditch chikkodi news
ಶಿಶುವನ್ನು ಹಳ್ಳದಲ್ಲಿ ಬಿಟ್ಟು ಹೋದ ತಾಯಿ

ಚಿಕ್ಕೋಡಿ:ಒಂದು ದಿನದ ನವಜಾತ ಹಸುಗೂಸನ್ನು ತಾಯಿಯೊಬ್ಬಳು ಹಳ್ಳದಲ್ಲಿ ಬಿಟ್ಟು ಹೋದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಶಿಶುವನ್ನು ಹಳ್ಳದಲ್ಲಿ ಬಿಟ್ಟು ಹೋದ ತಾಯಿ

ಓದಿ: ಬಿ.ವೈ. ವಿಜಯೇಂದ್ರ ಮುಂದಿನ ರಾಜಾಹುಲಿ: ಸಚಿವ‌ ಎಸ್.ಟಿ. ಸೋಮಶೇಖರ್

ಖಾನಟ್ಟಿಯಿಂದ ಶಿವಾಪುರಕ್ಕೆ ಹೋಗುವ ದಾರಿ ಮಧ್ಯದ ಹಳ್ಳದಲ್ಲಿ ಮಗುವನ್ನು ತಾಯಿ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ಅಲ್ಲಿಯ ಗ್ರಾಮಸ್ಥರು ಮಗುವನ್ನು ನೋಡಿ ಆರೈಕೆ ಮಾಡುವುದರ ಜೊತೆಗೆ ಮೂಡಲಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಮೂಡಲಗಿ ಪೊಲೀಸ್ ಠಾಣೆಯ ಪಿಐ ಹಾಲಪ್ಪ ಬಾಲದಂಡಿ ಬಂದು ಮಗುವಿನ ರಕ್ಷಣೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಈಟಿವಿ ಭಾರತಕ್ಕೆ ಮೂಡಲಗಿ ಪಿಐ ಮಾಹಿತಿ ನೀಡಿದರು.

Last Updated : Feb 14, 2021, 7:34 PM IST

ABOUT THE AUTHOR

...view details